Hong Kong Sixes 2026: ಭುವನೇಶ್ವರ್ ಕುಮಾರ್ ಬದಲಿಗೆ ಭಾರತ ತಂಡದ ನಾಯಕರಾದ RCB ಆಟಗಾರ ಕೃನಾಲ್ ಪಾಂಡ್ಯ!

ಕೃನಾಲ್ ಅವರು ಐಪಿಎಲ್‌ನಲ್ಲಿನ ಅನುಭವಿ ಆಟಗಾರರು, ಸ್ಫೋಟಕ ಬ್ಯಾಟರ್‌ಗಳು ಮತ್ತು ಆಲ್‌ರೌಂಡರ್‌ಗಳನ್ನು ಒಳಗೊಂಡ ತಂಡವನ್ನು ಮುನ್ನಡೆಸಲಿದ್ದಾರೆ.
Krunal Pandya to lead India at Hong Kong Sixes 2026 as Khejroliya replaces Bhuvneshwar
ಕೃನಾಲ್ ಪಾಂಡ್ಯ
Updated on: 

ಹಾಂಗ್ ಕಾಂಗ್: ಹಾಂಗ್ ಕಾಂಗ್ ಸಿಕ್ಸಸ್ 2026ರ ಟೂರ್ನಿಯಲ್ಲಿ ಭಾರತ ತಂಡದ ನಾಯಕತ್ವದಲ್ಲಿ ಬದಲಾವಣೆಯಾಗಲಿದೆ. ಏಳು ಸದಸ್ಯರ ಭಾರತ ತಂಡದ ನಾಯಕರಾಗಿ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಅವರನ್ನು ನೇಮಿಸಲಾಗಿದೆ. ಭುವನೇಶ್ವರ್ ಕುಮಾರ್ ಅವರು ಅಕ್ಟೋಬರ್ 22 ರಿಂದ ಪ್ರಾರಂಭವಾಗಲಿರುವ ಭಾರತದ ನ್ಯೂಜಿಲೆಂಡ್ ಪ್ರವಾಸಕ್ಕಾಗಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಪಾಂಡ್ಯ ಅವರನ್ನು ನೇಮಿಸಲಾಗಿದೆ.

ಅಕ್ಟೋಬರ್ 30 ರಿಂದ ನವೆಂಬರ್ 1ರವರೆಗೆ ನಡೆಯಲಿರುವ ಟೂರ್ನಮೆಂಟ್‌ಗಾಗಿ, ಗುಜರಾತ್ ಟೈಟಾನ್ಸ್ (GT) ತಂಡದ ವೇಗದ ಬೌಲರ್ ಕುಲ್ವಂತ್ ಖೇಜ್ರೋಲಿಯಾ ಅವರು ಭುವನೇಶ್ವರ್ ಅವರ ಬದಲಿಗೆ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯೊಂದು ತಿಳಿಸಿದೆ.

ಕೃನಾಲ್ ಅವರು ಐಪಿಎಲ್‌ನಲ್ಲಿನ ಅನುಭವಿ ಆಟಗಾರರು, ಸ್ಫೋಟಕ ಬ್ಯಾಟರ್‌ಗಳು ಮತ್ತು ಆಲ್‌ರೌಂಡರ್‌ಗಳನ್ನು ಒಳಗೊಂಡ ತಂಡವನ್ನು ಮುನ್ನಡೆಸಲಿದ್ದಾರೆ. ಈ ತಂಡವು fast-paced six-a-side ಮಾದರಿಗೆ ಹೆಚ್ಚಿನ ಆಳ ಮತ್ತು ಬಲವನ್ನು ಒದಗಿಸಲಿದೆ. ಈ ತಂಡದಲ್ಲಿ ಶಶಾಂಕ್ ಸಿಂಗ್, ರಾಹುಲ್ ತೆವಾಟಿಯಾ, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ಟಿ. ನಟರಾಜನ್ ಮತ್ತು ಕುಲ್ವಂತ್ ಖೇಜ್ರೋಲಿಯಾ ಇದ್ದಾರೆ.

ರಾಷ್ಟ್ರೀಯ ತಂಡಕ್ಕೆ ಭುವನೇಶ್ವರ್ ಆಯ್ಕೆಯಾಗಿರುವುದು ಅವರ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಒಂದು ಮಹತ್ವದ ಘಟ್ಟವಾಗಿದೆ; ನಾಲ್ಕು ವರ್ಷಗಳ ನಂತರ ಈ ಅನುಭವಿ ವೇಗದ ಬೌಲರ್ ಭಾರತ ತಂಡಕ್ಕೆ ಮರಳುತ್ತಿದ್ದಾರೆ. 'ಹಾಂಗ್ ಕಾಂಗ್ ಸಿಕ್ಸಸ್' ಟೂರ್ನಿಯಲ್ಲಿ ಅವರ ಅನುಪಸ್ಥಿತಿ ಎದ್ದು ಕಾಣಲಿದ್ದರೂ, ತಂಡವು ಕೃನಾಲ್ ಅವರ ನಾಯಕತ್ವ ಮತ್ತು ಒಟ್ಟಾರೆ ಆಟಗಾರರ ಅನುಭವದ ಬಲದೊಂದಿಗೆ ಟೂರ್ನಿಯಲ್ಲಿ ಪ್ರಭಾವಶಾಲಿ ಪ್ರದರ್ಶನ ನೀಡಲು ಎದುರು ನೋಡುತ್ತಿದೆ.

Krunal Pandya to lead India at Hong Kong Sixes 2026 as Khejroliya replaces Bhuvneshwar
ಭಾರತ T20 ತಂಡಕ್ಕೆ ಭುವನೇಶ್ವರ್ ಕುಮಾರ್ ಆಯ್ಕೆ; 'ಒಂದೇ ಪದ'ದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಪತ್ನಿ ನೂಪುರ್ ನಗರ್!

ರಾಷ್ಟ್ರೀಯ ತಂಡಕ್ಕೆ ಭುವನೇಶ್ವರ್ ಕುಮಾರ್ ಅವರ ಮರಳುವಿಕೆ ಕುರಿತು ಪ್ರತಿಕ್ರಿಯಿಸಿದ 'ಕ್ರಿಕೆಟ್ ಹಾಂಗ್ ಕಾಂಗ್, ಚೀನಾ'ದ ವಾಣಿಜ್ಯ ಮತ್ತು ಮಾರುಕಟ್ಟೆ ನಿರ್ದೇಶಕ ಅನುರಾಗ್ ಭಟ್ನಾಗರ್, 'ಹಾಂಗ್ ಕಾಂಗ್ ಸಿಕ್ಸಸ್ 2026'ರ ಪಂದ್ಯಾವಳಿಯಲ್ಲಿ ಭುವನೇಶ್ವರ್ ಕುಮಾರ್ ಅವರ ಅನುಪಸ್ಥಿತಿಯನ್ನು ನಾವು ಖಂಡಿತವಾಗಿಯೂ ಅನುಭವಿಸುತ್ತೇವೆ. ಆದರೆ, ಅವರು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರುವುದನ್ನು ಕಂಡು ನಮಗೆ ತುಂಬಾ ಸಂತೋಷವಾಗಿದೆ. ನಾಲ್ಕು ವರ್ಷಗಳ ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಅವರ ಈ ಮರಳುವಿಕೆ ಒಂದು ವಿಶೇಷ ಮೈಲಿಗಲ್ಲಾಗಿದೆ. ಭಾರತದ ನ್ಯೂಜಿಲೆಂಡ್ ಪ್ರವಾಸದಲ್ಲಿ ಅವರು ಯಶಸ್ವಿಯಾಗಲಿ ಎಂದು ನಾವು ಹಾರೈಸುತ್ತೇವೆ. ಭವಿಷ್ಯದಲ್ಲಿ ಅವರನ್ನು ಮತ್ತೆ 'ಹಾಂಗ್ ಕಾಂಗ್ ಸಿಕ್ಸಸ್'ಗೆ ಸ್ವಾಗತಿಸಲು ನಾವು ಎದುರು ನೋಡುತ್ತಿದ್ದೇವೆ' ಎಂದರು.

ಹಾಂಗ್ ಕಾಂಗ್ ಸಿಕ್ಸಸ್ 2026 ಭಾರತ ತಂಡ

ಕೃನಾಲ್ ಪಾಂಡ್ಯ (ನಾಯಕ) – ರಾಯಲ್ ಚಾಲೆಂಜರ್ಸ್ ಬೆಂಗಳೂರು, ಶಶಾಂಕ್ ಸಿಂಗ್ – ಪಂಜಾಬ್ ಕಿಂಗ್ಸ್, ರಾಹುಲ್ ತೆವಾಟಿಯಾ – ಗುಜರಾತ್ ಟೈಟಾನ್ಸ್, ನಿತೀಶ್ ರಾಣಾ – ಡೆಲ್ಲಿ ಕ್ಯಾಪಿಟಲ್ಸ್, ರಾಹುಲ್ ತ್ರಿಪಾಠಿ – ಕೋಲ್ಕತ್ತಾ ನೈಟ್ ರೈಡರ್ಸ್, ಟಿ. ನಟರಾಜನ್ – ಸನ್‌ರೈಸರ್ಸ್ ಹೈದರಾಬಾದ್, ಕುಲ್ವಂತ್ ಖೇಜ್ರೋಲಿಯಾ – ಗುಜರಾತ್ ಟೈಟಾನ್ಸ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com