ಬೆಂಗಳೂರು ಗ್ರಾಮಾಂತರ

ಜೆಡಿಎಸ್ ಗೆಲವು ಖಚಿತ: ಪುಟ್ಟಣ್ಣ

Published On :

ಆನೇಕಲ್ಲು: ಯುಪಿಎ ಸರ್ಕಾರದ ಕೆಟ್ಟ ನಿರ್ಧಾರಗಳಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ದುರ್ಬಲವಾಗಿದೆ. ಹಗರಣಗಳ ಸಾಲು ದೊಡ್ಡದಿದ್ದರೂ ತಪ್ಪಿಲ್ಲದಂತೆ ವರ್ತಿಸುವ ಗೋಸುಂಬೆ ನೀತಿಯಿಂದಾಗಿ ದೇಶ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂದು ವಿಧಾನ ಪರಿಷತ್ ಮಾಜಿ ಉಪ ಸಭಾಪತಿ ಪುಟ್ಟಣ್ಣ ತಿಳಿಸಿದ್ದಾರೆ. ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣಾ ಸಂಬಂಧ ಬೊಮ್ಮಸಂದ್ರದಲ್ಲಿ ಏರ್ಪಡಿಸಿದ್ದ ಪ್ರಮುಖ ಕಾರ್ಯಕರ್ತರ ಸಭೆ ನಂತರ ಮಾತನಾಡಿ ಜೆಡಿಎಸ್ ಎಲ್ಲ ಉಪ ಚುನಾವಣೆಗಳಲ್ಲೂ ಗೆದ್ದಿದೆ. ಯುಪಿಎ ಸರ್ಕಾರದ  ಪ್ರಮುಖ ಪಾಲುದಾರ ಕಾಂಗ್ರೆಸ್ ಈ ಚುನಾವಣೆಯನ್ನು ಮುಂದೂಡಿ ನಷ್ಟವನ್ನು ತಡೆಯಬಹುದಿತ್ತು. ಉಪ ಚುನಾವಣೆ ಮುಂಬರುವ ಚುನಾವಣೆಗೆ ದಿಕ್ಸೂಚಿಯಾಗಿದ್ದು ಎಲ್ಲ ಕಾರ್ಯಕರ್ತರನ್ನು ಒಗ್ಗೂಡಿಸಿ ಗೆಲವಿಗಾಗಿ ಹೋರಾಟ ಮಾಡಲಾಗುವುದು ಎಂದರು. ಆಗಸ್ಟ್ 11ರಂದು ಬನ್ನೇರುಘಟ್ಟದ ಆನಂದ ಸಭಾಗೃಹದಲ್ಲಿ ನಡೆಯುವ ಸಬೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು,  ಕುಮಾರಸ್ವಾಮಿರವರು ಹಾಗೂ ಅಭ್ಯರ್ಥಿ ಅನಿತಾ ಕುಮಾರಸ್ವಾಮಿರವರು ಭಾಗವಹಿಸಿಲಿದ್ದಾರೆ. ಆ.13ರಂದು ಆನೇಕಲ್ ಪಟ್ಟಣದಲ್ಲಿ ಸಭೆ ಏರ್ಪಡಿಸಲಿದ್ದು ಅಲ್ಲಿಯೂ ಮೂವರು ಭಾಗವಹಿಸಲಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಪರೋಕ್ಷವಾಗಿ ಜೆಡಿಎಸ್‌ಗೆ ಬೆಂಬಲ ವ್ಯಕ್ತಪಡಿಸಿದೆ. ಹಾಗಾಗಿ ನಮ್ಮ ಗೆಲವು ಸುಲಭ ಎಂದರು. ತಾಲೂಕು ಮುಖಂಡರಾದ ಅತ್ತಿಬೆಲೆ ಪಟಾಪಟ್ ರವಿ, ಎನ್. ಎಸ್. ಅಶ್ವತ್ಥ ನಾರಾಯಣ, ಹನುಮದಾಸ್, ಜಗನ್ನಾಥ್, ನಾರಾಯಣಸ್ವಾಮಿ, ವೆಂಕಟೇಶ್ ಗೋಷ್ಠಿಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.