ಎಲುವಹಳ್ಳಿ ಗ್ರಾಮದಲ್ಲಿ ಗುಂಪು ಘರ್ಷಣೆ
ದೇವನಹಳ್ಳಿ: ದೇವನಹಳ್ಳಿ ಗಡಿ ಭಾಗದ ಎಲುವಹಳ್ಳಿ ಗ್ರಾಮದಲ್ಲಿ ಜಮೀನು ವಿವಾದ ಮತ್ತು ಕಾಂಗ್ರೆಸ್- ಜೆಡಿಎಸ್ ರಾಜಕೀಯ ಮತ್ಸರಕ್ಕೆ ಎರಡು ಗುಂಪುಗಳ ನಡುವೆ ಸೋಮವಾರ ರಾತ್ರಿ ನಡೆದ ಘರ್ಷಣೆಯಲ್ಲಿ ಎಂಟು ಮಂದಿಯ ಮೇಲೆ ದೊಣ್ಣೆ ಹಾಗೂ ಮಾರಕಾಸ್ತ್ರಗಳಿಂದ ತೀವ್ರ ಹಲ್ಲೆ ನಡೆದಿದ್ದು ಎಲ್ಲರನ್ನೂ ದೇವನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ತೀವ್ರ ಗಾಯಗೊಂಡಿದ್ದ ಎಸ್.ಎನ್.ಮೂರ್ತಿ, ಶಿವಮೂರ್ತಿ, ಎಸ್.ಎನ್.ಶ್ರೀಧರ್ ಹಾಗೂ ಜಿ.ಶ್ರೀಧರ್ ಅವರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆದು ನಂತರ ದೇವನಹಳ್ಳಿ ಆಸ್ಪತ್ರೆಯಲ್ಲೇ ಮತ್ತೆ ಚಿಕಿತ್ಸೆ ಮುಂದುವರಿಸಲಾಗಿದೆ. ನಂಜುಂಡ, ಕೆಂಪೇಗೌಡ, ಉಮೇಶ ಹಾಗೂ ಬಚ್ಚೇಗೌಡ ಅವರು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಸ್ಪತ್ರೆಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಬಚ್ಚೇಗೌಡ, ಜಿಪಂ ಸದಸ್ಯ ಬಿ.ರಾಜಣ್ಣ, ಜಿಲ್ಲಾ ಎಸ್ಸಿ ಘಟಕ ಅಧ್ಯಕ್ಷಎ.ಚಿನ್ನಪ್ಪ ಭೇಟಿ ನೀಡಿದ್ದರು.
ವಿಜಯಪುರ ಪೊಲೀಸರಿಗೆ ಎರಡು ಗುಂಪಿನವರು ಪ್ರತ್ಯೇಕವಾಗಿ ದೂರು ನೀಡಿದ್ದು ಜೆಡಿಎಸ್ಗೆ ಸೇರಿದ 24 ಹಾಗೂ ಕಾಂಗ್ರೆಸ್ಗೆ ಸೇರಿದ 21 ಮಂದಿ ಮೇಲೆ ದೂರು ದಾಖಲಾಗಿದೆ.
ಜೆಡಿಎಸ್ಗೆ ಸೇರಿದವರಿಗೆ ಯಾವುದೇ ಗಾಯಗಳಾಗದೇ ಇದ್ದರೂ ಉದ್ದೇಶ ಪೂರ್ವಕವಾಗಿ ವಿಜಯಪುರ ಆಸ್ಪತ್ರೆಗೆ ದಾಖಲಾಗಿ ಸುಳ್ಳುದೂರನ್ನು ನೀಡಿದ್ದಾರೆ ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ವಿರೂಪಾಕ್ಷ ಪತ್ರಕರ್ತರಿಗೆ ತಿಳಿಸಿದರು.
ಪ್ರಕರಣದ ಹಿನ್ನೆಲೆ: ಎಲುವಹಳ್ಳಿ ಮಂಜುನಾಥ್ ಎಂಬುವರು ಶಿಡ್ಲಘಟ್ಟ ತಾಲೂಕಿನ ಮಿತ್ತನಹಳ್ಳಿ ಬಳಿ ಇದ್ದ 32 ಗುಂಟೆ ಜಮೀನನ್ನು ರಾಮರೆಡ್ಡಿ ಎಂಬುವರಲ್ಲಿ 5 ವರ್ಷಗಳ ಕಾಲ ಭೋಗ್ಯಕ್ಕೆ ಇಟ್ಟಿದ್ದರು. ಭೋಗ್ಯದ ಜಮೀನನ್ನು ಎಂಟುವರ್ಷಗಳ ನಂತರ ನಮಗೆ ಬಿಟ್ಟುಕೊಡಿ ಎಂದು ರಾಮರೆಡ್ಡಿ ಅವರಲ್ಲಿ ಕೇಳಿದಾಗ ಗಲಭೆಗೆ ಕಾರಣವಾಯಿತು ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

