ತಮಿಳುನಾಡಿಗೆ ರು.3 ಕೋಟಿ ಮೌಲ್ಯದ ಉತ್ಪನ್ನ

ವಾಯುಭಾರ ಕುಸಿತದ ಪರಿಣಾಮ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ನಿರಾಶ್ರಿತರಾಗಿರುವ ಚೆನ್ನೈ ಜನರಿಗೆ ಮಾನವೀಯ ದೃಷ್ಟಿಯಿಂದ ಸಹಾಯಹಸ್ತ ಚಾಚಲು ಕರ್ನಾಟಕ ಹಾಲು ಮಹಾಮಂಡಳಿ ಮುಂದಾಗಿದೆ...
(ಸಂಗ್ರಹ ಚಿತ್ರ)
(ಸಂಗ್ರಹ ಚಿತ್ರ)

ಬೆಂಗಳೂರು: ವಾಯುಭಾರ ಕುಸಿತದ ಪರಿಣಾಮ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ನಿರಾಶ್ರಿತರಾಗಿರುವ ಚೆನ್ನೈ ಜನರಿಗೆ ಮಾನವೀಯ ದೃಷ್ಟಿಯಿಂದ ಸಹಾಯಹಸ್ತ ಚಾಚಲು ಕರ್ನಾಟಕ ಹಾಲು ಮಹಾಮಂಡಳಿ ಮುಂದಾಗಿದೆ.

ಸಂತ್ರಸ್ತರಿಗಾಗಿ ಕೆಎಂಎಫ್ ನಿಂದ 150 ಮೆಟ್ರಿಕ್ ಟನ್ ಹಾಲಿನ ಪುಡಿ ಮತ್ತು 50 ಸಾವಿರ ಲೀಟರ್ ಹಾಲು ವಿತರಿಸುತ್ತಿದೆ ಎಂದು ಪಶು ಸಂಗೋಪನಾ ಇಲಾಖೆ ಸಚಿವ ಎ. ಮಂಜು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಒಟ್ಟಾರೆ ರು.3 ಕೋಟಿ ಮೌಲ್ಯದ ನಂದಿನಿ ಉತ್ಪನ್ನಗಳನ್ನು ನೆರೆ ಸಂತ್ರಸ್ತರಿಗಾಗಿ ವಿತರಿ ಸುತ್ತಿದೆ. ಅವಶ್ಯಕತೆ ಇರುವ ಸಮಯದಲ್ಲಿ ಪೂರೈಕೆ ಮಾಡಲು ಕೆಎಂಎಫ್ ಸಿದ್ಧವಿದೆ.

ಮೊದಲ ಹಂತವಾಗಿ ಬುಧವಾರ ರು.20 ಲಕ್ಷ ಮೌಲ್ಯದ 10 ಟನ್ ಹಾಲಿನ ಪುಡಿ ಮತ್ತು 8 ಸಾವಿರ ಲೀಟರ್ ಗುಡ್‍ಲೈಫ್ ಹಾಲಿನ ಪ್ಯಾಕೆಟ್‍ಗಳನ್ನು ಸರಬರಾಜು ಮಾಡಲಾಗುತ್ತಿದೆ. ನೈಜ ಫಲಾನುಭವಿಗಳಿಗೆ ಹಾಲಿನ ಉತ್ಪನ್ನಗಳು ತಲುಪಬೇಕು ಎಂಬುದು ನಮ್ಮ ಉದ್ದೇಶ. ಆದ್ದರಿಂದ ಸಾಧ್ಯವಾದ ಮಟ್ಟಿಗೆ ಫಲಾನುಭವಿಗಳಿಗೆ ಮುಟ್ಟಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಹಾಲಿನ ಉತ್ಪನ್ನಗಳನ್ನು ಹೊತ್ತು ಚೆನ್ನೈಗೆ ಹೊರಟಿದ್ದ ಎರಡು ಲಾರಿಗಳಿಗೆ ಚಾಲನೆ ನೀಡಲಾ ಯಿತು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೆಎಂಎಫ್ ಅಧ್ಯಕ್ಷ ಪಿ. ನಾಗರಾಜು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com