ಬೆಂಗಳೂರು ಗ್ರಾಮಾಂತರ

ಹೈಕೋರ್ಟ್ ಮಾತಿಗೆ ಪೈಲಟ್ ಚಪ್ಪಾಳೆ

Published On :

ಬೆಂಗಳೂರು: ಸದಾ ವಾದ- ವಿವಾದಗಳನ್ನಷ್ಟೇ ಕಾಣುವ ಹೈಕೋರ್ಟ್ನಲ್ಲಿ ಸೋಮವಾರ ಚಪ್ಪಾಳೆಯ ಸದ್ದು! ಇದು ನಡೆದದ್ದು ಕಿಂಗ್ಫಿಶರ್ ಏರ್ಲೈನ್ಸ್ ಸಂಸ್ಥೆಯ ತೆರಿಗೆ ಪಾವತಿ ವಿವಾದಕ್ಕೆ ಸಂಬಂಧಿಸಿದ ವಿಚಾರಣೆ ಸಂದರ್ಭದಲ್ಲಿ. ಗಗನದಲ್ಲಿ ಹಾರಾಡುವುದನ್ನೇ ವೃತ್ತಿಯಾಗಿಸಿಕೊಂಡ ಪೈಲೆಟ್ಗಳು ತಮಗೆ ಬರಬೇಕಾದ ವೇತನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ನ್ಯಾ. ರಾಮಮೋಹನರೆಡ್ಡಿ, ಸಿಬ್ಬಂದಿಯ ಕುರಿತು ಕಾಳಜಿ ವ್ಯಕ್ತಪಡಿಸಿದರು. ಇದರಿಂದ ಸಂತಸಗೊಂಡ ಸಿಬ್ಬಂದಿ ನ್ಯಾಯಾಲಯದಲ್ಲೇ ಚಪ್ಪಾಳೆ ಸುರಿಮಳೆ ಸುರಿಸಿದರು. ಇದಕ್ಕೆ ಪ್ರತಿಕ್ರಯಿಸಿದ ನ್ಯಾಯಮೂರ್ತಿಗಳು, ಚಪ್ಪಾಳೆಯೆಲ್ಲಾ ಬೇಡ, ನಾನೇನು ರಾಜಕಾರಣಿಯಲ್ಲ. ಇದು ನ್ಯಾಯಾಲಯ ಎಂದು ಅವರನ್ನು ಸುಮ್ಮನಾಗಿಸಿ ವಿಚಾರಣೆ ಮುಂದುವರಿಸಿದರು. ಕಿಂಗ್ಫಿಷರ್ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸುಮಾರು 7 ಸಾವಿರ ಸಿಬ್ಬಂದಿಯ ಹಲವು ತಿಂಗಳ ವೇತನ ಬಾಕಿ ಇದ್ದು, ಅದನ್ನು ಪಾವತಿಸಲು ಸಂಸ್ಥೆಯ ಆಡಳಿತ ಮಂಡಳಿ ಮನಸ್ಸು ಮಾಡುತ್ತಿಲ್ಲ. ಇದರಿಂದ ಸಿಬ್ಬಂದಿ ಬೀದಿಗೆ ಬರುವ ಪರಿಸ್ಥಿತಿಗೆ ಬಂದಿದ್ದಾರೆ ಎಂದು ಅರ್ಜಿಯಲ್ಲಿ ಕೋರಲಾಗಿತ್ತು. ಇದನ್ನು ಪರಿಗಣಿಸಿದ ನ್ಯಾಯಮೂರ್ತಿಗಳು, ಸಂಸ್ಥೆ ಪರ ವಕೀಲರಿಗೆ ಸಿಬ್ಬಂದಿಯ ಕುರಿತು ಕಾಳಜಿ ವಹಿಸಲು ಸೂಚಿಸಿದರು. ಅವರು ಕೆಲಕಾಲ ನಿಮಗಾಗಿ ಕೆಲಸ ಮಾಡಿದ್ದಾರೆ. ಅವರ ಹಸಿವು ನೀಗಿಸುವುದು ನಿಮ್ಮ ಕರ್ತವ್ಯ. ಅವರನ್ನು ಮಾನವೀಯ ದೃಷ್ಟಿಯಿಂದ ನೋಡಿ ಎಂದು ಸಲಹೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.