ಬೆಂಗಳೂರು ಗ್ರಾಮಾಂತರ

15ಕ್ಕೆ ಅನಿತಾ ನಾಮಪತ್ರ: ಬಲ ಪ್ರದರ್ಶನಕ್ಕೆ ಸಜ್ಜು

Published On :

ಕ.ಪ್ರ.ವಾರ್ತೆ ಚನ್ನಪಟ್ಟಣ ಏ.10
ಅನಿತಾಕುಮಾರಸ್ವಾಮಿ ಏ.15ರಂದು ನಾಮಪತ್ರ ಸಲ್ಲಿಸುತ್ತಿದ್ದು, ಈ ಸಂದರ್ಭ ಶಕ್ತಿ ಪ್ರದರ್ಶನಕ್ಕೆ ಜೆಡಿಎಸ್ ಸಿದ್ಧತೆ ನಡೆಸಿದೆ.
ಪಟ್ಟಣದ 11ನೇ ಅಡ್ಡರಸ್ತೆಯಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಕರೆಯಲಾಗಿದ್ದ ಪಕ್ಷದ ಮುಖಂಡರ ಸಭೆಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ನಿರ್ಣಯ ಕೈಗೊಳ್ಳಲಾಯಿತು.
ಅನಿತಾ ಕುಮಾರಸ್ವಾಮಿ ಆಗಮನದಿಂದಾಗಿ ಜೆಡಿಎಸ್ಗೆ ಚೈತನ್ಯ ಬಂದಿದ್ದು. 1994ರ ಚುನಾವಣೆಯ ಇತಿಹಾಸ ಮರುಕಳಿಸಲಿರುವುದು ನಿಸ್ಸಂಶಯ ಎಂದು ಮುಖಂಡರು ವಿಶ್ವಾಸ ವ್ಯಕ್ತಪಡಿಸಿದರು.
ಅನಿತಾ ಗೆಲವು ಖಚಿತ: ತಾಲೂಕಿನಲ್ಲಿ ಜೆಡಿಎಸ್ ಅಭ್ಯರ್ಥಿ ಅನಿತಾ ಪರ ಮತದಾರರು ಒಲವು ವ್ಯಕ್ತಪಡಿಸಿದ್ದು, ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಗೆಲವು ಸಾಧಿಸುವುದರಲ್ಲಿ ಸಂಶಯವಿಲ್ಲ ಎಂದು ಸಭೆಯಲ್ಲಿದ್ದ ಕಾರ್ಯಕರ್ತರು ವಿಶ್ವಾಸವ್ಯಕ್ತ ಪಡಿಸಿದರು.
ಬಮೂಲ್ ನಿರ್ದೇಶಕ ಎಸ್.ಲಿಂಗೇಶ್ಕುಮಾರ್, ಸಿಂ.ಲಿಂ.ನಾಗರಾಜು, ಢಿಅಧ್ಯಕ್ಷ ರಾಜಣ್ಣ, ಸತ್ಯನಾರಾಯಣ, ಇ.ತಿ.ಶ್ರೀನಿವಾಸ್, ರಘುಕುಮಾರ್, ರಮೇಶ್, ಬೋರ್ವೆಲ್ ರಾಮಚಂದ್ರು, ಜಿ.ಕೃಷ್ಣೇಗೌಡ ಮತ್ತಿತರರು ಉಪಸ್ಥಿತರಿದ್ದರು.
ಅಶ್ವತ್ಥ್ ಮತ್ತೆ ಬರೋದು ಬೇಡ
ಮಾಜಿ ಶಾಸಕ ಅಶ್ವಥ್ಅವರನ್ನು ಜೆಡಿಎಸ್  ಪಕ್ಷಕ್ಕೆ ಮರಳಿ ಕರೆತರುವ ಪ್ರಯತ್ನಕ್ಕೆ ಸ್ಥಳೀಯ ಮುಖಂಡರು ವ್ಯಾಪಕ ವಿರೋಧ ವ್ಯಕ್ತ ಪಡಿಸಿದರು.
ಸಭೆಯಲ್ಲಿ ಅಶ್ವಥ್ ಮನೆಗೆ ಪುಟ್ಟಣ್ಣ ಹೋಗಿದ್ದಕ್ಕೆ ಆಕ್ಷೇಪಿಸಿದ ಜೆಡಿಎಸ್ ಮುಖಂಡ ಕೂರಣಗೆರೆ ರವಿ, ಅಶ್ವಥ್ ನಮ್ಮ ಪಕ್ಷಕ್ಕೆ ಯಾಕೆ ಬೇಕು ಎಂದು ಪ್ರಶ್ನಿಸಿದರು.
ಸಂಕಷ್ಟದ ಸಮಯದಲ್ಲಿ ಜೆಡಿಎಸ್ ತೊರೆದು ಹೋಗಿದ್ದಾರೆ. ನಮ್ಮ ನಾಯಕರಾದ ಕುಮಾರಸ್ವಾಮಿ ರಾಜ್ಯ ಮಟ್ಟದಲ್ಲಿ ಬದಲಾವಣೆ ತರಲು ಶ್ರಮಿಸುತ್ತಿದ್ದ ಸಮಯದಲ್ಲಿ ಪಕ್ಷದ ಬೆನ್ನಿಗೆ ಚೂರಿ ಹಾಕಿ, ನಾವೆಲ್ಲಾ ಹಗಲು ರಾತ್ರಿ ಪಟ್ಟ ಪರಿಶ್ರಮವನ್ನು ಬಿಜೆಪಿಗೆ ಮಾರಿದ್ದಾರೆ ಇಂತಹವರನ್ನು ಮತ್ತೆ ಪಕ್ಷಕ್ಕೆ ಕರೆತರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಕಾರ್ಯಕರ್ತರನ್ನು ಕೇಳದೆ ಅವರನ್ನೇನದರೂ ಪಕ್ಷಕ್ಕೆ ಕರೆತಂದಿದ್ದೇ ಆದಲ್ಲಿ ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.
ಪೋನ್ ಇನ್ಗೆ ಕಿಡಿ: ಅಶ್ವತ್ಥ್ ಆಗಮನದ ಸಂಗತಿಯನ್ನು ಕೇಳಿ ಕೆಂಡ ಮಂಡಲವಾಗಿದ್ದ ಕೂರಣಗೆರೆ ರವಿಯನ್ನು ತಾಲೂಕು ಜೆಡಿಎಸ್ ಅಧ್ಯಕ್ಷರು ಮನೆಯೊಳಗೆ ಸಮಾಧಾನ ಪಡಿಸುತ್ತಿರುವಾಗ ಒಳಗಿದ್ದ ಜೆಡಿಎಸ್ ಮುಖಂಡರೊಬ್ಬರು ಅಶ್ವತ್ಥ್ಗೆ ಇಲ್ಲಿನ ಬೆಳವಣಿಗೆಯನ್ನು ದೂರವಾಣಿ ಕರೆ ಮಾಡಿ ಕೇಳಿಸುತ್ತಿದ್ದರು ಎಂದು ಕೂರಣಗೆರೆ ರವಿ ಮತ್ತಷ್ಟು ಅಸಮಾಧಾನ ವ್ಯಕ್ತಪಡಿಸಿದರು.
ಅಪ್ಪಾಜಿಗೌಡ ನಾಮಪತ್ರ
ಚನ್ನಪಟ್ಟಣ: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೊದಲ ದಿನವಾದ ಬುಧವಾರ  ಪಕ್ಷೇತರ ಅಭ್ಯರ್ಥಿಯಾಗಿ ಅಪ್ಪಾಜಿಗೌಡ ನಾಮಪತ್ರ ಸಲ್ಲಿಸಿದರು.
ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದ ಅವರು, 1999ರ ಚುನಾವಣೆಯಲ್ಲಿ ಯೋಗೇಶ್ವರ್ ಸ್ಪರ್ಧಿಸಿ ವಿಜೇತರಾದ ಟಿ.ವಿ. ಗುರುತನ್ನು ಕೇಳಿದ್ದು ಸಾಕಷ್ಟು ಕುತೂಹಲಕ್ಕೆ ಎಡೆ ಮಾಡಿ ಕೊಟ್ಟಿದೆ.
ಅಪ್ಪಾಜಿಗೌಡ ನಾಮಪತ್ರ ಸಲ್ಲಿಸುವ ವೇಳೆ ಯೋಗೇಶ್ವರ್ ಆಪ್ತ ಸಹಾಯಕರು ಮತ್ತು ಯೋಗೇಶ್ವರ್ ಬೆಂಬಲಿಗರು ಹಾಜರಿದಿದ್ದು, ಈ ನಿಟ್ಟಿನಲ್ಲಿ ಕುತೂಹಲ ಮೂಡಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.