ಜೆಡಿಎಸ್ನತ್ತ ಮತದಾರರ ಚಿತ್ತ: ಸಿ.ಚನ್ನಿಗಪ್ಪ
ಕ.ಪ್ರ. ವಾರ್ತೆ ದೊಡ್ಡಬಳ್ಳಾಪುರ ಏ.3
ಈ ಬಾರಿ ಜನ ಜೆಡಿಎಸ್ನತ್ತ ಒಲವು ತೋರುತ್ತಿದ್ದಾರೆ. ಪ್ರಸ್ತುತ ಶಾಸಕರ ಅಭಿವೃದ್ಧಿ ನಿರ್ಲಕ್ಷ್ಯ ಮತ್ತು ಕ್ಷೇತ್ರದ ದುಸ್ಥಿತಿಯೇ ಜನ ಬದಲಾವಣೆ ಬಯಸಲು ಕಾರಣ ಎಂದು ಮಾಜಿ ಸಚಿವ, ದೊಡ್ಡಬಳ್ಳಾಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿ. ಚನ್ನಿಗಪ್ಪ ಹೇಳಿದರು.
ತಾಲೂಕಿನ ಕನಸವಾಡಿಯಲ್ಲಿ ನಡೆದ ಮಧುರೆ ಹೋಬಳಿ ಕಾರ್ಯಕರ್ತರ ಸಮಾವೇಶ ಮತ್ತು ಹೋಬಳಿ ವ್ಯಾಪ್ತಿಯ ಹಲವು ಪಂಚಾಯಿತಿಗಳಲ್ಲಿನ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಹಲವು ಮುಖಂಡರ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೀನದಲಿತರ, ಶೋಷಿತರ ಕಲ್ಯಾಣ ಜೆಡಿಎಸ್ನಿಂದ ಮಾತ್ರ ಸಾಧ್ಯ.ಕುಮಾರಸ್ವಾಮಿ ಅವರು ನೀಡಿದ ಸ್ಥಿರ ಆಡಳಿತದ ಮೇಲೆ ನಂಬಿಕೆಯಿಟ್ಟು ಜನ ಪ್ರಗತಿಪರ ಬದಲಾವಣೆ ಬಯಸಿದ್ದಾರೆ. ಪ್ರಾಮಾಣಿಕತೆ ಮತ್ತು ಪರಿಶ್ರಮದಿಂದ ಪಕ್ಷ ಕಟ್ಟಿರುವ ದೇವೇಗೌಡರಿಗೆ ಈ ಬಾರಿ ಜನಮತ ನಿಶ್ಚಿತ. ಇಂದು ಅಕ್ಷರಶಃ ಮಧುರೆ ಹೋಬಳಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ನ ಬಹುತೇಕ ಮುಖಂಡರು ಜೆಡಿಎಸ್ಗೆ ಸೇರ್ಪಡೆಗೊಂಡಿರುವುದು ಮುಂಬರುವ ಚುನಾವಣೆಯಲ್ಲಿ ಪಕ್ಷದ ಮುನ್ನಡೆಗೆ ಸ್ಪಷ್ಟ ದಿಕ್ಸೂಚಿ. ಕ್ಷೇತ್ರದಲ್ಲಿ ಕೈಗೊಳ್ಳಲಿರುವ ಸಾಹಸ ಯಾತ್ರೆಯ ಮೊದಲ ಹೆಜ್ಜೆ ಇದು ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಪಕ್ಷದ ತಾಲೂಕು ಅಧ್ಯಕ್ಷ, ನಗರಸಭಾ ಸದಸ್ಯ ಆರ್.ಗೋವಿಂದರಾಜು ಮಾತನಾಡಿ, ದೊಡ್ಡಬಳ್ಳಾಪುರದ ಹಾಲಿ ಶಾಸಕರು ಈಗ ನೆಲೆ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ದಿನಕ್ಕೊಂದು ಪಕ್ಷದೊಂದಿಗೆ ಅವರ ಹೆಸರು ಕೇಳಿ ಬರುತ್ತಿದೆ. ಇಂತಹ ಸಂದರ್ಭದಲ್ಲಿ ತಾಲೂಕಿನ ಜನ ಜೆಡಿಎಸ್ನ ಬೆಂಬಲಕ್ಕೆ ನಿಂತಿದ್ದಾರೆ. ಎಲ್ಲ ಹೋಬಳಿಗಳಲ್ಲಿ ಪಕ್ಷದ ಸಂಘಟನೆ ಸದೃಡವಾಗಿದೆ. ಚನ್ನಿಗಪ್ಪ ಗೆಲವು ಈ ಬಾರಿ ನಿಶ್ಚಿತ ಎಂದರು.
ಸೇರ್ಪಡೆ: ಇದೇ ಸಂದರ್ಭದಲ್ಲಿ ಮಧುರೆ ಹೋಬಳಿಯ ಪ್ರಭಾವಿ ನಾಯಕ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಚುಂಚೇಗೌಡ ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಯಾದರು. ಅವರೊಟ್ಟಿಗೆ ಭೂ ಅಭಿವೃದ್ಧಿ ಬ್ಯಾಂಕ್ನ ಸದಸ್ಯ ಆರ್.ಸಿ.ರಾಮಲಿಂಗಯ್ಯ, ಮಾದಾರ ಚನ್ನಯ್ಯ ಮಹಾಸಭಾದ ಅಧ್ಯಕ್ಷ ರಾಮಕೃಷ್ಣ, ತಾಲೂಕು ಪಂಚಾಯಿತಿ ಹಾಲಿ ಸದಸ್ಯೆ ಅನ್ನಪೂರ್ಣ ಚಂದ್ರಶೇಖರ್, ಮಾಜಿ ಸದಸ್ಯೆ ಮಂಗಳಮ್ಮ, ನಿವೃತ್ತ ಅಧ್ಯಾಪಕ ಶಂಕರಪ್ಪ ಸೇರಿದಂತೆ ಕನಸವಾಡಿ ಗ್ರಾಮ ಪಂಚಾಯಿತಿಯ 14 ಸದಸ್ಯರು, ದೊಡ್ಡತುಮಕೂರು ಗ್ರಾಮ ಪಂಚಾಯಿತಿ, ಹೊನ್ನಾವರ ಗ್ರಾಮಪಂಚಾಯಿತಿ, ಚನ್ನಾದೇವಿ ಅಗ್ರಹಾರ ಗ್ರಾಮ ಪಂಚಾಯಿತಿ, ಕಾಡನೂರು ಗ್ರಾ.ಪಂ ಸೇರಿದಂತೆ ಮಧುರೆ ಹೋಬಳಿಯ ಹಲವು ಪಂಚಾಯಿತಿಗಳ ಕೆಲ ಮುಖಂಡರು, ಕಾರ್ಯಕರ್ತರು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು ತೊರೆದು ಜೆಡಿಎಸ್ಗೆ ಸೇರ್ಪಡೆಯಾದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲೂಕು ಘಟಕದ ಮಾಜಿ ಅಧ್ಯಕ್ಷ ಅಪ್ಪಯ್ಯಣ್ಣ, ಜಿ.ಪಂ ಸದಸ್ಯ ವೇಣುಗೋಪಾಲ್, ಹಿರಿಯ ಮುಖಂಡರಾದ ಎ.ನರಸಿಂಹಯ್ಯ, ಟಿ.ಎಸ್. ಚಿಕ್ಕರಾಮಕೃಷ್ಣಪ್ಪ, ಕಾರ್ಯದರ್ಶಿ ಪುಟ್ಟಬಸವರಾಜು, ಮುಖಂಡ ಜಗನ್ನಾಥಾಚಾರ್, ನಗರಸಭೆ ಮಾಜಿ ಅಧ್ಯಕ್ಷೆ ಶಾಂತಮ್ಮ, ಮಧುರೆ ಹೋಬಳಿ ಅಧ್ಯಕ್ಷ ಗೋಪಿನಾಥ್, ಎಸ್ಸಿ ಎಸ್ಟಿ ಘಟಕದ ಅಧ್ಯಕ್ಷ ಟಿ.ಡಿ.ಮುನಿಯಪ್ಪ, ಕಾರ್ಮಿಕ ಘಟಕದ ಮುನಿಪಾಪಯ್ಯ, ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದ ರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

