ಹೊತ್ತಿ ಉರಿದ ಕಾರು

ಕಾವೇರಿ ಜಂಕ್ಷನ್ ಹೊಂಡೈ ಶೋರೂಂ ಬಳಿ ಚಲಿಸುತ್ತಿದ್ದ ಮಾರುತಿ 800 ಕಾರೊಂದರಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಸುಟ್ಟು ಕರುಕಲಾದ ಘಟನೆ ಭಾನುವಾರ ನಡೆಯಿತು...
ಹೊತ್ತಿ ಉರಿದ ಕಾರು
ಹೊತ್ತಿ ಉರಿದ ಕಾರು

ಬೆಂಗಳೂರು: ಕಾವೇರಿ ಜಂಕ್ಷನ್ ಹೊಂಡೈ ಶೋರೂಂ ಬಳಿ ಚಲಿಸುತ್ತಿದ್ದ ಮಾರುತಿ 800 ಕಾರೊಂದರಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಸುಟ್ಟು ಕರುಕಲಾದ ಘಟನೆ ಭಾನುವಾರ ನಡೆಯಿತು.

ಕೇರಳ ನೋಂದಣಿಯ ಕಾರು ಬೊಮ್ಮನಹಳ್ಳಿ ನಿವಾಸಿ ಶ್ರೀನಿವಾಸ ರೆಡ್ಡಿ ಎಂಬುವರಿಗೆ ಸೇರಿದೆ. ಕಾರ್ಯ ನಿಮಿತ್ತ ಮಧ್ಯಾಹ್ನ 12ರ ಸುಮಾರಿಗೆ ಕುಟುಂಬದ ಸದಸ್ಯರೊಂದಿಗೆ ಯಲಹಂಕಕ್ಕೆ ತೆರಳುವಾಗ ಕಾವೇರಿ ಜಂಕ್ಷನ್‍ನಲ್ಲಿ ಈ ಘಟನೆ ನಡೆದಿದೆ. ಕಾರಿನ ಎಂಜಿನ್‍ನಲ್ಲಿ ಏಕಾಏಕಿ ದಟ್ಟ ಹೋಗೆ ಕಾಣಿಸಿಕೊಂಡು ಕ್ಷಣ ಮಾತ್ರದಲ್ಲಿ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಕಾರು ಚಾಲನೆ ಮಾಡುತ್ತಿದ್ದ ಶ್ರೀನಿವಾಸ ರೆಡ್ಡಿ ರಸ್ತೆ ಮಧ್ಯದಲ್ಲೇ ಕಾರು ನಿಲ್ಲಿಸಿದ್ದಾರೆ. ಕಾರಿನಲ್ಲಿ ಕುಳಿತ್ತಿದ್ದ ಸಹೋದರ ಮತ್ತು ಮೂವರು ಮಹಿಳೆಯರನ್ನು ಹೊರಕ್ಕೆ ಕಳುಹಿಸಿದ್ದರಿಂದ ಎಲ್ಲರೂ
ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

ನಡು ರಸ್ತೆಯಲ್ಲಿ ಕಾರು ಹೊತ್ತಿ ಉರಿಯುವುದನ್ನು ಕಂಡ ಸಾರ್ವ ಜನಿಕರು ಕೂಡಲೇ ಅಗ್ನಿಶಾಮಕ ಠಾಣೆಗೆ ವಿಷಯ ಮುಟ್ಟಿಸಿದ್ದರು. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಬೆಂಕಿ ನಂದಿಸುವಷ್ಟರಲ್ಲಿ ಕಾರಿನ ಶೇ.80 ಭಾಗ ಸುಟ್ಟು ಕರಕಲಾಗಿತ್ತು. ಘಟನೆ ವೇಳೆ ಶ್ರೀನಿವಾಸ ರೆಡ್ಡಿ ಸ್ಥಳದಲ್ಲೇ ಕಾರು ಬಿಟ್ಟು ಸದಸ್ಯರನ್ನು ಮನೆಗೆ ಕಳುಹಿ ಸಲು ತೆರಳಿದ್ದರು. ಬ್ಯಾಟರಿಯಲ್ಲಿ ಉಂಟಾದ ವಿದ್ಯುತ್ ಶಾಟ್ರ್ ಸಕ್ರ್ಯೂಟ್‍ನಿಂದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿ ದ್ದಾರೆ. ಈ ಸಂಬಂಧ ವಯಾಲಿ ಕಾವಲ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ರಸ್ತೆ ಮಧ್ಯೆಯೇ ಕಾರಿಗೆ ಬೆಂಕಿ ಬಿದ್ದಿದ್ದರಿಂದ ಕೆಲ ಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವವರೆಗೂ ವಾಹನಗಳು, ಸವಾರರು ನಿಂತಲೇ ನಿಲ್ಲಬೇಕಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com