ರಾಮನಗರ ಕಡೆ ತಾರಾ ಪ್ರಚಾರಕರ ಸದ್ದಿಲ್ಲ
ರಾಮನಗರ: ವಿಧಾನಸಭೆ ಚುನಾವಣೆಗೆ ಇನುಳಿದಿರುವುದು ನಾಲ್ಕು ದಿನ ಮಾತ್ರ ಬಾಕಿ. ರಾಜಧಾನಿ ಬೆಂಗಳೂರು ಮಗ್ಗುಲಲ್ಲೇ ಇದ್ದರೂ ರಾಮನಗರ ಜಿಲ್ಲೆ ಕಡೆಗೆ ತಾರಾ ಪ್ರಚಾರಕರ ದಂಡು ತಲೆ ಹಾಕಿಲ್ಲ. ಅಲ್ಲೊಬ್ಬ ಇಲ್ಲೊಬ್ಬರು ಸೀಮಿತ ಮಟ್ಟದಲ್ಲಿ ಪ್ರಚಾರ ನಡೆಸಿ ಹೋಗಿದ್ದಾರೆ. ಹಳ್ಳಿ ಸುತ್ತಿ ಬಂದಿರುವ ಅಭ್ಯರ್ಥಿಗಳು ನಾನಾ ರೀತಿ ಕಸರತ್ತಿನೊಂದಿಗೆ ನಗರ, ಪಟ್ಟಣಗಳ ಗಲ್ಲಿ ಸುತ್ತಲಾರಂಭಿಸಿದ್ದಾರೆ.
ರಾಮನಗರ ಚುನಾವಣಾ ರಣಾಂಗಣದಲ್ಲಿ ಜಿದ್ದಾಜಿದ್ದಿನ ಸೆಣೆಸಾಟವೇನೋ ನಡೆಯುತ್ತಿದೆ. ಆದರೆ, ರಾಜ್ಯ ಮತ್ತು ರಾಷ್ಟ್ರ ಪಕ್ಷಗಳ ಪ್ರಭಾವಿ ನಾಯಕರ ಸುಳಿವಿಲ್ಲ. ಇಲ್ಲಿನ ಇಬ್ಬರು ಅಭ್ಯರ್ಥಿಗಳು ತಾರಾ ಪ್ರಚಾರಕರಾಗಿ ಹೊರ ಜಿಲ್ಲೆಗಳ ಪ್ರವಾಸಕ್ಕೆ ತೆರಳಿದ್ದಾರೆ. ಉಳಿದವರು ಸ್ವಕ್ಷೇತ್ರಗಳಲ್ಲೇ ಠಿಕಾಣಿ ಹೂಡಿ, ತರಾವರಿ ಪ್ರಚಾರದಲ್ಲಿ ತೊಡಗುವ ಮೂಲಕ ಮತಬೇಟೆಗೆ ಅಂತಿಮ ಯತ ಮುಂದುವರೆಸಿದ್ದಾರೆ.
ಸ್ಟಾರ್ ಪ್ರಚಾರಕರಿಲ್ಲ: ಕೇಂದ್ರ ಸಚಿವ ಕೆ.ರೆಹಮಾನ್ ಖಾನ್ ರಾಮನಗರ ಮತ್ತು ಚನಪಟ್ಟಣದ ಒಂದೆರಡು ವಾರ್ಡ್ಗಳಲ್ಲಿ ಭಾಷಣ ಮಾಡಿ ಹೋಗಿದ್ದರೆ, ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಮ್ಮ ಪಕ್ಷದ ಪ್ರಬಲ ಸ್ಪರ್ಧೆ ಇರುವ ಮಾಗಡಿ ಕ್ಷೇತ್ರಕ್ಕಷ್ಟೇ ಸೀಮಿತವಾಗಿ ಪ್ರಚಾರ ನಡೆಸಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಚಿವ ಜಮೀರ್ ಅಹಮದ್ ಜೆಡಿಎಸ್ ಪರ ಮತಯಾಚನೆ ಮಾಡಿದ್ದಾರೆ.
ದೆಹಲಿಯಿಂದ ದಂಡೆತ್ತಿ ಬಂದಿದ್ದ ಕಾಂಗ್ರೆಸ್ ಅಧಿ ನಾಯಕಿ ಸೋನಿಯಾಗಾಂಧಿ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ಡಾ.ಮನಮೋಹನ್ ಸಿಂಗ್, ಚಿರಂಜೀವಿ, ಅಜರುದ್ದೀನ್, ಬಿಜೆಪಿ ಧುರೀಣರಾದ ನರೇಂದ್ರಮೋದಿ, ಎಲ್.ಕೆ.ಅಡ್ವಾನಿ, ಸುಷ್ಮಾ ಸ್ವರಾಜ್, ರಾಜನಾಥ್ ಸಿಂಗ್ ಪೈಕಿ ಯಾರೊಬ್ಬರೂ ಈ ಜಿಲ್ಲೆಯ ಕ್ಷೇತ್ರಗಳತ್ತ ತಿರುಗಿಯೂ ನೋಡಲಿಲ್ಲ.
ರಾಜ್ಯ ನಾಯಕರೂ ಇಲ್ಲ: ಬಹಿರಂಗ ಪ್ರಚಾರಕ್ಕೆ ಇನೆರಡು ದಿನಗಳಷ್ಟೇ ಬಾಕಿ ಇದ್ದು, ರಾಷ್ಟ್ರ ನಾಯಕರ ಆಗಮನ ನಿರೀಕ್ಷೆ ಇಲ್ಲ. ಕಾಂಗ್ರೆಸ್ನಲ್ಲಿ ರಾಜ್ಯದ ಪ್ರಭಾವಿ ನಾಯಕರಾಗಿರುವ ಎಸ್.ಎಂ.ಕೃಷ್ಣ, ಸಿದ್ದರಾಮಯ್ಯ, ಜಿ.ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್, ಸಿ.ಎಂ.ಇಬ್ರಾಹಿಂ, ಚಿತ್ರ ತಾರೆಯರಾದ ಅಂಬರೀಶ್, ರಮ್ಯ, ಭಾವನಾ, ದರ್ಶನ್ ರಾಮನಗರ ಜಿಲ್ಲೆ ಮಾರ್ಗವಾಗಿಯೇ ಹಾದು ಹೋದರೂ ಇಲ್ಲಿನ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಇಳಿದಿಲ್ಲ.
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಧುರೀಣರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಗೋವಿಂದ ಕಾರಜೋಳ ಸಹಿತ ಬಹುತೇಕರ ಆಗಮನವಾಗಿಲ್ಲ. ರಾಮಚಂದ್ರಗೌಡ, ಅಶ್ವತ್ಥ ನಾರಾಯಣ ಚನಪಟ್ಟಣ ಮತ್ತು ರಾಮನಗರದಲ್ಲಿ ಕೆಲವೇ ತಾಸು ರೋಡ್ ಶೋ ನಡೆಸಿ ನಿರ್ಗಮಿಸಿದ್ದಾರಷ್ಟೇ. 3 ಕಡೆ ಬಿಎಸ್ಸಾರ್ ಸ್ಪರ್ಧೆ ಇದ್ದರೂ ಶ್ರೀರಾಮುಲು ಸಹಿತ ಪ್ರಮುಖರು ಬರಲಿಲ್ಲ.
ಸ್ವಕ್ಷೇತ್ರಕ್ಕೆ ತಾರಾ ಪ್ರಚಾರಕರು: ಈ ಜಿಲ್ಲೆಯಲ್ಲಿ ಮೂವರು ಜೆಡಿಎಸ್ ಅಭ್ಯರ್ಥಿಗಳು ತಾರಾ ಪ್ರಚಾರಕರು. ಇವರಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಮನಗರದಲ್ಲಿ ನಾಮಪತ್ರ ಸಲ್ಲಿಸಿ ಹೋದವರು ಮೇ 2ಕ್ಕೆ ಸ್ವಕ್ಷೇತ್ರಕ್ಕೆ ಮರಳುತ್ತಿದ್ದಾರೆ. ಪತಿ ಅನಿತಾ ಕುಮಾರಸ್ವಾಮಿ ಚನಪಟ್ಟಣದ ಜತೆಗೆ ರಾಮನಗರದಲ್ಲೂ ಹೊಣೆ ನಿಭಾಯಿಸಿದ್ದಾರೆ. ಪಿ.ಜಿ.ಆರ್.ಸಿಂಧ್ಯಾ ಸ್ವಕ್ಷೇತ್ರ ಕನಕಪುರ ಬಿಟ್ಟು ಕದಲಲಿಲ್ಲ.
ಕುಮಾರಸ್ವಾಮಿ ಅವರು 2 ರಂದು ನಾಲ್ಕೂ ಕ್ಷೇತ್ರಗಳಲ್ಲಿ ಸಮಾವೇಶಗಳಲ್ಲಿ ಪಾಲ್ಗೊಳ್ಳುವರಲ್ಲದೆ ರಾಮನಗರ ನಗರಸಭೆ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸುವರು. ರಾಜ್ಯದ ವಿವಿಧೆಡೆ ಪ್ರಚಾರಕ್ಕೆ ಇಳಿದಿರುವ ಕಾಂಗ್ರೆಸ್ ತಾರಾ ಪ್ರಚಾರಕ ಡಿ.ಕೆ.ಶಿವಕುಮಾರ್ ನಾಳೆ(ಮೇ1) ಕನಕಪುರದಲ್ಲಿ ಕಡೆಯ ಸುತ್ತಿನ ಕಸರತ್ತಿಗೆ ಮತ್ತೆ ರಂಗಪ್ರವೇಶ ಮಾಡಲಿದ್ದಾರೆ.
ಪ್ರಚಾರದ ವೈಶಿಷ್ಟ್ಯ: ಜೆಡಿಎಸ್ನಿಂದ ರಾಮನಗರ, ಮಾಗಡಿ ಕ್ಷೇತ್ರಗಳಲ್ಲಿ ವಿಶಿಷ್ಟ ಪೆನ್ಗಳನು ಹಂಚಿಕೆ ಮಾಡಲಾಗುತ್ತಿದೆ. ಪೆನಿನ ಮೇಲ್ಭಾಗದಲ್ಲಿರುವ ಟಾರ್ಚ್ ಬಟನ್ ಒತ್ತಿದರೆ ಲೇಸರ್ ಕಿರಣಗಳ ಮೂಲಕ ಎಚ್.ಡಿ.ಕುಮಾರಸ್ವಾಮಿ ಅವರ ಭಾವಚಿತ್ರ ಮತ್ತು ಜೆಡಿಎಸ್ ಹೊರೆ ಹೊತ್ತ ಮಹಿಳೆ ಚಿಹೆ ಕಾಣುತ್ತದೆ. ಈ ಪೆನ್ಗಳ ಹಂಚಿಕೆ ವಿರುದ್ಧ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.
ಕಾಂಗ್ರೆಸ್ ಸಂಚಾರಿ ವಾದ್ಯಗೋಷ್ಠಿಗಳ ಮೂಲಕ ಗಮನ ಸೆಳೆಯಲಾರಂಭಿಸಿದೆ. ರಾಮನಗರ ಕ್ಷೇತ್ರದೆಲ್ಲೆಡೆ ಎರಡು ದಿನಗಳಿಂದ ಈ ಗೋಷ್ಠಿ ಏರ್ಪಡಿಸಿದೆ. ಜೆಡಿಎಸ್ ವಾಹನಗಳ ಮೈಕ್ಗಳಲ್ಲಿ ಜನಪ್ರಿಯ ಚಿತ್ರಗೀತೆಗಳ ಹಾಡುಗಳಿಗೆ ಎದುರಾಳಿ ಪಕ್ಷಗಳನು ಹಣಿಯುವಂತಹ ಅಂಶಗಳನು ಸೇರಿಸಿ ಡಬ್ಬಿಂಗ್ ಮಾಡಲಾಗಿದೆ. ಇದೇ ರೀತಿ ಹಾಡುಗಳು ಕೆಜೆಪಿ ವಾಹನಗಳಲ್ಲೂ ಕೇಳಿ ಬರುತ್ತಿವೆ.
ಜೆಡಿಎಸ್ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ, 20 ತಿಂಗಳ ಆಡಳಿತದ ಪ್ರಮುಖ ಯೋಜನೆಗಳನು ಬಿಂಬಿಸುವ ಸಾಕ್ಷ್ಯಚಿತ್ರವನು ಜನಸಂದಣಿ ಸೇರುವೆಡೆ ಸಂಚಾರಿ ಘಟಕದ ಪ್ರೊಜೆಕ್ಟರ್ ಮೂಲಕ ದೊಡ್ಡ ಪರದೆ ಮೇಲೆ ಪ್ರದರ್ಶಿಸಲಾಗುತ್ತಿದೆ. ಇದೇ ಪ್ರಚಾರದ ತಂತ್ರವನು ಬಿಜೆಪಿ ಪಕ್ಷವೂ ಅನುಸರಿಸಿದೆ. ಪ್ರಚಾರದಲ್ಲಿ ಒಬ್ಬರನೊಬ್ಬರು ಮೀರಿಸಲು ಹೊರಟಿದ್ದಾರೆ. ಚನಪಟ್ಟಣದಲ್ಲಿ ರೇಸ್ನಲ್ಲಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಸೈಕಲ್ ತುಳಿಯುವ ಜತೆಗೆ ರೋಡ್ ಶೋ ಮೂಲಕ ಪ್ರಚಾರನಿರತರಾಗಿದ್ದಾರೆ.
- ಮತ್ತೀಕೆರೆ ಜಯರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

