IPL 2027 Retention: 'ಯಾರನ್ನೂ ಕೈಬಿಡಬೇಡಿ'.. RCBಯೇ ಎಲ್ಲರ ಕೇಂದ್ರ ಬಿಂದು, ಅಭಿಮಾನಿಗಳ ಬೇಡಿಕೆ, ಆಕಾಶ್ ಚೋಪ್ರಾ ಹೇಳಿದ್ದೇನು?

2026ರ ಐಪಿಎಲ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದ ಆರ್‌ಸಿಬಿ, ಸತತ ಎರಡನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದೀಗ 2027ರ ಆವೃತ್ತಿಯಲ್ಲೂ ಪ್ರಶಸ್ತಿ ಗೆದ್ದು ಹ್ಯಾಟ್ರಿಕ್ ಸಾಧಿಸುವ ಗುರಿ ಹೊಂದಿದೆ.
Ex-India Star's Big Remark On RCB Leaves Fans Stunned
ಆರ್ ಸಿಬಿ ತಂಡ
Updated on: 

ಬೆಂಗಳೂರು: ಐಪಿಎಲ್ 2027ರ ಆಟಗಾರರ ರಿಟೆನ್ಷನ್ ಪಟ್ಟಿ ಪ್ರಕಟಿಸಲು ಎಲ್ಲಾ 10 ಫ್ರಾಂಚೈಸಿಗಳು ಸಜ್ಜಾಗಿದ್ದು, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಆಟಗಾರರ ಉಳಿಸಿಕೊಳ್ಳುವಿಕೆ ಬಗ್ಗೆ ಚರ್ಚೆ ಜೋರಾಗಿದೆ.

ತಂಡದಲ್ಲಿ ದೊಡ್ಡ ಮಟ್ಟದ ಬದಲಾವಣೆ ಮಾಡುವ ಅಗತ್ಯವಿಲ್ಲ ಎಂದು ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

2026ರ ಐಪಿಎಲ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದ ಆರ್‌ಸಿಬಿ, ಸತತ ಎರಡನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದೀಗ 2027ರ ಆವೃತ್ತಿಯಲ್ಲೂ ಪ್ರಶಸ್ತಿ ಗೆದ್ದು ಹ್ಯಾಟ್ರಿಕ್ ಸಾಧಿಸುವ ಗುರಿ ಹೊಂದಿದೆ.

ಈ ಹಿನ್ನೆಲೆಯಲ್ಲಿ ತಂಡದ ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳಬೇಕು ಎಂದು ಆಕಾಶ್ ಚೋಪ್ರಾ ಸಲಹೆ ನೀಡಿದ್ದಾರೆ. ಈಗಾಗಲೇ ಉತ್ತಮ ಪ್ರದರ್ಶನ ನೀಡಿರುವ ತಂಡದ ಸಂಯೋಜನೆಯನ್ನು ಅನಗತ್ಯವಾಗಿ ಬದಲಾಯಿಸುವ ಅಗತ್ಯವಿಲ್ಲ ಎಂಬುದು ಅವರ ಅಭಿಪ್ರಾಯ.

Ex-India Star's Big Remark On RCB Leaves Fans Stunned
IPL 2027ರ ಹರಾಜಿಗೂ ಮುನ್ನ ಧೋನಿಯನ್ನು ತಂಡದಿಂದ ಕೈಬಿಡಿ; CSKಗೆ ಮಾಜಿ ಆಟಗಾರ ಆರ್ ಅಶ್ವಿನ್ ಸಲಹೆ!

ರೊಮಾರಿಯೋ ಶೆಫರ್ಡ್‌ಗೆ ಬೆಂಬಲ

ಆರ್‌ಸಿಬಿ ತಂಡದ ಆಟಗಾರ ರೊಮಾರಿಯೋ ಶೆಫರ್ಡ್ ಅವರನ್ನು ಉಳಿಸಿಕೊಳ್ಳುವ ಬಗ್ಗೆಯೂ ಆಕಾಶ್ ಚೋಪ್ರಾ ಬೆಂಬಲ ವ್ಯಕ್ತಪಡಿಸಿದ್ದಾರೆ. ಶೆಫರ್ಡ್ ಅವರ ಪ್ರದರ್ಶನದಲ್ಲಿ ಸ್ಥಿರತೆ ಇಲ್ಲದಿದ್ದರೂ, ಅವರು ಉತ್ತಮವಾಗಿ ಆಡಿದಾಗ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಆಟಗಾರ ಎಂದು ಚೋಪ್ರಾ ಹೇಳಿದ್ದಾರೆ. ಅದರಲ್ಲೂ ಕೇವಲ 1.5 ಕೋಟಿ ರೂ. ಮೂಲ ಬೆಲೆಗೆ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವುದು ಸೂಕ್ತ ಎಂದಿದ್ದಾರೆ.

"ಆರ್‌ಸಿಬಿ ತಂಡದಲ್ಲಿ ನಾಲ್ಕನೇ ವಿದೇಶಿ ಆಟಗಾರನ ಸ್ಥಾನವೇ ಸ್ವಲ್ಪ ದುರ್ಬಲವಾಗಿತ್ತು. ಆದರೂ ತಂಡ ಚಾಂಪಿಯನ್ ಆಯಿತು. ರೊಮಾರಿಯೋ ಶೆಫರ್ಡ್ ಕೆಲವೊಮ್ಮೆ ಉತ್ತಮವಾಗಿ ಆಡುತ್ತಾರೆ, ಕೆಲವೊಮ್ಮೆ ನಿರೀಕ್ಷಿತ ಪ್ರದರ್ಶನ ನೀಡುವುದಿಲ್ಲ. ಆದರೆ ಅವರು ಲಯ ಕಂಡುಕೊಂಡರೆ ಅತ್ಯುತ್ತಮ ಆಟಗಾರನಾಗಬಲ್ಲರು.

ಅವರ ಬೆಲೆ ಕೇವಲ 1.5 ಕೋಟಿ ರೂ. ಆಗಿರುವುದರಿಂದ ತಂಡದ ಹಣಕಾಸಿನ ಮೇಲೆ ಹೆಚ್ಚಿನ ಹೊರೆ ಬೀಳುವುದಿಲ್ಲ. ಒಂದು ವೇಳೆ ಅವರ ಬೆಲೆ 15 ಕೋಟಿ ರೂ. ಆಗಿದ್ದರೆ ಅವರನ್ನು ಬಿಡುಗಡೆ ಮಾಡುವಂತೆ ಹೇಳುತ್ತಿದ್ದೆ. ಆದರೆ ಈಗಿನ ಬೆಲೆಗೆ ಅವರನ್ನು ಉಳಿಸಿಕೊಳ್ಳುವುದೇ ಉತ್ತಮ. ಚೆನ್ನಾಗಿ ಕೆಲಸ ಮಾಡುತ್ತಿರುವ ತಂಡದಲ್ಲಿ ಅನಗತ್ಯ ಬದಲಾವಣೆ ಮಾಡುವ ಅಗತ್ಯವೇನಿದೆ?" ಎಂದು ಆಕಾಶ್ ಚೋಪ್ರಾ ಜಿಯೋಸ್ಟಾರ್‌ನಲ್ಲಿ ಹೇಳಿದ್ದಾರೆ.

ಆರ್‌ಸಿಬಿ ಅಭಿಮಾನಿಗಳಲ್ಲಿ ಕುತೂಹಲ

ಐಪಿಎಲ್ 2027ರ ರಿಟೆನ್ಷನ್‌ಗೆ ಮುನ್ನ ಹಲವು ತಂಡಗಳಲ್ಲಿ ಮಹತ್ವದ ಆಟಗಾರರ ವರ್ಗಾವಣೆ ನಡೆದಿರುವ ಬಗ್ಗೆ ವರದಿಗಳು ಪ್ರಕಟವಾಗಿವೆ.

ರಾಜಸ್ಥಾನ್ ರಾಯಲ್ಸ್‌ನಿಂದ ಯಶಸ್ವಿ ಜೈಸ್ವಾಲ್ ಹೊರಬರುವ ಸಾಧ್ಯತೆ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಆದರೆ, ಆರ್‌ಸಿಬಿ ತನ್ನ ಪ್ರಮುಖ ಆಟಗಾರರನ್ನು ಉಳಿಸಿಕೊಂಡು ತಂಡದ ಸಂಯೋಜನೆಯನ್ನು ಮುಂದುವರಿಸಬೇಕು ಎಂಬುದು ಆಕಾಶ್ ಚೋಪ್ರಾ ಅಭಿಪ್ರಾಯ.

ಇದೀಗ ಆರ್‌ಸಿಬಿ ಯಾವ ಆಟಗಾರರನ್ನು ಉಳಿಸಿಕೊಳ್ಳಲಿದೆ ಎಂಬುದನ್ನು ತಿಳಿಯಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X