'ಬಾಲಕೃಷ್ಣ ವಿರುದ್ಧ ಅಪ ಪ್ರಚಾರ ಸಲ್ಲ'
ಕ.ಪ್ರ. ವಾರ್ತೆ , ಮಾಗಡಿ , ಏ.12
ವೀರಶೈವ ಸಮಾಜದ ಬಗ್ಗೆ ಗೌರವ ಇಟ್ಟುಕೊಂಡಿರುವ ಶಾಸಕ ಎಚ್.ಸಿ.ಬಾಲಕೃಷ್ಣ ವಿರುದ್ಧ ಮಾಡುತ್ತಿರುವ ಅಪ ಪ್ರಚಾರವನ್ನು ಬೋರ್‌ವೆಲ್ ಪ್ರಸಾದ್ ನಿಲ್ಲಿಸಬೇಕು ಎಂದು ವೀರಶೈವ ಮುಖಂಡರು ಹಾಗು ಶಿವಕುಮಾರಸ್ವಾಮಿ ಯುವಕರ ಸಂಘದ ಕಾರ್ಯದರ್ಶಿ ಹೊನ್ನಾಪುರ ಶಿವಪ್ರಸಾದ್ ಹಾಗೂ ತಾಪಂ ಮಾಜಿ ಉಪಾಧ್ಯಕ್ಷ ಉದ್ದೀಶ್ ನಾಗರಾಜು ಮತ್ತಿತರರು ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಎಚ್.ಸಿ. ಬಾಲಕೃಷ್ಣ ವೀರಶೈವರನ್ನು ಕಡೆಗಣಿಸಿದ್ದಾರೆ ಎಂದು ಗುರುಪ್ರಸಾದ್ ಹೇಳಿಕೆ ನೀಡಿರುವುದು ತರವಲ್ಲ ತೀವ್ರವಾಗಿ ಖಂಡಿಸಿದರು. ಮಾಗಡಿ ಪಟ್ಟಣ ಮತ್ತು ಕುದೂರಿನಲ್ಲಿ ಶತಾಯುಷಿ ಡಾ.ಶಿವಕುಮಾರ ಸ್ವಾಮೀಜಿ ಅವರ ಅದ್ದೂರಿ ಹುಟ್ಟಹಬ್ಬ ಆಚರಿಸಿದ ಹೆಗ್ಗಳಿಕೆ ಶಾಸಕ ಎಚ್.ಸಿ.ಬಾಲಕೃಷ್ಣ ಅವರಿಗೆ ಸೇರುತ್ತದೆ. ಮಾತ್ರವಲ್ಲ, ಡಾ.ಶಿವಕುಮಾರ ಸ್ವಾಮೀಜಿ ಹುಟ್ಟೂರು ವೀರಾಪುರದ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಿದ್ದಾರೆ. ಈ ನಿಟ್ಟಿನಲ್ಲಿ ಶಾಸಕರ ಬಗ್ಗೆ ಅವಹೇಳನಾಕಾರಿ ಹೇಳಿಕೆ ನೀಜಕ್ಕೂ ಖಂಡನೀಯವಾದುದು ಎಂದು ಗುರುಪ್ರಸಾದ್ ವಿರುದ್ಧ ಶಿವಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಎಚ್.ಸಿ.ಬಾಲಕೃಷ್ಣ ಅವರಿಂದ ವೀರಶೈವರಿಗೆ ಅನುಕೂಲವಾಗಿದೆಯೇ ಹೊರತು, ಅನ್ಯಾಯವಾಗಿಲ್ಲ ಎಂದು ತಾಪಂ ಮಾಜಿ ಉಪಾಧ್ಯಕ್ಷ ನಾಗರಾಜು ತಿಳಿಸಿದರು.
ತಾಪಂ ಮಾಜಿ ಉಪಾಧ್ಯಕ್ಷ ಕೆ.ಜಿ.ಉದ್ದೀಶ್ ಮಾತನಾಡಿ, ಕಾಂಗ್ರೆಸ್‌ನ ಚಿಗಳೂರು ಗಂಗಾಧರ್, ಸೋಮಶೇಖರ್ ಇಬ್ಬರು ಜನರಿಂದ ಎರಡು ಬಾರಿ ತಿರಸ್ಕೃತಗೊಂಡಿದ್ದಾರೆ. ಇವರಿಗೆ ಶಾಸಕ ಬಾಲಕೃಷ್ಣರ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕಮಸ್ಕಲ್ ಸಿದ್ದಲಿಂಗಪ್ಪ, ಕೆ.ಆರ್. ಪಾಲಕ್ಷಯ್ಯ, ಗಂಗರಾಜು, ಸಿ.ರೇವಣ್ಣ,ನಾಗರಾಜು,ಬಸವರಾಜು, ದಯಾನಂದ್, ಜಯಣ್ಣ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

