ಉತ್ತಮ ಆಡಳಿತಕ್ಕೆ ಕಾಂಗ್ರೆಸ್ಗೆ ಮತ ನೀಡಿ: ಕವಿತಾ ಮನವಿ
ಕ.ಪ್ರ. ವಾರ್ತೆ , ಆನೇಕಲ್ಲು , ಏ.27
ಎಲೆಕ್ಟ್ರಾನಿಕ್ ಸಿಟಿ ಮಗ್ಗುಲಲ್ಲಿದ್ದರೂ ಆನೇಕಲ್ ಮೀಸಲು ಕ್ಷೇತ್ರ ಅಭಿವೃದ್ಧಿಯನ್ನು ಕಾಣಲಿಲ್ಲ. 5 ಕೈಗಾರಿಕಾ ಪ್ರದೇಶಗಳಿದ್ದರೂ ಮೂಲಭೂತ ಸೌಕರ್ಯಗಳಿಲ್ಲ. ನೀರಿನ ಸಮಸ್ಯೆ, ತ್ಯಾಜ್ಯದ ವಿಲೇ ಸಮಸ್ಯೆ, ಅಂತರ್ಜಲ ಕಲುಷಿತ ಸಮಸ್ಯೆಗಳು ಬೃಹದಾಕಾರವಾಗಿದೆ ಎಂದು ಕೂಡ್ಲು ಪಾಲಿಕೆ ಸದಸ್ಯೆ ಕವಿತಾ ಬಾಬು ರಾಜ್ ತಿಳಿಸಿದರು.
ಅವರು ಕಾಂಗ್ರೆಸ್ ಅಭ್ಯರ್ಥಿ ಬಿ. ಶಿವಣ್ಣ ಪರ ಮತ ಯಾಚನೆ ಮಾಡಿ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದೆ. ಕ್ಷೇತ್ರದ ಸಮಸ್ಯೆಗಳನ್ನುಬಗೆ ಹರಿಸುವಲ್ಲಿ ಶಾಸಕ ಹಾಗೂ ಸಚಿವರು ವಿಫಲರಾಗಿದ್ದು ಈ ಬಾರಿ ಕಾಂಗ್ರೆಸ್ಗೆ ಮತ ನೀಡಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.
ಶಾಶ್ವತ ನೀರಾವರಿ ಯೋಜನೆ, ಉತ್ತಮ ರಸ್ತೆ, ಬಡವರಿಗೆ ನಿವೇಶನ ಹಕ್ಕು ಪತ್ರ, ಪಡಿತರ ವ್ಯವಸ್ಥೆ ಉತ್ತಮಪಡಿಸುವಿಕೆ ನಮ್ಮ ಆದ್ಯತೆಯ ವಿಷಯವಾಗಿದೆ ಎಂದರು.
ಕ್ಷೇತ್ರದ ಸಮಸ್ಯೆಗಳನ್ನು ಚೆನ್ನಾಗಿ ಅರಿತಿರುವ ನನಗೆ ಒಂದು ಬಾರಿ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು. ಬಮೂಲ್ ನಿರ್ದೇಶಕ ಆರ್.ಕೆ. ರಮೇಶ್, ಸೋಮಶೇಖರ ರೆಡ್ಡಿ, ಆಪಲ್ ಮುನಿಯಪ್ಪ ಗಟ್ಟಳ್ಳಿ ಸೀನಪ್ಪ, ಜಿಪಂ ಬಾಬು ಸೇರಿದಂತೆ ನೂರಾರು ಮುಖಂಡರು ಮತಯಾಚನೆಯಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

