ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಮಾಜಿ ಕ್ರಿಕೆಟಿಗ ಶಿಖರ್ ಧವನ್; 'ಅದ್ಭುತ ದರ್ಶನ', ದೇಗುಲದ ವ್ಯವಸ್ಥೆಗೆ ಫಿದಾ-Video

ಪತ್ನಿ ಸೋಫಿ ಶೈನ್ ಸಮೇತರಾಗಿ ತಿರುಮಲ ಬೆಟ್ಟಕ್ಕೆ ತೆರಳಿದ ಶಿಖರ್ ಧವನ್, ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ತಮ್ಮ ಅನುಭವವನ್ನು ಹಂಚಿಕೊಂಡ ಅವರು, ತಮಗೆ ಅತ್ಯಂತ ಉತ್ತಮ ಹಾಗೂ ಅದ್ಭುತ ದರ್ಶನ..
Shikhar Dhawan offers prayers at the Tirumala temple in Tirupati
ಪತ್ನಿ ಸಮೇತ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಮಾಜಿ ಕ್ರಿಕೆಟಿಗ ಶಿಖರ್ ಧವನ್
Updated on: 

ತಿರುಪತಿ: ಮಾಜಿ ಭಾರತ ಕ್ರಿಕೆಟಿಗ ಶಿಖರ್ ಧವನ್ ತಿರುಪತಿಯ ಪ್ರಸಿದ್ಧ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದಿದ್ದಾರೆ.

ಪತ್ನಿ ಸೋಫಿ ಶೈನ್ ಸಮೇತರಾಗಿ ತಿರುಮಲ ಬೆಟ್ಟಕ್ಕೆ ತೆರಳಿದ ಶಿಖರ್ ಧವನ್, ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ತಮ್ಮ ಅನುಭವವನ್ನು ಹಂಚಿಕೊಂಡ ಅವರು, ತಮಗೆ ಅತ್ಯಂತ ಉತ್ತಮ ಹಾಗೂ ಅದ್ಭುತ ದರ್ಶನ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.

“ನನಗೆ ತುಂಬಾ ಅದ್ಭುತವಾದ ದರ್ಶನವಾಯಿತು. ಇಲ್ಲಿನ ಆಡಳಿತ ಮಂಡಳಿ ಅತ್ಯುತ್ತಮ ವ್ಯವಸ್ಥೆ ಮಾಡಿದೆ. ಶ್ರೀ ತಿರುಪತಿ ದೇವರ ಉತ್ತಮ ದರ್ಶನ ಪಡೆದಿರುವುದಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ” ಎಂದು ಶಿಖರ್ ಧವನ್ ಹೇಳಿದರು.

ತಿರುಮಲ ದೇವಸ್ಥಾನಕ್ಕೆ ಧವನ್ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ನೋಡಲು ಅಭಿಮಾನಿಗಳು ಕೂಡ ಮುಗಿಬಿದ್ದಿದ್ದರು. ದೇವರ ದರ್ಶನ ಪಡೆದ ಬಳಿಕ ಧವನ್ ಅವರ ಭೇಟಿಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

Shikhar Dhawan offers prayers at the Tirumala temple in Tirupati
ವೈಡ್ ಪ್ಲಸ್ ಸಿಕ್ಸರ್; ಐತಿಹಾಸಿಕ ನೋಬಾಲ್ ಎಸೆದ ಬೌಲರ್, ಕೈಕೈ ಹಿಸುಕಿಕೊಂಡ ನಾಯಕ! ಅಂಪೈರ್ ತೀರ್ಪು ಅಚ್ಚರಿ-video

ಧವನ್‌ ಆಧ್ಯಾತ್ಮಿಕ ವಿಚಾರಗಳಲ್ಲಿ ತಮ್ಮ ಆಸಕ್ತಿಯ ಬಗ್ಗೆ ಹಲವು ಬಾರಿ ಮಾತನಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕವೂ ಅವರು ಹಲವು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.

ಭಾರತದ ಪರ ಮೂರು ಮಾದರಿಯ ಕ್ರಿಕೆಟ್‌ನಲ್ಲೂ ಆಡಿರುವ ಶಿಖರ್ ಧವನ್, ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿಜೀವನದಲ್ಲಿ ಹಲವು ಮಹತ್ವದ ಸಾಧನೆಗಳನ್ನು ಮಾಡಿದ್ದಾರೆ.

ಭಾರತ ತಂಡದ ಮಾಜಿ ಆರಂಭಿಕ ಬ್ಯಾಟರ್‌ ಶಿಖರ್‌ ಧವನ್‌ 2024ರ ಸೆಪ್ಟೆಂಬರ್‌ನಲ್ಲಿ ಅಂತಾರಾಷ್ಟ್ರೀಯ ಹಾಗೂ ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಇದರೊಂದಿಗೆ ಒಂದು ದಶಕಕ್ಕೂ ಹೆಚ್ಚು ಕಾಲ ಸಾಗಿದ ಅವರ ಕ್ರಿಕೆಟ್‌ ವೃತ್ತಿಜೀವನಕ್ಕೆ ತೆರೆ ಬಿದ್ದಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com