

ಮುಂದಿನ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ಗೂ ಮುನ್ನ ಸ್ಪರ್ಧಾತ್ಮಕ ಕ್ರಿಕೆಟ್ನಲ್ಲಿ ಭಾರತದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕಾಣಿಸಿಕೊಳ್ಳುವುದು ಬಹುತೇಕ ಸಾಧ್ಯವಿಲ್ಲದಂತಾಗಿದೆ. ವರದಿ ಪ್ರಕಾರ, ಸ್ಟಾರ್ ಆಲ್ರೌಂಡರ್ ಸದ್ಯ ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ಪುನರ್ವಸತಿಯಲ್ಲಿದ್ದಾರೆ. ಸಿಒಇಯಿಂದ ಹೊರಬರುತ್ತಿರುವ ಇತ್ತೀಚಿನ ವೈದ್ಯಕೀಯ ಮೌಲ್ಯಮಾಪನಗಳು ಕಳೆದ 2-3 ವರ್ಷಗಳಿಂದ ಹಲವಾರು ಗಾಯದ ಸಮಸ್ಯೆಗಳನ್ನು ಎದುರಿಸುತ್ತಿರುವ ಆಲ್ರೌಂಡರ್ಗೆ ಮುಂದೆ ದೀರ್ಘ ಮತ್ತು ಎಚ್ಚರಿಕೆಯ ಹಾದಿಯ ಬಗ್ಗೆ ಸುಳಿವು ನೀಡುತ್ತಿವೆ. ಹಾರ್ದಿಕ್ ಮೂರು ವಾರಗಳ ಬಳಿಕವೇ ಲಘು ಜಾಗಿಂಗ್ ಪ್ರಾರಂಬಿಸಬಹುದಾಗಿದೆ ಎಂದು ವರದಿಯಾಗಿದೆ. ಇನ್ನೂ ಎಂಟು ವಾರಗಳ ಅವಧಿಯಲ್ಲಿ ಅವರು ತಮ್ಮ ಓಟವನ್ನು ಕ್ರಮೇಣ ಹೆಚ್ಚಿಸಿಕೊಳ್ಳಬೇಕಾಗುತ್ತದೆ ಎನ್ನಲಾಗಿದೆ.
'ದೈನಿಕ್ ಜಾಗರಣ್' ವರದಿ ಪ್ರಕಾರ, ಹಾರ್ದಿಕ್ ಅವರನ್ನು ಸಂಪೂರ್ಣ ದೈಹಿಕ ಸಾಮರ್ಥ್ಯದ ಸ್ಥಿತಿಗೆ ಮರಳಿಸುವ ಪ್ರಕ್ರಿಯೆಯನ್ನು ಆತುರದಿಂದ ಮಾಡಲು ಸಾಧ್ಯವಿಲ್ಲ ಎಂಬುದನ್ನು ಅರಿತಿರುವ ವೈದ್ಯಕೀಯ ತಂಡವು, ಅವರು ಪಂದ್ಯವನ್ನಾಡಲು ಸಂಪೂರ್ಣ ಸಿದ್ಧರಾಗಲು ಯಾವುದೇ ನಿರ್ದಿಷ್ಟ ಗಡುವನ್ನು ವಿಧಿಸದಿರುವ ವಿವೇಚನೆಯ ನಿರ್ಧಾರ ತೆಗೆದುಕೊಂಡಿದೆ. ವಾಸ್ತವವಾಗಿ, ಇಂಡಿಯನ್ ಪ್ರೀಮಿಯರ್ ಲೀಗ್ (IPL) 2027ರ ಸೀಸನ್ ಆರಂಭವಾಗುವವರೆಗೂ ಹಾರ್ದಿಕ್ ಮೈದಾನದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ.
ನಿರೀಕ್ಷೆಯಂತೆ, ಚೇತರಿಕೆಯ ಈ ಕಾಲಮಿತಿಯಿಂದಾಗಿ ಅವರು ಮುಂಬರುವ ನ್ಯೂಜಿಲೆಂಡ್ ಪ್ರವಾಸದಿಂದ ಸಂಪೂರ್ಣವಾಗಿ ಹೊರಗುಳಿದಿದ್ದಾರೆ. ಮುಂದಿನ ವೇಳಾಪಟ್ಟಿಯನ್ನು ಗಮನಿಸಿದರೆ, ಡಿಸೆಂಬರ್ 13 ರಿಂದ ಪ್ರಾರಂಭವಾಗುವ ಶ್ರೀಲಂಕಾ ವಿರುದ್ಧದ ಸೀಮಿತ ಓವರ್ಗಳ ಸರಣಿ ಅಥವಾ ಜನವರಿ 3 ರಂದು ನಿಗದಿಯಾಗಿರುವ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿ ವೇಳೆಗೆ ಅವರು ಚೇತರಿಸಿಕೊಳ್ಳುವುದು ಬಹುತೇಕ ಅಸಾಧ್ಯ. ಅವರು ಮತ್ತೆ ಕ್ರಿಕೆಟ್ ಆಡಲು ಸಂಪೂರ್ಣವಾಗಿ ಸಿದ್ಧರಾಗುವ ಹೊತ್ತಿಗೆ, ದೇಶೀಯ ಕ್ರಿಕೆಟ್ ವೇಳಾಪಟ್ಟಿಯು ಸಾಕಷ್ಟು ಮುಂದುವರಿದಿರುತ್ತದೆ; ಅಷ್ಟರಲ್ಲಾಗಲೇ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿ ಎರಡೂ ಆ ಆವೃತ್ತಿ ಮುಕ್ತಾಯಗೊಂಡಿರುತ್ತವೆ.
ಜನವರಿ 21 ರಿಂದ ಮಾರ್ಚ್ 3ರವರೆಗೆ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು ನಿರತವಾಗಿರುತ್ತದೆ. ಆದರೆ, ಹಾರ್ದಿಕ್ ಪಾಂಡ್ಯ ಈಗ ಟೆಸ್ಟ್ ಕ್ರಿಕೆಟ್ ಆಡುವುದಿಲ್ಲವಾದ್ದರಿಂದ, ಈ ಅವಧಿಯಲ್ಲಿ ಅವರು ಆಡುವ ಸಾಧ್ಯತೆಯಿಲ್ಲ. ಇದೆಲ್ಲವನ್ನೂ ಗಮನಿಸಿದರೆ ಹಾರ್ದಿಕ್ ಪಾಂಡ್ಯ ಅವರು ಮುಂದಿನ ವರ್ಷ ನಡೆಯಲಿರುವ ಐಪಿಎಲ್ ಮೂಲಕವೇ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳುವ ಸಾಧ್ಯತೆಯಿದೆ. ಆದಾಗ್ಯೂ, ಅವರು ಯಾವ ತಂಡದ ಪರವಾಗಿ ಆಡಲಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ.
ಪಾಂಡ್ಯ ಅವರ ಚೇತರಿಕೆಯ ಪ್ರಕ್ರಿಯೆಯ ಹೊರತಾಗಿ, ಗಾಯಗೊಂಡಿರುವ ಇತರ ಆಟಗಾರರ ವಿಷಯದಲ್ಲಿ ಸಕಾರಾತ್ಮಕ ಬೆಳವಣಿಗೆಗಳು ಕಂಡುಬರುತ್ತಿವೆ. ರಿಷಬ್ ಪಂತ್ ಮುಂದಿನ ವಾರದಿಂದಲೇ ಹಗುರವಾದ ಕೌಶಲ ತರಬೇತಿಯನ್ನು ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಇತ್ತ, ಪಂತ್ ಅವರ ಲಭ್ಯತೆಯ ಕುರಿತಾದ ಅಂತಿಮ ನಿರ್ಧಾರವನ್ನು, ಅವರು ಕಠಿಣವಾದ 'ಮ್ಯಾಚ್ ಸಿಮ್ಯುಲೇಶನ್' ಅವಧಿಗಳನ್ನು ಪೂರೈಸಿದ ನಂತರವಷ್ಟೇ ತೆಗೆದುಕೊಳ್ಳಲಾಗುವುದು.