ಮೆಟ್ರೋ 2ನೇ ಹಂತ ಶೀಘ್ರ

ಬೆಂಗಳೂರು ಮಹಾನಗರದ ಮಹತ್ವಾಕಾಂಕ್ಷೆಯ ಯೋಜನೆಯಾದ ಮೆಟ್ರೋದ ಮೊದಲನೇ ಹಂತ ಶೇ.97ರಷ್ಟು ಪೂರ್ಣಗೊಂಡಿದ್ದು, ಪ್ರಸ್ತುತ 2ನೇ ಹಂತದ ಕಾಮಗಾರಿ ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ಬಿಎಂಆರ್‍ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‍ಸಿಂಗ್ ಖರೋಲ ತಿಳಿಸಿದ್ದಾರೆ...
(ಸಂಗ್ರಹ ಚಿತ್ರ)
(ಸಂಗ್ರಹ ಚಿತ್ರ)

ಬೆಂಗಳೂರು: ಬೆಂಗಳೂರು ಮಹಾನಗರದ ಮಹತ್ವಾಕಾಂಕ್ಷೆಯ ಯೋಜನೆಯಾದ ಮೆಟ್ರೋದ ಮೊದಲನೇ ಹಂತ ಶೇ.97ರಷ್ಟು ಪೂರ್ಣಗೊಂಡಿದ್ದು, ಪ್ರಸ್ತುತ 2ನೇ ಹಂತದ ಕಾಮಗಾರಿ ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ಬಿಎಂಆರ್‍ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‍ಸಿಂಗ್ ಖರೋಲ ತಿಳಿಸಿದ್ದಾರೆ.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಮಹಾ ಒಕ್ಕೂಟವು ಮಂಗಳವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ನಗರದ ವೈಟ್ ಪಿsೀಲ್ಡ್‍ನಿಂದ ಬೈಯಪ್ಪನಹಳ್ಳಿ, ಮೈಸೂರು ರಸ್ತೆಯ ಮಾರ್ಗದಲ್ಲಿ 6 ಪಥದ ಮೆಟ್ರೋ ನಿರ್ಮಿಸಲಾಗುವುದು. ಈ ಮಾರ್ಗದ ಭೂಸ್ವಾಧೀನ ಪ್ರಕ್ರಿಯೆ ಮುಗಿದಿದ್ದು, ಅಲ್ಲಿ ನೆಲಸಮ ಮಾಡಿದ 50ಕ್ಕೂ ಹೆಚ್ಚು ಮನೆಗಳ ಮಾಲೀಕರಿಗೆ ಪರಿಹಾರ ತಲುಪಿಸಲಾಗುತ್ತಿದೆ. ಮೆಟ್ರೋ ನಿರ್ಮಾಣಕ್ಕೆ ಗುತ್ತಿಗೆಯನ್ನೂ ನೀಡಲಾಗಿದೆ. ಜಯನಗರ, ಆರ್‍ಎನ್ ರಸ್ತೆ, ಬೊಮ್ಮಸಂದ್ರದಲ್ಲಿ ಕೆಲಸ ಆರಂಭಕ್ಕೆ ಅನುಮತಿ ಸಿಕ್ಕಿದೆ. ಕಾಮಗಾರಿಯ ಪೂರ್ಣ ವಿನ್ಯಾಸವನ್ನು ಐಐಎಸ್ಸಿ ನಿರ್ವಹಿಸಿದೆ ಎಂದು ಖರೋಲ ವಿವರಿಸಿದರು.

ಕಳೆದ 2015ರಿಂದ ಆರಂಭವಾದ ಮೆಟ್ರೋ ಮೊದಲನೇ ಹಂತದ ಕಾಮಗಾರಿಗೆ ಹಲವು ತೊಡಕುಗಳು ಎದುರಾದ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗಿದೆ. ಈಗಾಗಲೇ ಚಿಕ್ಕಪೇಟೆಯಿಂದ ಕೈಗೊಂಡಿರುವ ಸುರಂಗ ಮಾರ್ಗ ನಿರ್ಮಾಣದಲ್ಲಿ ಕಲ್ಲುಬಂಡೆಗಳು, ಮಣ್ಣು ಉದುರುತ್ತಿರುವುದಕ್ಕೆ ತೊಡಕಾಗಿದೆ. ಇದಕ್ಕೆ ನಮ್ಮ ಯೋಜನೆಗಳಲ್ಲಿನ ಲೋಪ ಕಾರಣವಾಗಿರಬಹುದೆ? ಎಂಬ ಅನುಮಾನ ಕಾಡುತ್ತಿದೆ. ಆದರೂ ಸಿಬ್ಬಂದಿ ಅತ್ಯಂತ ಜಾಗರೂಕತೆಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಮಾಚ್‍ನಲ್ಲಿ ಪೂರ್ವ-ಪಶ್ಚಿಮ ಕಾರಿಡಾರ್‍ನ ಸುರಂಗ ಮಾರ್ಗ, ಮೇ ತಿಂಗಳಲ್ಲಿ ರೀಚ್ ತ್ರೀ ಮಾರ್ಗ ಹಾಗೂ ಜೂನ್‍ನಲ್ಲಿ ಉತ್ತರ-ದಕ್ಷಿಣ ಕಾರಿಡಾರ್ ಪೂರ್ಣಗೊಳಿಸುವ ಗುರಿ ಹೊಂದಲಾಗಿದ್ದರೂ, ನಿಗದಿತ ಅವಧಿಗಿಂತ ಒಂದೆರಡು ತಿಂಗಳು ಮುಂದಕ್ಕೆ ಹೋಗುವ ಸಾಧ್ಯತೆಗಳಿವೆ ಎಂದು ಸ್ಪಷ್ಟಪಡಿಸಿದರು.

ನಗರದ ಕೇಂದ್ರ ಭಾಗವಾದ ಮೆಜೆಸ್ಟಿಕ್‍ನಲ್ಲಿ ಅತ್ಯುತ್ತಮ ದರ್ಜೆಯ ನಿಲ್ದಾಣ ನಿರ್ಮಿಸಲಿದ್ದು, ಇಲ್ಲಿ ಮೂರು ಮುಖ್ಯ ವಾಣಿಜ್ಯ ಸಂಕೀರ್ಣಗಳು ಬರಲಿವೆ. 10 ಸಾವಿರ ಮಂದಿ ಓಡಾಡಲು ಅನುಕೂಲವಾಗುವಂತೆ 45 ಸ್ಟೇರ್‍ಕೇಸ್ ನಿರ್ಮಿಸಲಾಗುತ್ತಿದೆ. ಪ್ರಯಾಣಿಕರ ಅನುಕೂಲಕ್ಕೆ 20 ಎಸ್ಕಲೇಟರ್ ಅಳವಡಿಸಲಾಗಿದೆ. ಸಿವಿಲ್, ಗ್ರಾನೈಟ್, ಎಲೆಕ್ಟ್ರಿಕಲ್ ಕೆಲಸ ಮುಗಿದಿದ್ದು
ಅಂತಿಮ ರೂಪ ನೀಡಲಾಗುತ್ತಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com