ಅಂತಿಮವಾಗಿ ಕಣದಲ್ಲಿ 13 ಅಭ್ಯರ್ಥಿಗಳು
ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮರು ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಕೃಷ್ಣಪ್ಪ ಅವರು ನಾಮಪತ್ರ ವಾಪಸ್ ಪಡೆದಿದ್ದಾರೆ. ಕಣದಲ್ಲಿ 13 ಅಭ್ಯರ್ಥಿಗಳಿದ್ದು, ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
ಚುನಾವಣೆಗೆ ಸ್ಪರ್ಧೆ ಬಯಸಿದ್ದ 20 ಅಭ್ಯರ್ಥಿಗಳ ಪೈಕಿ 6 ಮಂದಿಯ ನಾಮಪತ್ರಗಳು ತಿರಸ್ಕೃತಗೊಂಡಿದ್ದವು. 14 ಮಂದಿ ಅಭ್ಯರ್ಥಿಗಳ ಪೈಕಿ ನಾಮಪತ್ರ ಹಿಂತೆಗೆದುಕೊಂಡವರು ಕೃಷ್ಣಪ್ಪ ಅವರೊಬ್ಬರೇ. ಉಳಿದೆಲ್ಲರೂ ಕಣದಲ್ಲಿದ್ದಾರೆ. ಕೃಷ್ಣಪ್ಪ ಅವರ ನಾಮಪತ್ರಕ್ಕೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಧ್ಯಕ್ಷ ರಮೇಶ್ ಸೂಚಕರಾಗಿದ್ದರು. ನಾಮಪತ್ರ ವಾಪಸ್ ಪಡೆಯಲು ಕೃಷ್ಣಪ್ಪ ನೀಡಿದ್ದ ಪತ್ರವನ್ನು ರಮೇಶ್ ಚುನಾವಣಾಧಿಕಾರಿಗೆ ಸಲ್ಲಿಸಿದರು. ಈ ವೇಳೆ ರಾಮನಗರ ಜಿಲ್ಲಾಧ್ಯಕ್ಷ ಬಿ.ನಾಗರಾಜು, ಮಾಜಿ ಅಧ್ಯಕ್ಷ ಶಿವಮಾದು ಇತರರಿದ್ದರು.
ನಾಮಪತ್ರ ಹಿಂತೆಗೆತಕ್ಕೆ ಬುಧವಾರ ಕಡೆಯ ದಿನವಾಗಿತ್ತು. ಮಧ್ಯಾಹ್ನ 3ರ ಬಳಿಕ ಚುನಾವಣಾಧಿಕಾರಿ ಶ್ರೀರಾಮರೆಡ್ಡಿ ಅವರು ಚಿಹ್ನೆಯೊಂದಿಗೆ ಕ್ರಮ ಸಂಖ್ಯೆವಾರು ಅಭ್ಯರ್ಥಿಗಳ ಪಟ್ಟಿಯನ್ನು ಆಖೈರುಗೊಳಿಸಿದ್ದಾರೆ.
ಅಭ್ಯರ್ಥಿಗಳ ಅಂತಿಮ ಪಟ್ಟಿ: ಅನಿತಾ ಕುಮಾರಸ್ವಾಮಿ (ಜೆಡಿಎಸ್), ಡಿ.ಕೆ.ಸುರೇಶ್ (ಕಾಂಗ್ರೆಸ್), ಕುಣಿಗಲ್ ಶಿವಣ್ಣ(ಆರ್ಪಿಐ), ಜೆ.ಟಿ.ಪ್ರಕಾಶ್ (ಜೆಡಿಯು), ಬೂದಯ್ಯ ಬಿ.ಪೂಜೇರಿ (ಕರುನಾಡ ಪಾರ್ಟಿ), ಕೆ.ಎ.ಮೋಹನ್ ಕಾಮರಾಜರ್ ದೇಶೀಯ ಕಾಂಗ್ರೆಸ್), ಕಾಳಯ್ಯ, ಎ.ಚೌರಪ್ಪ, ಜೆ.ನಟರಾಜು, ಮಲ್ಲೇಶ, ಮಾಡಬಾಳ್ ಜಯರಾಮ್, ಟಿ.ಎಂ.ಮಂಚೇಗೌಡ, ಎಸ್.ಸಿದ್ದರಾಮಯ್ಯ ಉರುಫ್ ಹೆಗ್ಗಡೆ(ಪಕ್ಷೇತರರು) ಕಣದಲ್ಲಿರುವ ಅಭ್ಯರ್ಥಿಗಳು.
ಬಿಜೆಪಿ ರಾಷ್ಟ್ರೀಯ ವರಿಷ್ಠರ ಆದೇಶದಂತೆ ಪಕ್ಷದ ಅಭ್ಯರ್ಥಿ ಎಂ.ಕೃಷ್ಣಪ್ಪ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಾಮಪತ್ರ ವಾಪಸ್ ಪಡೆದಿದ್ದಾರೆ. ಬಿಜೆಪಿ ಈಗಲೂ ಮೈತ್ರಿ ಮಾಡಿಕೊಂಡಿಲ್ಲ. ಚುನಾವಣೆಯಲ್ಲಿ ಯಾರನ್ನು ಬೆಂಬಲಿಸಬೇಕು ಎನ್ನುವ ಬಗ್ಗೆ ವರಿಷ್ಠರ ಸೂಚನೆಯಂತೆ ನಡೆದುಕೊಳ್ಳಲಾಗುವುದು.
ಬಿ.ನಾಗರಾಜು, ಬಿಜೆಪಿ ರಾಮನಗರ ಜಿಲ್ಲಾಧ್ಯಕ್ಷ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

