ಖಾಲಿ ನಿವೇಶನಕ್ಕೆ ನಕಲಿ ಜಿಪಿಎ: ಇಬ್ಬರ ಬಂಧನ

ಖಾಲಿ ನಿವೇಶನಕ್ಕೆ ಸಂಬಂಧಿಸಿದಂತೆ ನಕಲಿ ಜಿಪಿಎ (ಜನರಲ್ ಪವರ್ ಆಫ್ ಅಟಾರ್ನಿ) ಸೃಷ್ಟಿಸಿ ಅದನ್ನು ಬೇರೆಯವರಿಗೆ ಮಾರಾಟ ಮಾಡುತ್ತಿದ್ದ ಆರೋಪಿಗಳಿಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ...
ಖಾಲಿ ನಿವೇಶನಕ್ಕೆ ನಕಲಿ ಜಿಪಿಎ: ಇಬ್ಬರ ಬಂಧನ (ಸಾಂದರ್ಭಿಕ ಚಿತ್ರ)
ಖಾಲಿ ನಿವೇಶನಕ್ಕೆ ನಕಲಿ ಜಿಪಿಎ: ಇಬ್ಬರ ಬಂಧನ (ಸಾಂದರ್ಭಿಕ ಚಿತ್ರ)
Updated on

ಬೆಂಗಳೂರು: ಖಾಲಿ ನಿವೇಶನಕ್ಕೆ ಸಂಬಂಧಿಸಿದಂತೆ ನಕಲಿ ಜಿಪಿಎ (ಜನರಲ್ ಪವರ್ ಆಫ್ ಅಟಾರ್ನಿ) ಸೃಷ್ಟಿಸಿ ಅದನ್ನು ಬೇರೆಯವರಿಗೆ ಮಾರಾಟ ಮಾಡುತ್ತಿದ್ದ ಆರೋಪಿಗಳಿಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಗಿಡದ ಕೊನೇನಹಳ್ಳಿ ಮುದ್ದಯ್ಯನಪಾಳ್ಯ ನಿವಾಸಿ ಆನಂದಕುಮಾರ್ (41) ಹಾಗೂ ಸಹಕಾರ ನಗರದ ಎಂ.ಎನ್. ಸ್ವಾಮಿ ಬಂಧಿತರು. ಸಹಕಾರನಗರ ಡಿ ಬ್ಲಾಕ್ 16ನೇ ಕ್ರಾಸ್‍ನಲ್ಲಿ ರಾಜಶ್ರೀ ಹರ್ಲೆ ಎಂಬುವರಿಗೆ ಸೇರಿದ ನಿವೇಶನವಿದ್ದು ಅದರ ಮೌಲ್ಯ ರು.1.25 ಕೋಟಿ. ಈ ಸೈಟಿನ ಬಗ್ಗೆ ನಾಗರಾಜಪ್ಪ ಹಾಗೂ ಹೇಮಲತಾ ಎಂಬುವರು ನಕಲಿ ಜಿಪಿಎ ಹಾಗೂ ಇತರ ದಾಖಲೆಗಳನ್ನು ಸೃಷ್ಟಿಸಿ ಬೇರೆಯವರಿಗೆ ಮಾರಾಟ ಮಾಡಿದ್ದಾರೆಂದು ಮಾಲೀಕರಾದ ರಾಜಶ್ರೀ ಹರ್ಲೆ ಅವರು ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಬಳಿಕ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು.

ತನಿಖೆಯಲ್ಲಿ ಬಯಲು: ನಾಲ್ಕೈದು ಆರೋಪಿಗಳು ಸೇರಿ ರಾಜಶ್ರೀ ಅವರ ಖಾಲಿ ಜಾಗ ಲಪಟಾಯಿಸಲು ಸಂಚು ರೂಪಿಸಿದ್ದು ಸಿಸಿಬಿ ತನಿಖೆಯಲ್ಲಿ ಬಯಲಾಗಿದೆ. ನಕಲಿ ದಾಖಲೆ ಸೃಷ್ಟಿಸಲು ಹೇಮಲತಾ ಹಾಗೂ 75 ವರ್ಷದ ನಾಗರಾಜಪ್ಪ ಎಂಬುವರನ್ನು ಮುಂದೆ ಇಟ್ಟುಕೊಂಡು ಆರೋಪಿಗಳು ಅಕ್ರಮ ವಾಹಿವಾಟು ನಡೆಸಿರುವುದು ಪತ್ತೆಯಾಗಿದೆ. ಬಂಧಿತ ಆನಂದಕುಮಾರನ ಸೋದರ ಮಾವ ನಾಗರಾಜಪ್ಪ ಅವರ ಹೆಸರಿಗೆ ರಾಜಶ್ರೀ ಹರ್ಲೆ ಅವರೇ ಜಿಪಿಎ ಪತ್ರ ಮಾಡಿಕೊಟ್ಟಂತೆ ನಕಲಿ ಜಿಪಿಎ ಸೃಷ್ಟಿಸಿ, ಅದರ ಆಧಾರದ ಮೇಲೆ ಆನಂದಕುಮಾರನ ಹೆಂಡತಿ
ಹೇಮಲತಾ ಅವರ ಹೆಸರಿಗೆ ಮಾರಾಟ ಮಾಡಿದಂತೆ ನೋಂದಣಿ ಮಾಡಿಸಲಾಗಿತ್ತು. ಅಲ್ಲದೇ ಸೈಟಿನ ಬೆಲೆ ರು.50 ಲಕ್ಷ ಎಂದು ವಹಿವಾಟು ನಡೆಸಿ ಈ ಸಂಬಂಧ ನೋಂದಣಿ ಶುಲ್ಕವನ್ನು ಪಾವತಿಸಿರುವುದು ಕಂಡು ಬಂದಿದೆ. ಆದರೆ, ಕೊಳ್ಳುವವರು ಹಾಗೂ ಮಾರಾಟ ಮಾಡಿದವರ ನಡುವೆ ರು.50 ಲಕ್ಷ ವಹಿವಾಟು ನಡೆಯದೇ ಇರುವುದು ಕೂಡಾ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.

ಆರೋಪಿಗಳ ಮನೆ ಮೇಲೆ ದಾಳಿ ನಡೆಸಿದಾಗ ವಂಚನೆ ಮಾಡಲು ಯತ್ನಿಸುತ್ತಿದ್ದ ನಿವೇಶನದ ದಾಖಲೆಗಳು ಪತ್ತೆಯಾಗಿವೆ. ಆರೋಪಿಗಳು ನಗರದಲ್ಲಿ ಖಾಲಿ ಇರುವ ನಿವೇಶನಗಳನ್ನು ಗುರುತಿಸಿ ಅವುಗಳ ವಾರಸುದಾರರು ಇಲ್ಲವೆಂಬುದನ್ನು ಖಚಿತಪಡಿಸಿಕೊಂಡ ಬಳಿಕ ಅಂತಹ ನಿವೇಶನಗಳ ದಾಖಲೆಗಳನ್ನು ಸಂಬಂಧಪಟ್ಟ ಇಲಾಖೆಯಿಂದ ಪಡೆಯುತ್ತಿದ್ದರು. ಅವುಗಳಿಗೆ ತಕ್ಕಂತೆ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಬೇರೆಯವರಿಗೆ ಮಾರಾಟ ಮಾಡುತ್ತಿದ್ದರು ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ಮುಂದುವರೆದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com