ಶ್ರದ್ಧಾ, ಭಕ್ತಿಯಿಂದ ರಂಜಾನ್ ಆಚರಣೆ
ಕನಕಪುರ: ರಂಜಾನ್ ಹಬ್ಬವನ್ನು ಕನಕಪುರದ ಮುಸ್ಲೀಂ ಸಮುದಾಯದವರು ಶ್ರದ್ಧಾಭಕ್ತಿಗಳಿಂದ ಆಚರಿಸಿದರು. ಕನಕಪುರ ಪಟ್ಟಣವ್ಯಾಪ್ತಿಯ ಜಾಮಿಯಾ ಮಸೀದಿ, ಬೂದಿಕೇರಿ ಮಸೀದಿ, ಪೈಪ್ಲೈನ್ ದೊಡ್ಡಮಸೀದಿ, ಮೆಳೇಕೊಟೆ ಮಸೀದಿ, ಮೆಳೇಕೋಟೆ ಹೊಸಾಮಸೀದಿಗಳಿಂದ ಸಾವಿರಾರು ಮುಸ್ಲೀಂ ಬಾಂಧವರು ಸಾಮೂಹಿಕವಾಗಿ ಮೆರವಣಿಗೆ ಹೊರಟು ಅಂತಿಮವಾಗಿ ಕೆಎಸ್ಆರ್ಟಿಸಿ ಗ್ಯಾರೇಜ್ ಹಿಂಭಾಗದ ನಮಾಜಿ ಬೋರೆಯಲ್ಲಿನ ಈದ್ಗಾ ಮೈದಾನವನ್ನು ಸೇರಿದರು. ಮೌಲ್ವಿಗಳ ಕುರಾನ್ ಪಠಣ ಹಾಗೂ ಪ್ರಾರ್ಥನೆಯ ನಂತರ ಎಲ್ಲರೂ ಸಾಮೂಹಿಕ ನಮಾಜ್ ನೆರವೇರಿಸಿದರು. ಪರಸ್ಪರ ಅಪ್ಪುಗೆ ಮೂಲಕ ಶುಭಾಷಯ ಕೋರಿದರು. ಹಲವಾರು ಮಂದಿ ಸಮುದಾಯದ ಬಡಜನರಿಗೆ ಸಹಾಯಹಸ್ತ ನೀಡುತ್ತಿದ್ದುದು ಕಂಡು ಬಂದಿತು. ಶಾಸಕ ಡಿ.ಕೆ.ಶಿವಕುಮಾರ್ ಹಾಗೂ ಮುಖಂಡರುಗಳಾದ ಡಿ.ಕೆ. ಸುರೇಶ್, ಜಿಪಂ ಸದಸ್ಯ ಇಕ್ಬಾಲ್ ಹುಸೇನ್ ಮೊದಲಾದವರು ತಾಲೂಕಿನ ಮುಸ್ಲಿಂ ಸಮುದಾಯದವರು ರಂಜಾನ್ ಹಬ್ಬವನ್ನು ಸಂತಸದಿಂದ ಆಚರಿಸಲು ಅನುಕೂಲವಾಗುವಂತೆ ಬಟ್ಟೆಗಳು, ದಿನಸಿ ಪದಾರ್ಥಗಳನ್ನು ಪ್ರತಿಯೊಂದು ಕುಟುಂಬಕ್ಕೂ ತಲುಪಿಸಿದ್ದು, ಹಬ್ಬದ ಸಡಗರವನ್ನು ಹೆಚ್ಚಿಸಿತ್ತು.
ರಂಜಾನ್ ಸೌಹಾರ್ದತೆ ಭಾವೈಕ್ಯತೆಯ ಹಬ್ಬ
ಆನೇಕಲ್ಲು: ತಿಂಗಳು ಪೂರ್ತಾ ಉಪವಾಸವಿದ್ದು ಚಂದ್ರ ದರ್ಶನ ಮಾಡಿದ ನಂತರ ರಂಜಾನ್ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಉಳ್ಳವರು ಬಡವರಿಗೆ ಸಹಾಯ ಹಸ್ತ ನೀಡುವ ಪದ್ಧತಿ ಇದೆ. ಈ ಮಹತ್ವ ಪೂರ್ಣ ಹಬ್ಬದಲ್ಲಿ ಸೌಹಾರ್ದತೆ ಹಾಗೂ ಭಾವೈಕ್ಯತೆ ಸಮ್ಮಿಳನವಿರುತ್ತದೆ ಎಂದು ಆನೇಕಲ್ಲಿನ ಮುಲ್ಲಾ ಷೇಕ್ ಇಮಾಮ್ ತಿಳಿಸಿದ್ದಾರೆ. ಆನೇಕಲ್ಲಿನ ಮುಖಂಡ ರಿಜ್ವಾನ್ ಮಾತನಾಡಿದರು. ಮುಖಂಡರಾದ ಸಮೀಉಲ್ಲ, ಸಿಕಂದರ್ ಅಲಿ, ಅಮೀರ್, ಮಕಬೂಲ್ ಸಾಬ್, ಬಾಷಾ, ಅಕ್ರಂ, ಅಪ್ಸರ್ ಅಲಿ ಖಾನ್, ಶೇರ್ ಅಲಿ, ವಲೀಖಾನ್ ಇದ್ದರು.
ರಂಜಾನ್ ಆಚರಣೆ
ರಾಮನಗರ : ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಹಬ್ಬವನ್ನು ಶ್ರದ್ದೆ, ಭಕ್ತಿ, ಸಡಗರದಿಂದ ನಗರದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಆಚರಿಸಿದರು. ಬೆಳಿಗ್ಗೆಯಿಂದಲೇ ತಂಡೋಪ ತಂಡವಾಗಿ ಆಗಮಿಸಿದ ಸಾವಿರಾರು ಮುಸಲ್ಮಾನರು 11ರ ವೇಳೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಪರಸ್ಪರ ಆಲಂಗಿಸಿಕೊಂಡು ಶುಭಾಷಯ ವಿನಿಮಯ ಮಾಡಿಕೊಂಡರು. ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

