ಬೆಂಗಳೂರು ಗ್ರಾಮಾಂತರ

ಬಾಣಮಾಕನಹಳ್ಳಿ ಗೇಟ್ ಬಳಿ ಯುವತಿ ಅಪಹರಣ

Published On :

ಕ.ಪ್ರ. ವಾರ್ತೆ  ಸೂಲಿಬೆಲೆ  ಏ.2
ನಂದಗುಡಿ ಪೊಲೀಸ್ ಠಾಣೆ ವ್ಯಾಪ್ತಿಯ ಬಾಣಮಾಕನಹಳ್ಳಿ ಗೇಟ್ ಬಳಿ ವಾಯು ವಿಹಾರಕ್ಕೆ ಹೋಗಿದ್ದ 17 ವರ್ಷದ ಯುವತಿಯೊಬ್ಬಳನ್ನು ಅಪಹರಿಸಲಾಗಿದೆ ಎಂದು ಯುವತಿ ತಂದೆ ನಂದಗುಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಏ.1 ರಂದು  ಬೆಳಿಗ್ಗೆ 6 ಗಂಟೆ ಸಮಯದಲ್ಲಿ ಬಾಣಮಾಕನಹಳ್ಳಿ ಗೇಟ್ ಬಳಿ ವಾಯು ವಿಹಾರಕ್ಕೆ ಹೋಗಿದ್ದ 17 ವರ್ಷದ ಅನುಷ ವಾಪಸು ಮನೆಗೆ ಬಂದಿಲ್ಲ. ಎಷ್ಟು ಹೊತ್ತಾದರೂ ಮನೆಗೆ ಬಾರದಿರುವುದನ್ನು ಕಂಡು ಮನೆಯ ಎಲ್ಲರೂ ಸಂಬಂಧಿಕರ ಮನೆ ಇತ್ಯಾದಿ ಕಡೆ ಹುಡುಕಾಡಿದ್ದು ಪತ್ತೆಯಾಗಿಲ್ಲ. ಕೋಲಾರ ಜಿಲ್ಲೆಯ ಹುತ್ತೂರು ಹೋಬಳಿಯ ಹೊಳ್ಳಂಬಳ್ಳಿ ಗ್ರಾಮದ ಶಿವನಾರಾಯಣ ಶೆಟ್ಟಿ ತನ್ನ ಮಗನಿಗೆ ಅನುಷಳನ್ನು ಮದುವೆ ಮಾಡಿಕೊಡುವ ಸಂಬಂಧ ಚರ್ಚಿಸಿದ್ದ. ಇದು ವಿಫಲವಾದ ಕಾರಣ ಇವರೇ ಅನುಷಳನ್ನು ಅಪಹರಿಸಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಅನುಷಳ ತಂದೆ  ನಂದಗುಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ನಂದಗುಡಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಶೀಘ್ರ ಪ್ರಕರಣ ಭೇದಿಸುವದಾಗಿ ಪಿಎಸ್‌ಐ ಪ್ರಕಾಶ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.