Cricket: ಇಂಗ್ಲೆಂಡ್ ನಲ್ಲೂ ಪಾಕಿಸ್ತಾನ ಕ್ರಿಕೆಟಿಗರಿಗೆ ಮುಖಭಂಗ, ವಲಸಿಗರೆಂದು ತಪ್ಪಾಗಿ ಭಾವಿಸಿ ಪ್ರತಿಭಟನೆ! ಮುಂದೇನಾಯ್ತು?

ಇಂಗ್ಲೆಂಡ್‌ನ ಹೋಟೆಲ್‌ವೊಂದರಲ್ಲಿ ತಂಗಿದ್ದ ಪಾಕಿಸ್ತಾನದ ಅಂಡರ್-19 ಕ್ರಿಕೆಟ್ ತಂಡವನ್ನು ಆಶ್ರಯ ಕೋರಿ ಬಂದ ವಲಸಿಗರು ಎಂದು ತಪ್ಪಾಗಿ ಭಾವಿಸಿದ ಪ್ರತಿಭಟನಾಕಾರರು ಹೋಟೆಲ್‌ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
Pakistan Team Mistaken For Asylum Seekers In UK By Anti-Immigrant Protestors
ಲಂಡನ್ ನಲ್ಲಿ ಪಾಕ್ ಕ್ರಿಕೆಟಿಗರ ವಿರುದ್ಧ ಪ್ರತಿಭಟನೆ
Updated on

ಲಂಡನ್: ಪಾಕಿಸ್ತಾನ ಕ್ರಿಕೆಟ್ ಗೂ ವಿವಾದಗಳಿಗೂ ಅವಿನಾಭಾವ ನಂಟು.. ಇಂಗ್ಲೆಂಡ್ ನಲ್ಲಿ ಪಾಕ್ ಕ್ರಿಕೆಟಿಗರು ಸ್ಥಳೀಯ ಪ್ರತಿಭಟನಾಕಾರರ ಆಕ್ರೋಶಕ್ಕೆ ತುತ್ತಾದ ಘಟನೆ ವರದಿಯಾಗಿದೆ.

ಹೌದು.. ಬ್ರಿಟನ್‌ನಲ್ಲಿ ನಡೆಯುತ್ತಿರುವ ವಲಸೆ ವಿರೋಧಿ ಪ್ರತಿಭಟನೆಗಳು ಮಂಗಳವಾರ ವಿಚಿತ್ರ ತಿರುವು ಪಡೆದುಕೊಂಡಿವೆ. ದಕ್ಷಿಣ ಇಂಗ್ಲೆಂಡ್‌ನ ಹೋಟೆಲ್‌ವೊಂದರಲ್ಲಿ ತಂಗಿದ್ದ ಪಾಕಿಸ್ತಾನದ ಅಂಡರ್-19 ಕ್ರಿಕೆಟ್ ತಂಡವನ್ನು ಆಶ್ರಯ ಕೋರಿ ಬಂದ ವಲಸಿಗರು ಎಂದು ತಪ್ಪಾಗಿ ಭಾವಿಸಿದ ಪ್ರತಿಭಟನಾಕಾರರು ಹೋಟೆಲ್‌ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

ಮಂಗಳವಾರ ಸಂಜೆ ಪೋರ್ಟ್ಸ್‌ಮೌತ್‌ನಲ್ಲಿ ಈ ಘಟನೆ ನಡೆದಿದೆ. ಬಂದರು ನಗರದ ಬಳಿ ವಲಸಿಗರನ್ನು ಹೊತ್ತ ದೋಣಿಗಳು ಬಂದಿದ್ದಕ್ಕೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿ, ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದ ಕೇವಲ 48 ಗಂಟೆಗಳ ಬಳಿಕ ಈ ಘಟನೆ ನಡೆದಿದೆ.

ಏತನ್ಮಧ್ಯೆ, ಪಾಕಿಸ್ತಾನದ ಹಿರಿಯ ಪುರುಷರ ಕ್ರಿಕೆಟ್ ತಂಡವೂ ಇಂಗ್ಲೆಂಡ್ ಪ್ರವಾಸದಲ್ಲಿದ್ದು, ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ಮೂರನೇ ಟೆಸ್ಟ್ ಪಂದ್ಯ ಆಡುತ್ತಿದೆ.

Pakistan Team Mistaken For Asylum Seekers In UK By Anti-Immigrant Protestors
'ನಮಗೆ ಬೇಡ, ಭಾರತವನ್ನು ಸೋಲಿಸಿ ಸಾಕು': ಕೋಚ್ ವಹಾಬ್ ರಿಯಾಜ್‌ಗೆ ವಿಶೇಷ ವಿನಂತಿ ಮಾಡಿದ ಪಾಕ್ ಅಭಿಮಾನಿ!

ಲಂಡನ್ ನಲ್ಲಿ ತಾರಕ್ಕೇರಿದ ವಲಸಿಗರ ವಿರೋಧಿ ಪ್ರತಿಭಟನೆ

ಬ್ರಿಟನ್‌ನಲ್ಲಿ ವಲಸೆ ಹಾಗೂ ಯುರೋಪ್‌ನಿಂದ ಸಣ್ಣ ದೋಣಿಗಳ ಮೂಲಕ ಪ್ರತಿವರ್ಷ ಸಾವಿರಾರು ಆಶ್ರಯಾರ್ಥಿಗಳು ಆಗಮಿಸುವ ವಿಚಾರ ರಾಜಕೀಯವಾಗಿ ಅತ್ಯಂತ ಸೂಕ್ಷ್ಮ ವಿಷಯವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಈ ವಿಚಾರವಾಗಿ ಹಲವು ಪ್ರತಿಭಟನೆಗಳು ನಡೆದಿದ್ದು, ಕೆಲವು ಪ್ರತಿಭಟನೆಗಳು ಹಿಂಸಾತ್ಮಕ ಸ್ವರೂಪವನ್ನೂ ಪಡೆದಿವೆ.

ಮಂಗಳವಾರದ ಘಟನೆಗೆ ಸಂಬಂಧಿಸಿದಂತೆ, ಏಷ್ಯನ್ ಯುವಕರು ಪ್ರಯಾಣಿಸುತ್ತಿದ್ದ ಬಸ್‌ವೊಂದು ಪೋರ್ಟ್ಸ್‌ಮೌತ್‌ನ ಕಾಶಮ್ ಪ್ರದೇಶದಲ್ಲಿರುವ ಮ್ಯಾರಿಯಟ್ ಹೋಟೆಲ್‌ಗೆ ಬಂದಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ವರದಿಗಳು ಹರಿದಾಡಿದ್ದವು. ಇದನ್ನು ಕಂಡ ಪ್ರತಿಭಟನಾಕಾರರು ಹೋಟೆಲ್‌ ಬಳಿ ಜಮಾಯಿಸಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ವಲಸೆ ವಿರೋಧಿ ರಿಫಾರ್ಮ್ ಯುಕೆ ಪಕ್ಷದ ಕೌನ್ಸಿಲರ್‌ವೊಬ್ಬರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹೋಟೆಲ್‌ನಲ್ಲಿದ್ದವರು ವಾಸ್ತವವಾಗಿ ಪಾಕಿಸ್ತಾನದ ಕಿರಿಯರ ಕ್ರಿಕೆಟ್ ತಂಡದ ಸದಸ್ಯರು ಎಂಬುದು ಖಚಿತವಾದ ಬಳಿಕ ಅವರು ಪ್ರತಿಭಟನಾಕಾರರನ್ನು ಅಲ್ಲಿಂದ ತೆರಳುವಂತೆ ಮಾಡಿದ್ದಾರೆ ಎಂದು ‘ದಿ ಗಾರ್ಡಿಯನ್’ ವರದಿ ಮಾಡಿದೆ.

Pakistan Team Mistaken For Asylum Seekers In UK By Anti-Immigrant Protestors
'ದೊಡ್ಡ ತಂಡ ನಿಜ, ಆದರೆ ಅಸಾಧ್ಯವೇನಲ್ಲ..', 'ಏಷ್ಯಾಕಪ್ ಗೆಲ್ಲಬೇಕಾದರೆ ಭಾರತವನ್ನು ಮಣಿಸಲೇಬೇಕು'

ಪೊಲೀಸರ ಹರಸಾಹಸ

ಪ್ರದೇಶದ ಪೊಲೀಸ್ ಜವಾಬ್ದಾರಿ ಹೊಂದಿರುವ ಹ್ಯಾಂಪ್‌ಶೈರ್ ಪೊಲೀಸರು, ಮಂಗಳವಾರ ಸಂಜೆ ಹೋಟೆಲ್ ಸಮೀಪ ಕೆಲವರು ಗುಂಪುಗೂಡುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು ಎಂದು ತಿಳಿಸಿದ್ದಾರೆ.

‘ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಬಸ್‌ವೊಂದರ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದ ಸ್ಥಳೀಯರೊಂದಿಗೆ ಪೊಲೀಸರು ಮಾತನಾಡಿದರು. ಬಳಿಕ ಅವರ ಆತಂಕಕ್ಕೆ ಕಾರಣ ಸರಿಯಾಗಿಲ್ಲ ಎಂಬುದನ್ನು ಪೊಲೀಸರು ವಿವರಿಸಿದರು’ ಎಂದು ಪೊಲೀಸ್ ವಕ್ತಾರರು ಹೇಳಿದ್ದಾರೆ.

ಆದರೆ ಪ್ರತಿಭಟನಾಕಾರರು ಪಾಕಿಸ್ತಾನಿ ಕ್ರಿಕೆಟಿಗರನ್ನೇ ವಲಸಿಗರೆಂದು ತಪ್ಪಾಗಿ ಭಾವಿಸಿದ್ದರೇ ಎಂಬುದನ್ನು ಪೊಲೀಸರು ನೇರವಾಗಿ ದೃಢಪಡಿಸಿಲ್ಲ. ಸುಮಾರು 30 ಮಂದಿ ಸೇರಿದ್ದ ಗುಂಪು ಸ್ವಲ್ಪ ಸಮಯದ ಬಳಿಕ ಸ್ಥಳದಿಂದ ಚದುರಿತು. ಯಾವುದೇ ಕಾನೂನು ಉಲ್ಲಂಘನೆ ನಡೆದಿರುವುದು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Pakistan Team Mistaken For Asylum Seekers In UK By Anti-Immigrant Protestors
Duleep Trophy: 'ಮೊದ್ಲು DRS ತಗೋ..'; ನಾಯಕ ಇಶಾನ್ ಕಿಶನ್ ಗೆ ದುಂಬಾಲು ಬಿದ್ದ 'ಸೂಪರ್ ಡೆಪ್ಯುಟಿ' Vaibhav Sooryavanshi, ಆಗಿದ್ದೇನು? Video

‘ಜನಾಂಗೀಯ ದಾಳಿಗೆ ಕಾರಣವಾಗಬಹುದು’

‘ಸ್ಟ್ಯಾಂಡ್ ಅಪ್ ಟು ರೇಸಿಸಂ’ ಸಂಘಟನೆಯ ರಾಷ್ಟ್ರೀಯ ಸಂಘಟಕ ಮೈಕೆಲ್ ಬ್ರಾಡ್ಲಿ ಘಟನೆಯನ್ನು ಖಂಡಿಸಿದ್ದಾರೆ. ‘ನಿರಾಶ್ರಿತರು ಮತ್ತು ವಲಸಿಗರನ್ನು ಬಲಿಪಶುಗಳನ್ನಾಗಿ ಮಾಡುವ ಮನೋಭಾವ ಎಷ್ಟು ಅಪಾಯಕಾರಿ ಹಂತಕ್ಕೆ ಕೊಂಡೊಯ್ಯಬಹುದು ಎಂಬುದನ್ನು ಈ ಘಟನೆ ತೋರಿಸುತ್ತದೆ’ ಎಂದು ಅವರು ಹೇಳಿದ್ದಾರೆ.

‘ಪಾಕಿಸ್ತಾನದ U-19 ತಂಡ ವಲಸಿಗರ ಗುಂಪಾಗಿರಬಹುದು ಎಂಬ ಕಾರಣಕ್ಕೆ ಪ್ರತಿಭಟನೆ ಎದುರಿಸಬೇಕಾದ ಪರಿಸ್ಥಿತಿ ಬಂದಿರುವುದು ಆತಂಕಕಾರಿ. ಇದರರ್ಥ ನಗರಕ್ಕೆ ಆಗಮಿಸುವ ಯಾವುದೇ ಕಪ್ಪು ಅಥವಾ ಏಷ್ಯನ್ ಸಮುದಾಯದ ಜನರನ್ನು ಬಲಪಂಥೀಯರು ಸಂಭಾವ್ಯ ಗುರಿಗಳಾಗಿ ನೋಡುತ್ತಿದ್ದಾರೆ’ ಎಂದು ಬ್ರಾಡ್ಲಿ ಆರೋಪಿಸಿದ್ದಾರೆ.

‘ಇದೆಲ್ಲವೂ ಎಲ್ಲಿ ಕೊನೆಗೊಳ್ಳಲಿದೆ ಎಂಬುದು ಸ್ಪಷ್ಟವಾಗಿದೆ. ಜನಾಂಗೀಯ ದಾಳಿಗಳು ಮತ್ತು ಮತ್ತಷ್ಟು ಹಿಂಸಾಚಾರಕ್ಕೆ ಇದು ಕಾರಣವಾಗಬಹುದು’ ಎಂದು ಅವರು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com