ಬೆಂಗಳೂರು ಗ್ರಾಮಾಂತರ

ಲಕ್ಷಾಂತರ ದೋಚಿದ್ದ 3 ಕಳ್ಳರ ಬಂಧನ

Published On :


ಕನಕಪುರ: ಕನಕಪುರ ತಾಲೂಕು ಕೂನೂರು ಗ್ರಾಮದಲ್ಲಿ ಮನೆಯೊಂದಕ್ಕೆ ನುಗ್ಗಿ ಲಕ್ಷಾಂತರ ರು.ನಗದು ದೋಚಿದ್ದ ಮೂರುಮಂದಿ ಕಳ್ಳರನ್ನು ಕನಕಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಕೂನೂರು ಗ್ರಾಮದ ಪ್ರದೀಪ, ವಿನಯ ಹಾಗೂ ರವಿಕುಮಾರ್ ಎಂದು ತಿಳಿದುಬಂದಿದೆ.
ಕಳೆದ ವಾರ ಕೂನೂರಿನ ರಾಮಚಂದ್ರರಾಜೇ ಅರಸ್ ಎಂಬುವವರು ಮನೆಗೆ ಬೀಗ ಹಾಕಿಕೊಂಡು ಮದುವೆಯೊಂದಕ್ಕೆ ಹೋಗಿದ್ದಾಗ ಆರೋಪಿಗಳು ಮನೆಯ ಹಿಂಬಾಗಿಲನ್ನು ಒಡೆದು 1ಲಕ್ಷ 95 ಸಾವಿರ ನಗದು, ವಾಚ್, ಚಿನ್ನದ ಒಡವೆಯನ್ನು ಕದ್ದು ಹೊಗಿದ್ದರು. ಪ್ರಕರಣದ ತನಿಖೆ ನಡೆಸಿದ ಉಪನಿರೀಕ್ಷಕ ಹೇಮಂತಕುಮಾರ್ ನೇತೃತ್ವದ ತಂಡ ಶೀಘ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ನಗದು, ಒಡವೆ ವಶಪಡಿಸಿಕೊಂಡಿದ್ದಾರೆ. ದಾಳಿಯಲ್ಲಿ ಎಎಸ್‌ಐ ಸಿದ್ದೇಗೌಡ, ಈಶ್ವರ್, ಸಿಬ್ಬಂದಿಗಳಾದ ಗೋವರ್ಧನ್, ರೇವಣ್ಣ, ಲೋಕೇಶ್, ಚಂದ್ರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.