ಬೆಂಗಳೂರು ಗ್ರಾಮಾಂತರ

ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ: ಕೃಷ್ಣಮೂರ್ತಿ

Published On :

ಕ.ಪ್ರ.ವಾರ್ತೆ  ಮಾಗಡಿ  ಏ.30
ನಾನೊಬ್ಬ ಜನಪರ ಸೇವಕ, ನಾಡಪ್ರಭು ಕೆಂಪೇಗೌಡರ ನಾಡನ್ನು ಪುನರ್ ನಿರ್ಮಾಣ ಮಾಡಲು ಸಂಕಲ್ಪ ಮಾಡಿದ್ದೇನೆ. ನಿಮ್ಮೆಲ್ಲರ ಬಹುಮತವನ್ನು ಕೆಜೆಪಿ ಅಭ್ಯರ್ಥಿಯಾದ ನನಗೆ ನೀಡುವಂತೆ ಅಭ್ಯರ್ಥಿ ಎಚ್.ಎಂ. ಕೃಷ್ಣಮೂರ್ತಿ ಮತದಾರರಲ್ಲಿ ಮತಯಾಚಿಸಿದರು.
  ಅವರು ಮಾಗಡಿ ತಾಲಕಿನ ಹಲಸಬೆಲೆ, ಚಕ್ರಭಾವಿ  ಇತರೆಡೆ ಗ್ರಾಮಗಳಿಗೆ ರೋಡ್ ಶೋ  ಮೂಲಕ ತೆರಳಿ  ಮಾತನಾಡಿದರು. ನಾನು ಕಳೆದ 15 ವರ್ಷಗಳಿಂದ ನೂರಾರು ಜನಪರ ಕಾರ್ಯಕ್ರಮಗಳನ್ನು ಕ್ಷೇತ್ರದಲ್ಲಿ ಮಾಡಿಕೊಂಡು ಬಂದಿದ್ದೇನೆ. ನೀವೆಲ್ಲರು ರಾಜಕೀಯವಾಗಿ ನನಗೆ ಬಹುಮತ ನೀಡುವ ಮೂಲಕ ಶಕ್ತಿ ತುಂಬಿದರೆ ಮತ್ತೊಷ್ಟು ಅಭಿವೃದ್ಧಿಯ ಜೊತೆಗೆ ನಾಡಪ್ರಭು ಕೆಂಪೇಗೌಡರ ನಾಡನ್ನು ಕಟ್ಟುತೇನೆ ಎಂದರು.  ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅವಧಿಯಲ್ಲಿ ಜಾರಿಗೊಂಡ ವಿಶೇಷ ಯೋಜನೆಗಳು ಹಾಗೂ ಸಾಧನೆಗಳು ನನ್ನ ಗೆಲವಿಗೆ ಶ್ರೀರಕ್ಷೆಯಾಗಿದೆ. ಮತದಾರರು ಸಹ ಕೆಜೆಪಿ ಅಭ್ಯರ್ಥಿಗೆ ಮತ ನೀಡಲು ನಿರ್ಣಯ ಕೈಗೊಂಡಿದ್ದಾರೆ ಎಂದರು.
   ಇದೇ ಸಂದರ್ಭದಲ್ಲಿ ಮಠದ ಪಾಳ್ಯ, ಸೀಗೇಕುಪ್ಪೆ, ಆಗಲಕೋಟೆ, ಬಸವಯ್ಯನಪಾಳ್ಯ ಸೇರದಂತೆ ಹತ್ತಾರು ಗ್ರಾಮಗಳಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿದರು.
   ಕೆಜೆಪಿ ಯುವ ಮುಖಂಜ ಬಿ.ಎಚ್. ಮಹೇಶಯ್ಯ ಕೆಜೆಪಿ ಅಭ್ಯರ್ಥಿ ಎಚ್.ಎಂ.ಕೃಷ್ಣಮೂರ್ತಿ ಪರ ಮತಯಾಚಿಸಿದರು. ಸ್ವಾಮೇಗೌಡ, ಸೀನಪ್ಪ, ನಾಗರಾಜು, ಗಂಗಾಧರ್, ಚಂದ್ರಣ್ಣ, ಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.