ಬಿ.ನಾಗೇಶ್ ಬಿಜೆಪಿಯಿಂದ ಜೆಡಿಎಸ್ ಸೇರಲು ನಿರ್ಧಾರ
ರಾಮನಗರ: ನಗರಸಭೆಯ ಬಿಜೆಪಿ ಸದಸ್ಯ ಬಿ.ನಾಗೇಶ್ ಜೆಡಿಎಸ್ ಸೇರಲು ನಿರ್ಧರಿಸಿದ್ದಾರೆ. ನಗರದಲ್ಲಿ ನಾಳೆ(ಆ.8) ನಡೆಯುವ ಜೆಡಿಎಸ್ ಸಭೆಯಲ್ಲಿ ಅವರು ವರಿಷ್ಠರ ಸಮ್ಮುಖದಲ್ಲಿ ಸೇರ್ಪಡೆ ಆಗಲಿದ್ದಾರೆ ಎಂದು ಮೂಲಗಳು ದೃಢಪಡಿಸಿವೆ.
ಸತತ ಎರಡನೇ ಬಾರಿಗೆ ಬಿಜೆಪಿಯಿಂದ ಪುರಪಿತವಾಗಿರುವ ನಾಗೇಶ್ ಅವರನ್ನು ಸೆಳೆಯಲು ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಪ್ರಯತ್ನಿಸಿದ್ದವು. ಕಡೆಗೆ, ನಾಗೇಶ್ ಜೆಡಿಎಸ್ ಮನಮೊಲಿಕೆಗೆ ಮಣಿದಿದ್ದಾರೆ.
ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ರಾಜು ಮತ್ತು ರಾ-ಚ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ರಾಜಶೇಖರ್ ಅವರು ಪಕ್ಷಕ್ಕೆ ಬರ ಮಾಡಿಕೊಳ್ಳುವ ನಿಟ್ಟಿನಲ್ಲಿ ನಾಗೇಶ್ ಜತೆ ನಡೆಸಿರುವ ಮಾತುಕತೆ ಫಲಪ್ರದವಾಗಿದೆ.
ನಗರಸಭೆಯಲ್ಲಿ 7ನೇ ವಾರ್ಡ್ ಪ್ರತಿನಿಧಿಸುತ್ತಿರುವ ನಾಗೇಶ್ ಸೇರ್ಪಡೆಯಿಂದ ಆ ಭಾಗದಲ್ಲಿ ಲೋಕಸಭೆ ಚುನಾವಣೆಯಲ್ಲಿ ಅನುಕೂಲ ಆಗುವುದಷ್ಟೇ ಅಲ್ಲದೆ, ನಗರಸಭೆ ಚುಕ್ಕಾಣಿ ಹಿಡಿಯುವ ಜೆಡಿಎಸ್ ಯತ್ನವೂ ಫಲಿಸುವ ಸಾಧ್ಯತೆ ಹೆಚ್ಚಲಿದೆ.
ಸಂಖ್ಯಾ ಬಲ ಏರುಪೇರು: 31 ಚುನಾಯಿತ ಸದಸ್ಯರು, ಇಬ್ಬರು ಶಾಸಕರು ಸೇರಿದಂತೆ ನಗರಸಭೆಯಲ್ಲಿ ವರಿಷ್ಠರ ಚುನಾವಣೆಗೆ ಮತ ಚಲಾಯಿಸುವವರ ಸಂಖ್ಯೆ 33 ಆಗಿದೆ. ಲೋಕಸಭೆ ಚುನಾವಣೆ ಮುಗಿದ ನಂತರ ಸಂಸದರ ಮತವೂ ಲಭ್ಯವಾಗಲಿದ್ದು, ಸಂಖ್ಯೆ 34ಕ್ಕೆ ಏರುತ್ತದೆ.
ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 16, ಜೆಡಿಎಸ್ 12, ಬಿಜೆಪಿ 2 ಮತ್ತು ಪಕ್ಷೇತರ 1 ಸ್ಥಾನದಲ್ಲಿ ಗೆಲವು ಸಾಧಿಸಿದ್ದಾರೆ. ಕಾಂಗ್ರೆಸ್ ಬೆಂಬಲ ಗಿಟ್ಟಿಸಿ ಆಯ್ಕೆಯಾಗಿದ್ದ ಏಕೈಕ ಪಕ್ಷೇತರ ವಿಧಾನಸಭೆ ಚುನಾವಣೆಯಲ್ಲೇ ಜೆಡಿಎಸ್ ಸೇರಿದ್ದಾಗಿದೆ.
ಬಿಜೆಪಿಯ ಇಬ್ಬರು ಸದಸ್ಯರ ಪೈಕಿ ನಾಗೇಶ್ ಕೂಡ ಜೆಡಿಎಸ್ ಕಡೆ ಮುಖ ಮಾಡಿದ್ದಾರೆ. ಬಿಜೆಪಿಯಲ್ಲಿ ಉಳಿಯುವುದು ರತ್ನಮ್ಮ ಅವರೊಬ್ಬರೇ. ಪಕ್ಷೇತರ, ಬಿಜೆಪಿಯ ನಾಗೇಶ್, ಶಾಸಕರಾದ ಕುಮಾರಸ್ವಾಮಿ, ಅಪ್ಸರ್ ಆಗಾ ಸಹಿತ ಜೆಡಿಎಸ್ ಮತಗಳು 16 ಆಗುತ್ತವೆ.
ಲೋಕಸಭೆ ಫಲಿತಾಂಶಕ್ಕೆ ಮುನ್ನವೇ ನಗರಸಭೆ ವರಿಷ್ಠರ ಚುನಾವಣೆ ನಡೆದರೆ ಜೆಡಿಎಸ್ ಮತ್ತು ಬಿಜೆಪಿ ಬಲ ತಲಾ 16 ಆಗಲಿದ್ದು, ಬಿಜೆಪಿಯಲ್ಲಿ ಉಳಿಯಲಿರುವ ರತ್ನಮ್ಮ ನಿರ್ಣಾಯಕರಾಗುತ್ತಾರೆ. ಮರು ಚುನಾವಣೆ ಬಳಿಕ ಜೆಡಿಎಸ್ ಇಲ್ಲವೇ ಕಾಂಗ್ರೆಸ್ ಮತ 1 ಹೆಚ್ಚುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

