ದಲಿತರು ಕಾಂಗ್ರೆಸ್ ತಿರಸ್ಕರಿಸಲಿ
ಕ.ಪ್ರ.ವಾರ್ತೆ ಮಾಗಡಿ ಏ.13
ಓಟು ಬ್ಯಾಂಕ್ ಆಗಿ ಬಳಕೆ ಮಾಡಿಕೊಂಡಿರುವ ಕಾಂಗ್ರೆಸ್ ಅನ್ನು ದಲಿತರು ತಿರಸ್ಕರಿಸಬೇಕು ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ರೇವಣ್ಣ ಕರೆ ನೀಡಿದರು.
ಅವರು ಮಾಗಡಿ ಪಟ್ಟಣದ ಬಳಿ ಜೆಡಿಎಸ್ ಏರ್ಪಡಿಸಿದ್ದ ತಾಲೂಕು ಮಟ್ಟದ ಎಸ್ಸಿ, ಎಸ್ಟಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಶೋಷಿತ ದಲಿತರ ಹಕ್ಕುಗಳಿಗೆ ಸಾಮಾಜಿಕ ಮೀಸಲಾತಿ ತಂದುಕೊಟ್ಟ ಮಾಜಿ ಪ್ರಧಾನ ಮಂತ್ರಿ ಎಚ್.ಡಿ. ದೇವೇಗೌಡ ಅವರ ಪ್ರಾದೇಶಿಕ ಪಕ್ಷವಾದ ಜಾತ್ಯತೀತ ಜನತಾದಳವನ್ನು ಎಲ್ಲರೂ ಬೆಂಬಲಿಸಬೇಕು. ರಾಮನಗರ ಜಿಲ್ಲೆ ಕೇಂದ್ರವನ್ನಾಗಿಸಿದ ಕೀರ್ತಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಶಾಸಕ ಎಚ್.ಸಿ. ಬಾಲಕೃಷ್ಣ ಅವರಿಗೆ ಸಲ್ಲುತ್ತದೆ. ಲೋಕೋಪಯೋಗಿ ಮತ್ತು ಇಂಧನ ಸಚಿವನಾಗಿದ್ದಾಗ ಮಾಗಡಿ ಕ್ಷೇತ್ರಕ್ಕೆ ಕೋಟ್ಯಂತರ ರು. ಅನುದಾನ ನೀಡಿದ್ದೇನೆ. ಶಾಸಕ ಎಚ್.ಸಿ. ಬಾಲಕೃಷ್ಣ ರಸ್ತೆ, ಕುಡಿಯುವ ನೀರು, ವಿದ್ಯುತ್ ಸ್ಥಾವರ ಕೇಂದ್ರ ಸ್ಥಾಪನೆಯನ್ನು ಅನುಷ್ಠಾನಗೊಳಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವ ಬಾಲಕೃಷ್ಣ ಅವರಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳು ನಿರ್ಣಯಕ ಮತಗಳನ್ನು ನೀಡುವ ಮೂಲಕ ಬಹುಮತದಿಂದ ಗೆಲ್ಲಿಸಬೇಕು ಎಂದರು.
ಪಾಠ ಕಲಿಸಿದೆ: ಶಾಸಕ ಎಚ್.ಸಿ. ಬಾಲಕೃಷ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ನನಗೆ ಪ್ರತಿ ಚುನಾವಣೆಯೂ ಒಂದೊಂದು ಪಾಠ ಕಲಿಸಿದೆ. ಶೋಷಿತ ದಲಿತ ಸಮುದಾಯಕ್ಕೆ ಸಾಮಾಜಿಕ ಹಕ್ಕನ್ನು ಕೊಟ್ಟಂತಹ ಮಹಾ ಮಾನವತಾವಾದಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ, ದಲಿತ ವಿರೋಧಿ ಕಾಂಗ್ರೆಸ್ ಪಕ್ಷವನ್ನು ಯಾವುದೇ ಕಾರಣಕ್ಕೂ ದಲಿತರು ಬೆಂಬಲಿಸಬಾರದು. 60 ವರ್ಷಗಳ ಕಾಲ ನಮ್ಮನ್ನಾಳಿದ ಕಾಂಗ್ರೆಸ್ ಮುಖ್ಯಮಂತ್ರಿಗಳು ದಲಿತರ ಕೇರಿಗೆ ಹೋಗಲಿಲ್ಲ, ದಲಿತರ ಕೇರಿಗಳಿಗೆ ಹೋಗಿ ಗುಡಿಸಿಲಿನಲ್ಲಿ ವಾಸ್ತವ್ಯ ಹೂಡಿ ಸಮಸ್ಯೆಗಳಿಗೆ ಸ್ಪಂದಿಸಿದ ಏಕೈಕ ವ್ಯಕ್ತಿ ಕುಮಾರಸ್ವಾಮಿ. ದಲಿತರ ನೋವನ್ನು ಹತ್ತಿರದಿಂದ ಕಂಡು ಸಾರಾಯಿ ಮತ್ತು ಲಾಟರಿ ನಿಷೇಧಿಸಿದರು ಕುಮಾರಸ್ವಾಮಿ. ವೃದ್ಧರ, ವಿಧವೆಯರ ಮಾಸಾಸನ ಹೆಚ್ಚಿಸಿದರು. ಈ ಬಾರಿ ಜೆಡಿಎಸ್ಅನ್ನು ಜನತೆ ಅಧಿಕಾರಕ್ಕೆ ತಂದರೆ 75 ರ ವಯೋವುತಿ ಮೀರಿದ ಎಲ್ಲರಿಗೂ ಪ್ರತಿ ತಿಂಗಳು 5 ಸಾವಿರ ರು. ಮಾಸಾಶನ, ವಿಧವೆಯರಿಗೆ, ಅಂಗವಿಕಲರಿಗೆ 1,500 ರು. ಮಾಸಾಸನ, ಬಾಣಂತಿಯರಿಗೆ 5 ತಿಂಗಳ ಕಾಲ 5 ಸಾವಿರ ರು ನೀಡಲು ಎಚ್ಡಿಕೆ ಚಿಂತನೆ ಮಾಡಿದ್ದಾರೆ ಎಂದರು.
ದಲಿತ ಮುಖಂಡ ಹಾಗು ಮಾಜಿ ಶಾಸಕ ಅನ್ನದಾನಿ ಮಾತನಾಡಿ ಜಾತ್ಯತೀತ ರಾಷ್ಟ್ರ ನಿರ್ಮಾಣ ಎಚ್ಡಿಕೆ ಕನಸು. ಬಿಜೆಪಿ ಕೋಮುವಾದಿ ಪಕ್ಷ, ಕಾಂಗ್ರೆಸ್ ಮನೆಯಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ನೂರಾರು ವಿಪಕ್ಷಗಳ ಮುಖಂಡರು ಜೆಡಿಎಸ್ಗೆ ಸೇರ್ಪಡೆಯಾದರು.
ಬೆಳ್ಳಿಯಪ್ಪ, ಜೆಡಿಎಸ್ ಮುಖಂಡ ಅ.ದೇವೇಗೌಡ, ಕಲ್ಕೆರೆ ಶಿವಣ್ಣ, ಚಕ್ರಬಾವಿ ಭೈರಪ್ಪ, ಸೋಲೂರು ಎಂ. ನಾಗರಾಜು, ಜಿ. ಕೃಷ್ಣ, ತಾ.ಪಂ. ಅಧ್ಯಕ್ಷ ಬಿ.ಟಿ. ವೆಂಕಟೇಶ್ ಮಾತನಾಡಿದರು.
ಜಿ.ಪಂ. ಅಧ್ಯಕ್ಷ ಕೆ.ಮುದ್ದುರಾಜ ಯಾದವ್, ಸದಸ್ಯರಾದ ಹಂಸಕುಮಾರಿ, ಧನಂಜಯ, ವಿಜಯಕುಮಾರ್,ಬಮೂಲ್ ನರಸಿಂಹಮೂರ್ತಿ, ಕಲ್ಯದ ಅರುಧಂತಿ ಚಿಕ್ಕಣ್ಣ, ಕೆಂಪೇಗೌಡ, ಎಲ್.ಎನ್.ಸ್ವಾಮಿ, ಮಹದೇವಯ್ಯ, ವೀರಪ್ಪ, ಶೇಷಪ್ಪ, ಬ್ಯಾಟಪ್ಪ, ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

