ಬೆಂಗಳೂರು ಗ್ರಾಮಾಂತರ

ವೀರಪ್ಪ ಮೊಯ್ಲಿ ಸುಳ್ಳಿನ ಸರದಾರ

Published On :

ಕ.ಪ್ರ.ವಾರ್ತೆ  ,   ದೊಡ್ಡಬಳ್ಳಾಪುರ  ,   ಏ.27
ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಸುಳ್ಳಿನ ಸರದಾರ. ನೀರಾವರಿಯಿಂದ ಹಿಡಿದು ಎಲ್ಲ ವಿಷಯಗಳಲ್ಲೂ ಸುಳ್ಳಿನ ಮೂಲಕವೇ ಜನರನ್ನು ವಂಚಿಸಿದವರು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಟೀಕಿಸಿದರು.
ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಜೆ.ನರಸಿಂಹಸ್ವಾಮಿ ಪರ ಚುನಾವಣಾ ಪ್ರಚಾರ ಮಾತನಾಡಿದರು.
ಕಾಂಗ್ರೆಸ್ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿರುವ ಪಕ್ಷ ಎಂದು ಜಗತ್ತಿಗೇ ಗೊತ್ತಿದೆ. 6.5ಲಕ್ಷ ಕೋಟಿಗೂ ಅಧಿಕ ಹಣದ ಅವ್ಯವಹಾರ, ಹಗರಣ ನಡೆಸಿದ ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗಿರುವುದಕ್ಕೆ ಅವರು ನಾಚಿಕೆ ಪಡಬೇಕೇ ವಿನಃ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಕ್ಕೆ ಅಲ್ಲ  ಎಂದರು.
ಗಣಿ ಹಗರಣದ ರೂವಾರಿ ಚನ್ನಿಗಪ್ಪ: ರಾಜ್ಯದಲ್ಲಿ ಗಣಿಹಗರಣಕ್ಕೆ ನಾಂದಿ ಹಾಡಿದ ವ್ಯಕ್ತಿ ಚನ್ನಿಗಪ್ಪ. ಅಂತಹವರು ಜನರ ಉದ್ಧಾರ ಮಾಡುವ ಮಾತನ್ನಾಡುವುದು ನಾಚಿಕೆಗೇಡು ಎಂದ ಎಂದರು.
ಬಿಜೆಪಿ ಅಭ್ಯರ್ಥಿ ಜೆ.ನರಸಿಂಹಸ್ವಾಮಿ ಮಾತನಾಡಿ, ತಾಲೂಕಿನಲ್ಲಿ ಹಗರಣ ಮುಕ್ತ ಶಾಸಕನಾಗಿ ಗುರುತಿಸಿಕೊಂಡಿದ್ದೇನೆ. ಗಣಿ, ಭೂ ಮಾಫಿಯಾ, ತೋಳ್ಬಲ ಪ್ರದರ್ಶನ ಮಾಡಿಲ್ಲ. ಶಾಂತಿಯುತ ವಾತಾವರಣ ಕಾಯ್ದುಕೊಂಡು ಬಂದಿರುವುದು ಹಾಗೇ ಉಳಿಯಬೇಕಾದರೆ ಕ್ಷೇತ್ರದಲ್ಲಿ ನಡೆಯುತ್ತಿರುವ ಹಣ-ತೋಳ್ಪಲದ ರಾಜಕಾರಣವನ್ನು ಕಡೆಗಾಣಿಸಬೇಕು. 2 ಟ್ಯಾಂಕರ್ ನೀರನ್ನು ನಗರದಲ್ಲಿ ಓಡಾಡಿಸಿ ಜನರಿಗೆ ಉಚಿತ ನೀರು ಕೊಟ್ಟೆ ಎಂದು ಹೇಳಿಕೊಳ್ಳುವವರು ನಗರಸಭೆ ಮೂಲಕವೂ ಉಚಿತ ನೀರು ಕೊಡಲಾಗುತ್ತಿದೆ ಎಂಬುದನ್ನು ಮರೆಯಬಾರದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.