ಬಿಜೆಪಿ ಸರ್ಕಾರದಿಂದ ಜನಪರ ಯೋಜನೆ: ನಾಗರಾಜು
ಕನಕಪುರ: ಕನಕಪುರದಿಂದ ಸ್ಪರ್ಧಿಸಿರುವ ಭಾರತೀಯ ಜನತಾಪಕ್ಷದ ಅಭ್ಯರ್ಥಿ ಬಿ. ನಾಗರಾಜು ತಮ್ಮ ಬೆಂಬಲಿಗರೊಂದಿಗೆ ಕಲ್ಲಹಳ್ಳಿ ಹಾಗೂ ತುಂಗಣಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಬಿಜೆಪಿ ಮುಖಂಡರುಗಳಾದ ಆನಮಾನಹಳ್ಳಿ ನಾಗರಾಜು, ಜಗನ್ನಾಥ್, ರಾಮು ಪಾಲ್ಗೊಂಡಿದ್ದರು.
ಅಭ್ಯರ್ಥಿ ನಾಗರಾಜು ಮಾತನಾಡುತ್ತಾ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ನೀಡಿದಷ್ಟು ಜನಪರ ಯೋಜನೆಗಳನ್ನು ಬೇರೆ ಯಾವುದೇ ಸರ್ಕಾರ ನೀಡಲು ಸಾಧ್ಯವಾಗಿಲ್ಲ, ಸಮಾಜದ ಎಲ್ಲಾವರ್ಗದ ಜನರನ್ನು ತಲುಪುವ ಯೋಜನೆಗಳೇ ಬಿಜೆಪಿ ಸರ್ಕಾರದ ಶ್ರೀರಕ್ಷೆಯಾಗಿವೆ, ಲಕ್ಷ ಕೋಟಿ ಬಜೆಟ್ ಮಂಡಿಸುವ ಮೂಲಕ ಅಭಿವೃದ್ಧಿಯಲ್ಲಿ ಕ್ರಾಂತಿಯನ್ನೇ ಬಿಜೆಪಿ ಸರ್ಕಾರ ಮಾಡಿದೆ ಎಂದು ಹೇಳಿದರು. ತೀರಾ ಹಿಂದುಳಿದಿರುವ ಕನಕಪುರ ಕ್ಷೇತ್ರ ಕ್ಷಿಪ್ರಗತಿಯಲ್ಲಿ ಮುನ್ನಡೆಯಬೇಕಾದರೆ ಬಿಜೆಪಿಯಿಂದ ಮಾತ್ರ ಸಾಧ್ಯವಾಗಿದ್ದು ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲು ಬಿಜೆಪಿಗೆ ಮತನೀಡಬೇಕೆಂದು ನಾಗರಾಜು ವಿನಂತಿಸಿದರು.
ಅಭ್ಯರ್ಥಿ ನಾಗರಾಜು ಪಾದಯಾತ್ರೆ ಮೂಲಕ ಕಲ್ಲಹಳ್ಳಿ,ತುಂಗಣಿ, ವರಗೇರಹಳ್ಳಿ, ಬಂಗ್ಲೆ, ಆಡನಕುಪ್ಪೆ, ತಾಮಸಂದ್ರ ಮೊದಲಾದ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

