ನಾಮಪತ್ರ ಸಲ್ಲಿಕೆಗೆ ನಾನಾ ತೊಡಕು!
ಕ.ಪ್ರಭ. ವಾರ್ತೆ ರಾಮನಗರ ಏ.10
ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆಗೆ ಏ.10 ರಿಂದ 17ರವರೆಗೆ ಅವಕಾಶವಿದೆ. ಈ 8 ದಿನಗಳ ಪೈಕಿ 2 ದಿನ ಸರ್ಕಾರಿ ರಜೆಯಿಂದ ಕಚೇರಿ ಕದ ಮುಚ್ಚಿದರೆ, 4 ದಿನ ನಾನಾ ತೊಕುಗಳಿವೆ. ಅಭ್ಯರ್ಥಿಗಳ ಪಾಲಿಗೆ ಸೂಕ್ತವಾದದ್ದು 2 ದಿನ ಮಾತ್ರ.
ಅಧಿಸೂಚನೆ ಪ್ರಕಟಗೊಂಡು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭದ ಮೊದಲ ದಿನಏ.10ರ ಬುಧವಾರ ಅಮಾವಾಸ್ಯೆ. ಸಾಮಾನ್ಯವಾಗಿ ಹಿಂದೂ ಸಂಪ್ರದಾಯದಲ್ಲಿ ಅಮವಾಸ್ಯೆಯಂದು ಒಳ್ಳೆಯ ಕೆಲಸಕ್ಕೆ ಕೈ ಹಾಕುವುದಿಲ್ಲ. ಹೀಗಾಗಿ ಪ್ರಮುಖರು ನಾಮಪತ್ರ ಸಲ್ಲಿಕೆಯಿಂದ ದೂರ ಉಳಿದಿದ್ದಾರೆ.
ಇನ್ನು, ಏ.11ರಂದು ಯುಗಾದಿ ಹಬ್ಬದ ಪ್ರಯುಕ್ತ ರಜೆಯಿಂದಾಗಿ ನಾಮಪತ್ರ ಸಲ್ಲಿಕೆಗೆ ಅವಕಾಶವಿಲ್ಲ. ಮಾರನೇ ದಿನ 12ರಂದು ಯುಗಾದಿ ಹೊಸ ತಡುಕು ಇರುತ್ತದೆ. ಇದು, ವಿಶೇಷವಾಗಿ ಹಳೆಯ ಮೈಸೂರು ಭಾಗದಲ್ಲಿ ಜನರನ್ನು ಸೇರಿಸಿ, ಬಲ ಪ್ರದರ್ಶಿಸಲು ತೊಡಕಾಗುತ್ತದೆಂದು ಅಭ್ಯರ್ಥಿಗಳು ಸಹಜವಾಗಿಯೇ ಉಮೇದುವಾರಿಕೆ ಸಲ್ಲಿಕೆ ಮುಂದಾಗುವುದಿಲ್ಲ.
ಎರಡನೇ ಶನಿವಾರದ ರಜೆ ಇದ್ದರೂ ಏ.13 ರಂದು ನಾಮಪತ್ರ ಸಲ್ಲಿಕೆಗೆ ಅವಕಾಶ ಉಂಟು. ದರೆ, ಶನಿವಾರದ ಕಾರಣಕ್ಕೆ ಅಭ್ಯರ್ಥಿಗಳು ಧೈರ್ಯ ಮಾಡಲಾರರು. ಭಾನುವಾರದ ಕಾರಣಕ್ಕೆ ಏ.14ರಂದು ರಜೆ.
ಇದರಾಚೆಗೆ 3 ದಿನವಷ್ಟೇ ಬಾಕಿ ಉಳಿಯುತ್ತದೆ. ಮಂಗಳವಾರ ನಾಮಪತ್ರ ಹಾಕಲು ಅನೇಕರಿಗೆ ಮನಸ್ಸಿಲ್ಲ. ಈ ಪರಿಣಾಮ ಏ.16ಕ್ಕೂ ಚುನಾವಣಾಧಿಕಾರಿ ಕಚೇರಿಗಳತ್ತ ಸುಳಿಯುವವರು ವಿರಳ.
ಯಾವುದೇ ತೊಡಕುಗಳು ಇಲ್ಲದೆ ಉಳಿಯುವುದು ಏ.15 ಮತ್ತು 17 ಈ ಎರಡು ದಿನವಷ್ಟೆ. ಈ ಪೈಕಿ ಸೋಮವಾರ(ಏ.15) ಪ್ರಶಸ್ತ ಎನ್ನುವ ಕಾರಣದಿಂದ ಅಭ್ಯರ್ಥಿಗಳ ನೂಕು ನುಗ್ಗಲು ಎದುರಾಗುತ್ತದೆ. ಅಳಿದುಳಿದವರು ಕಡೆಯ ದಿನ ಏ.17ಕ್ಕೆ ಉಮೇದುವಾರಿಕೆ ಸಲ್ಲಿಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

