ಆರು ತಿಂಗಳವರೆಗೆ ಮಕ್ಕಳಿಗೆ ಎದೆ ಹಾಲು ಉತ್ತಮ ಆಹಾರ: ಕವಿತಾ
ಕ.ಪ್ರ. ವಾರ್ತೆ ಆನೇಕಲ್ಲು ಆ.2
ತಾಯಂದಿರು ತಮ್ಮ ಮಕ್ಕಳಿಗೆ 6 ತಿಂಗಳು ತುಂಬುವ ತನಕ ಎದೆಹಾಲನ್ನು ಮಾತ್ರ ಉಣಿಸುವ ಮೂಲಕ ತಮ್ಮ ಆರೋಗ್ಯ ಹಾಗೂ ಮಕ್ಕಳ ಆರೋಗ್ಯವನ್ನು ಕಾಪಾಡಬೇಕೆಂದು ಪಾಲಿಕೆ ಸದಸ್ಯೆ ಕವಿತಾ ಬಾಬುರೆಡ್ಡಿ ತಿಳಿಸಿದ್ದಾರೆ.
ಅವರು ಪಾಲಿಕೆ ವ್ಯಾಪ್ತಿಯ 191ನೇ ವಾರ್ಡ್ ಕೂಡ್ಲು ಸರ್ಕಾರಿ ಆಸ್ಪತ್ರೆಯಲ್ಲಿ ಇನ್ನರ್‌ವೀಲ್, ಬಿಬಿಎಂಪಿ ಹಾಗೂ ಜಿಲ್ಲಾ ಆರೋಗ್ಯ ಸಮಿತಿ ಸಹಯೋಗದಲ್ಲಿ ಏರ್ಪಡಿಸಿದ್ದ ಸ್ತನ್ಯಪಾನ ಮಹತ್ವ ಕಾರ್ಯಕ್ರಮದಲ್ಲಿ ನೂರಾರು ತಾಯಂದಿರನ್ನುದ್ದೇಶಿಸಿ ಮಾತನಾಡಿ ಇಂದಿನ ಮಹಿಳೆಯರು ಬಹುಪಾಲು ಉದ್ಯೋಗಸ್ಥರಾಗಿದ್ದು ಸಮಯ ಪಾಲನೆ ಒತ್ತಡದಲ್ಲಿರುತ್ತಾರೆ. ಬಹುತೇಕ ಗಾರ್ಮೆಂಟ್ಸ್‌ಮಹಿಳೆಯರು ತಮಗಾಗಿ ರಚಿಸಿರುವ ಮಹಿಳಾ ಹಕ್ಕುಗಳು ಹಾಗೂ ರಕ್ಷಣೆ ಬಗ್ಗೆ ಅರಿತು ಮಕ್ಕಳಿಗೆ ಎದೆಹಾಲು ಕುಡಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕೆಂದರು.
ಸ್ತ್ರೀ ರೋಗ ತಜ್ಞೆ ಭಾನುಮತಿ ರವರು ಮಾತನಾಡಿ ಮಕ್ಕಳಿಗೆ ಎದೆ ಹಾಲು ಉಣಿಸಿದಲ್ಲಿ ಬಾಂಧವ್ಯ ವೃದ್ಧಿಯಾಗುತ್ತದೆ. 6 ತಿಂಗಳ ನಂತರ ಲಘು ಆಹಾಕ ನೀಡುವ ಮೂಲಕ 2 ವರ್ಷದ ವರೆಗೆ ಸ್ತನ್ಯಪಾನ ಮುಂದುವರಿಸಿ. ಮಕ್ಕಳಿಗೆ ಕ್ಯಾಲ್ಷಿಯಂ ದೊರೆತು ಮೂಳೆಗಳು ಗಟ್ಟಿಯಾಗಿರುತ್ತವೆ ಎಂದರು. ವೈದ್ಯಾಧಿಕಾರಿ ಲತಾ ಮಾತನಾಡಿ ಸರ್ಕಾರದಿಂದ ಬಸುರಿ ಅವಧಿಯಲ್ಲಿ ಉಚಿತ ತಪಾಸಣೆ, ಪೌಷ್ಟಿಕಾಂಶಯುಕ್ತ ವಿಟಮಿನ್, ರೋಗ ನಿರೋಧಕ ಇಂಜಕ್ಷನ್ ದೊರೆಯುತ್ತದೆ. ಹೆರಿಗೆ ನಂತರ ಮಡಿಲು ಕಿಟ್, ಮಕ್ಕಳಿಗೆ ಉಪಯುಕ್ತವಾಗುವ ಔಷಧಿ ಮುಂತಾದವುಗಳ ಉಚಿತವಾಗಿ ಲಭ್ಯವಿದ್ದು, ನಗದು ನೀಡುವ ಸೌಲಭ್ಯವಿದೆ. ತಾಯಂದಿರು ದಯಮಾಡಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿ. ಖಾಸಗಿ ನರ್ಸಿಂಗ್ ಹೋಂನಲ್ಲಿ ಕೃತಕ ನೋವು ಬರುವ ಇಂಜಕ್ಷನ್ ನೀಡಿ ಸಿಸೇರಿಯನ್‌ಗೆ ಪ್ರೇರೇಪಿಸುತ್ತಾರೆ. ಸಹಜ ಹೆರಿಗೆ, ಆರೋಗ್ಯವಂತ ಜೀವನಕ್ಕಾಗಿ ಸರ್ಕಾರಿ ಆಸ್ಪತ್ರೆಯ ಸೌಲಭ್ಯಗಳನ್ನು ಪಡೆಯಿರಿ ಎಂದರು. ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ನಿರ್ಮಲಾ ಪಾಟಿಲ್, ಪ್ರಿಯಾ, ಜಿಲ್ಲಾ ವೈದ್ಯಾಧಿಕಾರಿ ಸುರೇಶ್, ಮಹೇಶ್, ನಿಶ್ಚಲ್ ಬಾಬು ಇದ್ದರು.
ಮಾಗಡಿ ತಾಪಂ ಪ್ರಭಾರ ಅಧ್ಯಕ್ಷೆ ಅನಿಸಾ ಖಾನಂ
ಮಾಗಡಿ: ತಾಲೂಕು ಪಂಚಾಯ್ತಿಗೆ ಶುಕ್ರವಾರ ಪ್ರಭಾರ ಅಧ್ಯಕ್ಷರಾಗಿ ಅನಿಸಾ ಖಾನಂ ಅವರನ್ನು ನೇಮಕ ಮಾಡಿರುವುದಾಗಿ ತಾ.ಪಂ. ಇಓ ಕೆ.ಬಿ. ಅಕ್ಕೋಜಿ ಘೋಷಿಸಿದರು. ತಾಲೂಕು ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ಬಿ.ಟಿ. ವೆಂಕಟೇಶ್ ರಾಜಿನಾಮೆ ನೀಡಿದ್ದು, ರಾಜಿನಾಮೆ ಅಂಗೀಕಾರವಾದ ಹಿನ್ನೆಲೆಯಲ್ಲಿ ಆ ಸ್ಥಾನವನ್ನು ತುಂಬಬೇಕಾಗಿತ್ತು. ಈ ನಿಟ್ಟಿನಲ್ಲಿ ಉಪಾಧ್ಯಕ್ಷೆ ಅನಿಸಾ ಖಾನಂ ಅವರನ್ನು ಪ್ರಭಾರ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ನೀಡಿರುವುದಾಗಿ ಅಕ್ಕೋಜಿ ತಿಳಿಸಿದರು. ತಾ.ಪಂ. ಮಾಜಿ ಅಧ್ಯಕ್ಷರಾದ ಬಿ.ಟಿ. ವೆಂಕಟೇಶ್, ಎಸ್. ಕಾಂತರಾಜು, ಜಿ.ವಿ. ರಾಮಣ್ಣ, ಸದಸ್ಯರಾದ ಭಾರತಿ ಮಹದೇವಯ್ಯ, ಮರಿಗೌಡ, ಉದ್ದೀಶ್, ಶಿವಪ್ರಸಾದ್, ಮೂರ್ತಿ,ನಾಗರಾಜು ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

