ಬೆಂಗಳೂರು ಗ್ರಾಮಾಂತರ

ಕನ್ಯೆ ಕೊಡಿಸದ್ದಕ್ಕೆ ಕೊಂದ ಭೂಪ!

Published On :

ಮಾಗಡಿ: ವ್ಯಕ್ತಿಯೊಬ್ಬ ಹತಾಶನಾಗಿ ರೈತ ಬಸವರಾಜು(40) ಎಂಬಾತನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತಾಲೂಕಿನ ತಟ್ಟೇಕೆರೆ ಗ್ರಾಮದ ಬಳಿ ಶನಿವಾರ ನಡೆದಿದೆ.
ತಾಲೂಕಿನ ಸೋಲೂರು ಹೋಬಳಿ ತಟ್ಟೇಕೆರೆ ಗ್ರಾಮದ ಬಸವರಾಜು ಅವರ ಅಕ್ಕನ ಮಗಳನ್ನು ತನಗೆ ಕೊಡಿಸುವಂತೆ ಹರೀಶ್ ಎಂಬಾತ ಪೀಡಿಸುತ್ತಿದ್ದು, ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಹರೀಶ್ ಬೆದರಿಕೆ ಸಹ ಹಾಕಿದ್ದನು ಎನ್ನಲಾಗಿದೆ.
ಈ ಸಂಬಂಧ ಆಗಾಗ್ಗೆ ಜಗಳ ಸಹ ನಡೆದಿತ್ತು. ಕುದೂರು ಪೊಲೀಸ್ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿದ್ದು, ಪ್ರಕರಣ ಇತ್ಯರ್ಥವಾಗದೆ ಮುಂದೂಡಲಾಗುತ್ತಿತ್ತು. ಕೊನೆಗೆ ಇಬ್ಬರ ಮೇಲೂ ಕೇಸು ದಾಖಲಿಸಲಾಗಿತ್ತು ಎನ್ನಲಾಗಿದೆ.
ಜತೆಗೆ ಬಸವರಾಜು ಅಕ್ಕನ ಮಗಳ ನಿಶ್ಚಯ ಬೇರೆ ವರನೊಂದಿಗೆ ಆಗಿತ್ತು. ಆ.18 ಮತ್ತು 19 ರಂದು ಮದುವೆಯೂ ನಡೆಸಲು ಸಕಲ ಸಿದ್ಧತೆಯೂ ನಡೆದಿತ್ತು. ಮಾಮೂಲಿನಂತೆ ಶನಿವಾರ ಬಸವರಾಜು ತನ್ನ ತೋಟದಲ್ಲಿ ಬೆಳೆದಿದ್ದ ಹುರುಳಿಕಾಯಿಯನ್ನು ತೆಗೆದುಕೊಂಡು ಹೋಗಿ ಮಾರಾಟ ಮಾಡಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದಾಗ ಹತಾಶನಾಗಿದ್ದ ಹರೀಶ್ ತಟ್ಟೇಕೆರೆ ಗ್ರಾಮದ ಬಳಿ ತನ್ನ ಮೂರು ಮಂದಿ ಸಂಗಡಿಗರು ಸೇರಿ ರೈತ ಬಸವರಾಜನನ್ನು ಅಡ್ಡಗಟ್ಟಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಕುದೂರು ಪೊಲೀಸರು ತಿಳಿಸಿದ್ದಾರೆ.  
ಕೊಲೆಯಾದ ಬಸವರಾಜು ಪತ್ನಿ ರತ್ನಮ್ಮಳಿಗೆ ಇಬ್ಬರು ಸಣ್ಣ ಮಕ್ಕಳಿದ್ದಾರೆ. ರತ್ನಮ್ಮ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಕುದೂರು ಪಿಎಸ್‌ಐ ರವಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.