ಬೆಂಗಳೂರು ಗ್ರಾಮಾಂತರ

ಹೆಚ್ಚಿನ ಬೆಲೆಗೆ ಗೊಬ್ಬರ ಮಾರಿದರೆ ಕ್ರಿಮಿನಲ್ ಕೇಸ್

Published On :

ರಾಮನಗರ: ಸರ್ಕಾರ ನಿಗದಿಪಡಿಸಿರುವುದಕ್ಕಿಂತ ಹೆಚ್ಚು ಬೆಲೆಗೆ ರಸಗೊಬ್ಬರ ಮಾರಾಟ ಮಾಡುವ ಮಾರಾಟಗಾರರ ವಿರುದ್ಧ ರಸಗೊಬ್ಬರ ನಿಯಂತ್ರಣ ಕಾಯ್ದೆಯನ್ವಯ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಪರವಾನಗಿ ರದ್ದುಪಡಿಸಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕ ಅಣ್ಣಯ್ಯ ಎಚ್ಚರಿಸಿದ್ದಾರೆ. ಯಾವುದೇ ರಸಗೊಬ್ಬರ ಮಾರಾಟ ಕೇಂದ್ರದ ಮಾರಾಟಗಾರರು ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂಥವರ ವಿರುದ್ಧ ರೈತರು ನೇರವಾಗಿ ಇಲಾಖೆಗೆ ದೂರು ಸಲ್ಲಿಸಬಹುದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪ್ರತಿ 50 ಕೆಜಿ ಯೂರಿಯಾ ರಸಗೊಬ್ಬರದ ಗರಿಷ್ಠ ಮಾರಾಟ ಬೆಲೆ 285.16 ಆಗಿದೆ. ಅಂತೆಯೇ ಉಳಿದ ರಸಗೊಬ್ಬರಗಳ ದರ ಪಟ್ಟಿಯನ್ನೂ ಮಾರಾಟ ಮಳಿಗೆಗಳಲ್ಲಿ ಪ್ರಕಟಿಸಲಾಗಿದೆ. ಅದರನ್ವಯವೇ ರೈತರು ಹಣ ಪಾವತಿಸಿ, ರಶೀದಿ ಪಡೆದುಕೊಳ್ಳಬೇಕೆಂದು ಹೇಳಿದ್ದಾರೆ. ರೈತರು ರಾಗಿ ಬೆಳೆಗೆ ಎಕರೆಗೆ ಮೇಲು ಗೊಬ್ಬರವಾಗಿ 23 ಕೆಜಿ ಮಾತ್ರವೇ ಯೂರಿಯಾ ಬಳಸಬೇಕು. ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಳಸಿದ್ದಲ್ಲಿ ಬೆಳೆಗೆ ರೋಗ ಮತ್ತು ಕೀಟ ತಗಲುವುದು. ಇದರಿಂದ ಹೆಚ್ಚುವರಿ ಇಳುವರಿಯಲ್ಲಿ ಶೇ. 25 ರಿಂದ 50 ರಷ್ಟು ಕುಸಿಯಲಿದೆ ಎಂದು ತಿಳಿಸಿದ್ದಾರೆ.
ದೇವೇಗೌಡ ಅವಕಾಶವಾದಿ ರಾಜಕಾರಣಿ: ರೆಡ್ಡಿ
ಚನ್ನಪಟ್ಟಣ: ಬಿಜೆಪಿಯನ್ನು ಕೋಮುವಾದಿ ಎಂದು ಜನತಾಪರಿವಾರವನ್ನು ಒಡೆದ ದೇವೇಗೌಡರು ಇದೀಗ ಅದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಅವಕಾಶವಾದಿ ರಾಜಕಾರಣ ನಡೆಸುತ್ತಿದ್ದಾರೆ ಎಂದು ಸಂಯುಕ್ತ ಜನಾತಾದಳದ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಕೆ.ಇ ರೆಡ್ಡಿ ಆರೋಪಿಸಿದರು. ಪಟ್ಟಣದ 6ನೇ ಅಡ್ಡ ರಸ್ತೆಯಲ್ಲಿರುವ ಪಕ್ಷದ ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬಿಜೆಪಿ ಬಗೆಗಿನ ಧೋರಣೆ ಮೊದಲೇ ತಳೆದಿದ್ದರೆ ಜನತಾಪರಿವಾರದಲ್ಲಿ ಒಡಕು ಮೂಡುತ್ತಲೇ ಇರಲಿಲ್ಲ ಎಂದರು. ಪಕ್ಷದ ಅಭ್ಯರ್ಥಿ ಜೆ.ಟಿ.ಪ್ರಕಾಶ್ ಮಾತನಾಡಿ, ನನ್ನ ತಾತ ಬಿ.ಜೆ.ಲಿಂಗೇಗೌಡರಿಂದ ಪ್ರೇರಣೆಗೊಂಡು ನಾನು ರಾಜಕಾರಣಕ್ಕೆ ಆಗಮಿಸಿದ್ದು ಜನಸೇವೆಗಾಗಿ ನಾನು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದರು.ನಾಡಗೌಡ ಪಾದಯಾತ್ರೆ: ಆ.18 ರ ಮಧ್ಯಾಹ್ನ ನಮ್ಮ ಪಕ್ಷದ ರಾಜ್ಯಾಧ್ಯಕ್ಷ ನಾಡಗೌಡ ಪಾದಯಾತ್ರೆಯ ಮೂಲಕ ಮತಯಾಚನೆ ಮಾಡಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜೆಡಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ, ಮುಖಂಡರಾದ ಅಶ್ವತ್ಥನಾರಾಯಣ, ಸೈಯ್ಯದ್ ಮಹದಿ ಇನ್ನು ಮಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.