ಕುಂದಾಣ ಗ್ರಾಮದಲ್ಲಿ ಪಿಂಚಣಿ ಅದಾಲತ್
ದೇವನಹಳ್ಳಿ: ದೇವನಹಳ್ಳಿ ತಾಲೂಕು ಕುಂದಾಣ ಗ್ರಾಮ ಪಂಚಾಯಿತಿ ಕಚೇರಿ ಬಳಿ ಗುರುವಾರ ಸಾಮಾಜಿಕ ಭದ್ರತಾ ಯೋಜನೆಗಳ ಪಿಂಚಣಿ ಅದಾಲತ್ ಹೋಬಳಿ ಮಟ್ಟದ ಸಮಾರಂಭ ಆಯೋಜಿಸಲಾಗಿತ್ತು.
ಸಮಾರಂಭದ ಉಧ್ಘಾಟನೆಯನ್ನು ಶಾಸಕ ಪಿಳ್ಳಮುನಿಶಾಮಪ್ಪ ನೆರವೇರಿಸಿ ಕುಂದಾಣ ಹೋಬಳಿ ವ್ಯಾಪ್ತಿಗೆ 57 ಗ್ರಾಮಗಳು ಬರಲಿದ್ದು ಈ ಎಲ್ಲ ಗ್ರಾಮಗಳಲ್ಲಿನ ವಯೋವೃದ್ಧರನ್ನು ಗುರುತಿಸಿ ಅವರಿಗೆ ಸರ್ಕಾರದ ಯೋಜನೆಯಂತೆ ಪಿಂಚಣಿ ಮಂಜೂರಾತಿ ಪತ್ರ ಮನೆ ಬಾಗಿಲಿನಲ್ಲಿಯೇ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರಲ್ಲದೆ ವಯಸ್ಸಾದವರು ನೆಮ್ಮದಿಯಿಂದ ಬಾಳುವುದೇ ಸರ್ಕಾರದ ಗುರಿಯಾಗಿದೆ ಎಂದರಲ್ಲದೆ ತಾವು ಮಂಡಲ ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಸಂದರ್ಭದಲ್ಲಿ ತಮ್ಮ ಬಳಿ ಬಂದವರಿಗೆ ಸರ್ಕಾರದಿಂದ ಆಗಬಹುದಾದ ಕೆಲಸಗಳ ಬಗ್ಗೆ ಸ್ಥಳದಲ್ಲಿಯೇ ಶಿಫಾರಸು ಪತ್ರ ನೀಡುತ್ತಿದ್ದು ಈಗಲೂ ಆ ಕಾರ್ಯವನ್ನು ಮುಂದುವರೆಸುತ್ತಿದ್ದೇನೆ ಎಂದರು.
ಸರ್ಕಾದಿಂದ ಪಿಂಚಣಿದಾರರಿಗೆ ಹಣ ತಲುಪಿಸುತ್ತಿರುವ ಅಂಚೆ ಇಲಾಖೆ ನೌಕರರು ಫಲಾನುಭವಿಗಳಿಂದ ಲಂಚ ಪಡೆಯುತ್ತಿರುವ ಬಗ್ಗೆ ದೂರುಗಳು ಇದ್ದರೆ ತಮಗೆ ಕೂಡಲೇ ತಿಳಿಸಬೇಕೆಂದು ಶಾಸಕರು ತಿಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಉಪವಿಭಾಗಾಧಿಕಾರಿಗಳಾದ ಡಾ.ಮಹೇಶ್ ವಹಿಸಿ ಮುಖ್ಯ ಮಂತ್ರಿಗಳ ಆದೇಶದ ಮೇರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲ ಹೋಬಳಿ ಕೇಂದ್ರಗಳಲ್ಲಿ ಪ್ರತಿ 15 ದಿನಕ್ಕೊಮ್ಮೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆಲ್ಲಾ ಪಿಂಚಣಿ ಮಾನ್ಯತಾ ಪತ್ರ ನೀಡಲಾಗುವುದು ಎಂದರಲ್ಲದೆ ಎಲ್ಲ ಗ್ರಾಮಗಳಲ್ಲಿ ಗ್ರಾಮ ಲೆಕ್ಕಿಗರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಅರ್ಹ ಫಲಾನುಭವಿಗಳನ್ನು ಗುರ್ತಿಸುತ್ತಾರೆ ಎಂದರು.
ತಹಸೀಲ್ದಾರ್ ಡಾ.ವೆಂಕಟರಾಜು ಮಾತನಾಡಿ ತಾಲೂಕಿನಲ್ಲಿರುವ ಪಿಂಚಣಿಗೆ ಅರ್ಹರಾಗಿರುವವರು ತಮ್ಮ ಬಳಿ ಬಂದಲ್ಲಿ ಒಂದು ವಾರದೊಳಗಾಗಿ ಅರ್ಹತಾ ಮಂಜೂರಾತಿ ಪತ್ರ ನೀಡಲಾಗುವುದು ಎಂದು ತಿಳಿಸಿದರು.
ಸಮಾರಂಭದಲ್ಲಿ ಕುಂದಾಣ ಹೋಬಳಿಯ ಉಪ ತಹಸೀಲ್ದಾರ್ ಅಜಿತ್ ರೈ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಎಂ.ಬೀರಪ್ಪ, ತಾಲೂಕು ಪಂಚಾಯಿತಿ ಅಧ್ಯಕ್ಷರಾದ ರಾಧಿಕಾ ತ್ಯಾಗರಾಜ್, ಉಪಾಧ್ಯಕ್ಷರಾದ ಪಟಾಲಪ್ಪ, ಕುಂದಾಣ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋಧಮ್ಮ, ಉಪಾಧ್ಯಕ್ಷರಾದ ಚಂದ್ರಪ್ಪ, ತಾ.ಪಂ. ಮಾಜಿ ಅಧ್ಯಕ್ಷರಾದ ಹನುಮಂತೇಗೌಡ, ಮುಖಂಡರಾದ ಸೊಣ್ಣಪ್ಪ, ಸುಬ್ಬೇಗೌಡ ಉಪಸ್ಥಿತರಿದ್ದರು.
ಹೊಸಕೋಟೆ: ಅಪರಿಚಿತ ವ್ಯಕ್ತಿ ಸಾವು
ಹೊಸಕೋಟೆ: ಪಟ್ಟಣದ ಸಂತೆ ಸರ್ಕಲ್ ಬಳಿಯ ಮೇಲ್ಸೆತುವೆ ಕೆಳಗೆ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾನೆ . ಮೃತನು ಸುಮಾರು 70ವರ್ಷ ವಯಸ್ಸಿನವನಾಗಿದ್ದು, 5.2 ಆಡಿ ಎತ್ತರ ಬಿಳಿ ಗಡ್ಡ, ಬಿಳಿ ತಲೆಗೂದಲು ಹೊಂದಿರುತ್ತಾನೆ. ಹೊಟ್ಟೆಯ ಮೇಲೆ ಶಸ್ತ್ರಚಿಕಿತ್ಸೆ ಮಾಡಿರುವ ಗುರುತಿದೆ. ಬಹುಶಃ ಯಾವುದೋ ಕಾಯಿಲೆಯಿಂದ ನರಳಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ಹೊಸಕೋಟೆ ಪೊಲೀಸ್ ಠಾಣೆ ದೂ.(080) 27931570 ಸಂಪರ್ಕಿಸಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

