'ಕಣದಿಂದ ಹಿಂದೆ ಸರಿವ ಪ್ರಶ್ನೆ ಇಲ್ಲ'
ಚನ್ನಪಟ್ಟಣ: ನಾನು ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು ಹೈಕಮಾಂಡ್ ನಿರ್ದೇಶನದಂತೆ ಕಣಕ್ಕಿಳಿಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಮಾಜಿ ಶಾಸಕ ಸಾದತ್ ಆಲಿಖಾನ್ ಸ್ಪಷ್ಟಪಡಿಸಿದರು.
ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಟ್ಟಿಯಲ್ಲಿ ನನ್ನ ಹೆಸರು ಇದ್ದು ಬಿ ಫಾರಂ ನನ್ನ ಕೈಗೆ ಬಂದಲ್ಲಿ ಸ್ಪರ್ಧೆ ಮಾಡುವುದಾಗಿ ತಿಳಿಸಿದರು. ಕಾಂಗ್ರೆಸ್ ನನ್ನನ್ನೇ ಅಭ್ಯರ್ಥಿ ಮಾಡುತ್ತದೆ ಎಂದು ವಿಶ್ವಾಸವಿದ್ದು, ಕ್ಷೇತ್ರ ಎಲ್ಲಾ ಮುಖಂಡರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಚುನಾವಣೆ ಎದುರಿಸುತ್ತೇನೆ. ಕ್ಷೇತ್ರದ ಜನತೆ ನನ್ನನ್ನು ಬೆಂಬಲಿಸುತ್ತಾರೆ ಎಂಬ ನಂಬಿಕೆ ಇದೆ ಎಂದರು.
ಇಲ್ಲದ ಸರ್ಕಸ್ ಮಾಡುವುದಿಲ್ಲ: ನಾನು ರಾಜಕೀಯದಲ್ಲಿ ಸರ್ಕಸ್ ಮಾಡುವ ವ್ಯಕ್ತಿಯಲ್ಲ, ಪ್ರಾಮಾಣಿಕವಾಗಿ ಚುನಾವಣೆ ಎದುರಿಸುತ್ತೇನೆ, ನನಗೆ ಸಿಕ್ಕಿರುವ ಅವಕಾಶವನ್ನು ಇನ್ಯಾರಿಗೋ ಬಿಟ್ಟು ಕೊಡುತ್ತೇನೆ ಎಂಬುದು, ಮತ್ತಿನ್ಯಾರಿಗೋ ಅವಕಾಶ ನೀಡುತ್ತೇನೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಇವೆಲ್ಲ ಕೇವಲ ಗಾಳಿ ಸುದ್ದಿಗಳು ಎಂದರು. ನನಗೆ ಆರೋಗ್ಯ ಸರಿಯಾಗಿದ್ದು ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿದ್ದೆ. ಈಗ ಚುನಾವಣೆಯನ್ನು ಎದುರಿಸಲು ಸಶಕ್ತನಾಗಿದ್ದು ಒಂದು ವೇಳೆ ಹೈಕಮಾಂಡ್ ಸ್ಪರ್ಧೆ ಬೇಡ ಎಂದರೆ ನಾನು ಸುಮ್ಮನಿರುತ್ತೇನೆ ವಿನಾ ಪಕ್ಷದ ಆಣತಿಗೆ ವಿರುದ್ಧವಾಗಿ ಮಾತನಾಡುವುದಿಲ್ಲ ಎಂದರು.
ಮಧುಗಿರಿಯಿಂದ ಹೆದರಿ ಬಂದಿದ್ದಾರೆ: ಮಧುಗಿರಿ ಕ್ಷೇತ್ರದಲ್ಲಿ ಇಂದಿಗೂ ಶಾಸಕರಾಗಿರುವ ಅನಿತಾಕುಮಾರಸ್ವಾಮಿ ಅಲ್ಲಿಂದ ಇಲ್ಲಿಗೆ ಬಂದಿರುವುದಕ್ಕೆ ಸೋಲಿನ ಭೀತಿಯೇ ಕಾರಣ. ಅವರು ಈ ಬಾರಿ ಮಧುಗಿರಿಯಿಂದ ಕಣಕ್ಕಿಳಿದರೆ ಸೋಲಬಹುದೆಂಬ ಆತಂಕ ಕಾಡಿದ್ದು ಇಲ್ಲಿಗೆ ಬಂದಿದ್ದಾರೆ ಕ್ಷೇತ್ರದ ಜನತೆ ಯಾವುದೇ ಕಾರಣಕ್ಕೂ ಇವರಿಗೆ ಸಹಕರಿಸುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

