ಬೆಂಗಳೂರು ಗ್ರಾಮಾಂತರ

ಶ್ರೀ ರಾಮಕೃಷ್ಣಾಚಾರ್ಯ ದೈವಾಧೀನ

Published On :

ನೆಲಮಂಗಲ: ತಾಲೂಕಿನ ಬಸವನಹಳ್ಳಿ ಶ್ರೀ ರಾಮಾನುಜಾಶ್ರಮ ಆಚಾರ್ಯ ಪೀಠಂನ ಗುರುಗಳಾದ ಅಭಿನವ ರಾಮಾನುಜ ಶ್ರೀ ರಾಮಕೃಷ್ಣಾಚಾರ್ಯ(85)  ರವರು ಶನಿವಾರ ಸಂಜೆ ಹೃದಯಾಘಾತದಿಂದ ದೈವಾಧೀನರಾಗಿದ್ದಾರೆ. ವೈಷ್ಣವ ಸಮಾಜದ ಗುರುಗಳಾದ ಅವರು ಧಾರ್ಮಿಕ ಕಾರ್ಯಗಳು ನಿರ್ವಹಿಸಿ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿದ್ದರು. ಗುರುಗಳ ಆತ್ಮಕ್ಕೆ ತಾಲೂಕು ವೈಷ್ಣವ ಬಂಧುಗಳು ಶಾಂತಿ ಕೋರಿದ್ದಾರೆ.

ಜೆಡಿಎಸ್ ಮುಖಂಡ ಕೃಷ್ಣಪ್ಪ ನಿಧನ
ದೊಡ್ಡಬಳ್ಳಾಪುರ: ತಾಲೂಕಿನ ಮುಕ್ಕೇನಹಳ್ಳಿ ಗ್ರಾಮದ ಜೆಡಿಎಸ್ ಮುಖಂಡ ಎನ್.ಕೃಷ್ಣಪ್ಪ (61) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ ಪತ್ನಿ, ಮೂವರು ಮಕ್ಕಳಿದ್ದಾರೆ. ಯಲಹಂಕದ ಖಾಸಗಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ದೇವನಹಳ್ಳಿ ಶಾಸಕ ಪಿಳ್ಳಮುನಿಶಾಮಪ್ಪ, ಮಾಜಿ ಸಂಸದ ನಾರಾಯಣಸ್ವಾಮಿ, ಜೆಡಿಎಸ್ ಮುಖಂಡ ಅಪ್ಪಯ್ಯಣ್ಣ ಮತ್ತಿತರರು ದರ್ಶನ ಪಡೆದರು.

ರಾಜ್ಯ ಮಟ್ಟಕ್ಕೆ ಆಯ್ಕೆ
ವಿಜಯಪುರ: ಇಲ್ಲಿನ ಪ್ರಗತಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಎಂ.ಸುಪ್ರೀತ್ ಗೌಡ ಹೊಸಕೋಟೆಯಲ್ಲಿ ನಡೆದ ಜಿಲ್ಲಾ ಮಟ್ಟದ ಇನ್‌ಸ್ಪೈರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಗಳಿ ಸಿದ್ದು ರಾಜ್ಯ ಮಟ್ಟಕ್ಕೆ ಆಯ್ಕೆಯಾ ಗಿದ್ದಾನೆ. ಶಾಲಾ ಅಡಳಿತ ಮಂಡ ಳಿಯ ಅಧ್ಯಕ್ಷ ಎಂ. ಸತೀಶ್ ಕುಮಾರ್, ಮುಖ್ಯೋಪಾಧ್ಯಯರು ವಿದ್ಯಾರ್ಥಿ ಹಾಗೂ ಮಾರ್ಗದರ್ಶನ ನೀಡಿದಂತಹ ಶಿಕ್ಷಕರನ್ನು ಅಭಿನಂದಿಸಿದ್ದಾರೆ.

ಟ್ರಾಲಿಗೆ ಬೈಕ್ ಡಿಕ್ಕಿ: ಎಂಜಿನಿಯರ್ ಸಾವು
ಹೊಸಕೋಟೆ: ಪಟ್ಟಣದ ರಾಷ್ಟೀಯ ಹೆದ್ದಾರಿ ಗೌತಮ್ ಕಾಲೋನಿ ಬಳಿ ಸಂಭವಿಸಿದ ಅಪಘಾತದಲ್ಲಿ ಸಾಫ್ಟ್‌ವೇರ್  ಎಂಜಿನಿಯರ್ ಒಬ್ಬರು ಮೃತಪಟ್ಟಿದ್ದಾರೆ. ಬೆಂಗಳೂರಿನ ಆದಿತ್ಯ ಬಿರ್ಲಾ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅವರು ಕೆ.ಆರ್.ಪುರಂ ಬಳಿಯ ಬಸವನಪುರ ಮುಖ್ಯ ರಸ್ತೆ ಬಳಿ ವಾಸಿಸುತ್ತಿದ್ದರು.  ಪತ್ನಿ ಶ್ರುತಿ ರೆಡ್ಡಿಯೊಂದಿಗೆ ಮೋಟಾರ್ ಬೈಕಿನಲ್ಲಿ ತಿರುಪತಿಗೆ ತೆರಳುತಿದ್ದರು. ರಸ್ತೆ ಬದಿ ನಿಂತಿದ್ದ ಕಂಬಿ ತುಂಬಲು ಬಳಸುವ ಟ್ರಾಲಿಗೆ ಹಿಂದಿನಿಂದ ಡಿಕ್ಕಿ ಹೊಡೆದು  ಸ್ಥಳದಲ್ಲೇ ಅವರು ಮೃತಪಟ್ಟರು. ಹೊಸಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.