ಆರ್ಥಿಕ ಸಬಲರಾಗಿದ್ದರೆ ನೆಮ್ಮದಿ ಜೀವನ: ಶಿವಾಚಾರ್ಯ ಶ್ರೀ
ಕ.ಪ್ರ.ವಾರ್ತೆ ನೆಲಮಂಗಲ ಆ.2
ಜೀವನ ಸುಖ, ಶಾಂತಿ ಮತ್ತು ನೆಮ್ಮದಿಯಿಂದ ಕೂಡಿರಬೇಕಾದರೆ ಆರ್ಥಿಕವಾಗಿ ಸಬಲರಾಗಿರಬೇಕು ಎಂದು ಶಿವಗಂಗೆಯ ಮೇಲಣಗವಿ ಮಠದ ಮಲಯ ಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ತಾಲೂಕಿನ ಶಿವಗಂಗೆಯ ವೀರಸೋಮೇಶ್ವರ ಸಭಾ ಭವನದಲ್ಲಿ ಧರ್ಮಸ್ಥಳ ಗ್ರಾಮೀಣ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಡೆದ ಸ್ವಸಹಾಯ ಸಂಘಗಳನ್ನು ಉದ್ಘಾಟಿಸಿ ಮಾತನಾಡುತ್ತಾ, ಜೀವನದ ಕಲೆಯನ್ನು ಕಲಿಯುವುದು ಕಷ್ಟವಾಗುತ್ತಿದೆ. ಕಾರಣ ಇಂದು ಹಣ ಪ್ರಧಾನವಾಗುತ್ತಿರುವುದರಿಂದ ಕುಟುಂಬದ ಸಂಬಂಧಗಳು ಸಹ ವ್ಯವಹಾರಿಕವಾಗುತ್ತಿವೆ. ಇದರಿಂದ ವಿದ್ಯಾವಂತರು ಮತ್ತು ಅವಿದ್ಯಾವಂತರು ಸಹ ಹೇಗೋ ಬದುಕುತ್ತಿದ್ದಾರೆ. ಆದರೆ ಸುಖದ ಬದುಕನ್ನು ಬಾಳಲು ಕಷ್ಟವಾಗುತ್ತಿದೆ ಎಂದರು.
ಶಿವಾನಂದ ಆಚಾರ್ಯ ಮಾತನಾಡುತ್ತಾ ಈ ಸ್ವಯಂ ಸೇವಾ ಸಂಘಗಳಿಗೆ ನೀವು ಎಲ್ಲಾ ರೀತಿಯ ಮಾರ್ಗದರ್ಶನ ಮತ್ತು ತಿಳುವಳಿಕೆ ನೀಡುತ್ತಾ ಸ್ವಯಂ ಉದ್ಯೋಗವನ್ನು ಬೆಂಬಲಿಸುತ್ತಾ ಆರ್ಥಿಕವಾಗಿ ಸದೃಢ ಮಾಡುವುದೇ ನಮ್ಮ ಸಂಸ್ಥೆಯ ಅಭಿವೃದ್ಧಿಗೆ ಒತ್ತು ನೀಡುವುದು. ಆರ್ಥಿಕವಾಗಿ ಸಬಲರನ್ನಾಗಿಸುವುದು ಸಂಸ್ಥೆಯ ಉದ್ದೇಶವಾಗಿದೆ ಎಂದರು.
ತಾ.ಪಂ.ಅಧ್ಯಕ್ಷ ಪುಟ್ಟಗಂಗಯ್ಯ, ಜಿ.ಪಂ.ಸದಸ್ಯೆ ಸುನಂದ ಶಿವಕುಮಾರ್ ಗ್ರಾ.ಪಂ. ಅಧ್ಯಕ್ಷೆ ಜಾನಕಮ್ಮ ಜಯಣ್ಣ, ಉಪಾಧ್ಯಕ್ಷ ಹೊನ್ನಗಂಗಶೆಟ್ಟಿ, ಸದಸ್ಯರಾದ ಎಸ್.ಟಿ.ಸಿದ್ದರಾಜು, ಚೇತನ ನಾಗೇಶ್, ಸಂಸ್ಥೆ ಸದಸ್ಯರಾದ ಸುಖೇಶ್, ಗಂಗಾಧರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

