ಆರ್ಟಿಇ ಕಾರ್ಯಪಡೆಗೆ ವರ್ಷದ ಸಂಭ್ರಮ
ಬೆಂಗಳೂರು: ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕಾರ್ಯಪಡೆಗೆ ಇದೀಗ ವರ್ಷದ ಸಂಭ್ರಮ.
ವಾರ್ಷಿಕೋತ್ಸವದ ಸಂಭ್ರಮವನ್ನು ಕಾರ್ಯಪಡೆ ಭಾನುವಾರ ಜೈನ್ ಕಾಲೇಜಿನಲ್ಲಿ ಏರ್ಪಡಿಸಿತ್ತು. ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ಪೋಷಕರು, ಕಾರ್ಯಪಡೆ ಸದಸ್ಯರು ಸಮಾರಂಭದಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪೋಷಕರಾದ ಇಂದಿರಾ, ನಾನು ನನ್ನ ಮಗಳಿಗೆ ಆರ್ಟಿಇ ಅನ್ವಯ ಖಾಸಗಿ ಶಾಲೆಯಲ್ಲಿ ಸೀಟು ಪಡೆಯಲು ಸಾಕಷ್ಟು ಕಷ್ಟಪಟ್ಟೆ. ಆದರೆ, ಆ ಶಾಲೆ ಹೊರತು ಪಡಿಸಿ ಬೇರೆ ಶಾಲೆಯಲ್ಲಿ ಸೀಟು ದೊರೆಯಿತು. ಇದೇ ರೀತಿ ಸಾಕಷ್ಟು ಜನರು ತಮ್ಮ ಮಕ್ಕಳಿಗೆ ಸೀಟು ಪಡೆದುಕೊಳ್ಳಲು ಹೋದಾಗ, ಶಾಲಾ ಆಡಳಿತ ಮಂಡಳಿಗಳು ನಮ್ಮದು ಅಲ್ಪಸಂಖ್ಯಾತ ಶಾಲೆಗೆ ಸೇರಲಿದೆ ಎಂದು ಇಲ್ಲದ ಕಾನೂನಿನ ನೆಪ ಹೇಳಿ ಕಳುಹಿಸಿರುವ ಪ್ರಸಂಗಗಳು ನನ್ನ ಗಮನಕ್ಕೆ ಬಂದವು. ಆನಂತರ ನಾನು ಆರ್ಟಿಇ ಕಾರ್ಯಪಡೆಯ ಸದಸ್ಯಳಾಗಿ ಬೇರೆ ಮಕ್ಕಳಿಗೂ ಸೀಟು ದೊರಕಿಸಿಕೊಡುವ ಕೆಲಸ ಮಾಡುತ್ತಿದ್ದೇನೆ ಎಂದರು.
ಕಾರ್ಯಪಡೆ ಸಂಚಾಲಕ ನಾಗಸಿಂಹ ಜಿ.ರಾವ್ ಮಾತನಾಡಿ, ಕಾರ್ಯಪಡೆಗೆ 162 ಸದಸ್ಯರು ದೊರೆತಿದ್ದಾರೆ. ಆರ್ಟಿಇ ಎಂದ ತಕ್ಷಣ ಪ್ರತಿಯೊಬ್ಬರು ಶೇ.25 ಮೀಸಲು ಸೀಟು ಎಂದೇ ಭಾವಿಸಿದ್ದಾರೆ. ಇದು ತಪ್ಪು ಆರ್ಟಿಇ ಕುರಿತು ಪ್ರತಿಯೊಬ್ಬರಿಗೂ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಕಾರ್ಯಪಡೆಗೆ ಇ-ಮೇಲ್ ಮತ್ತು ಲಿಖಿತ ರೂಪದಲ್ಲಿ 63 ದೂರುಗಳು ಬಂದಿವೆ. ಈ ಪೈಕಿ ಆರ್ಟಿಇ ಅರ್ಜಿಗಳನ್ನು ನೇರವಾಗಿ ಬಿಇಒ ಕಚೇರಿಗೆ ನೀಡಲಾಗಿದೆ. ಇದರಲ್ಲಿ ಅನಧಿಕೃತವಾಗಿ ಹೆಚ್ಚುವರಿ ಶುಲ್ಕ ಪಡೆದಿರುವ ಕುರಿತಾದ ದೂರುಗಳೇ ಹೆಚ್ಚು ಎಂದರು.
ಈ ಸಮಾರಂಭದಲ್ಲಿ ಕಾರ್ಯಪಡೆ ಸದಸ್ಯ ಗಂಗಾಧರ್, ಸ್ಪರ್ಶ ಟ್ರಸ್ಟ್ನ ಗೋಪಿನಾಥ್, ವೀಣಾ, ಹುಡುಕು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕಿರಣ್ ಪಿ. ಕುಲಕರ್ಣಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಆರ್ಟಿಇ ಕುರಿತು ಜಾಗೃತಿ ಮೂಡಿಸುತ್ತಿರುವ ಪೋಷಕರಾದ ಇಂದಿರಾ, ಕುಮಾರ್, ಹನುಮಂತಯ್ಯ ಅವರನ್ನು ಸನ್ಮಾನಿಸಲಾಯಿತು.
ಮಾಧ್ಯಮಗಳ ಸಹಕಾರದಿಂದ ಯಶಸ್ಸು
ಆರ್ಟಿಇ ಕಾರ್ಯಪಡೆ ಯಶಸ್ವಿಯಾಗಲು ಮತ್ತು ಪೋಷಕರಿಗೆ ನ್ಯಾಯ ಒದಗಿಸಿಕೊಡಲು ಮಾಧ್ಯಮಗಳು ಸಾಕಷ್ಟು ಸಹಕಾರ ನೀಡಿವೆ. ಮಾಧ್ಯಮಗಳ ವರದಿಗಳಿಂದಲೇ ಶಾಲಾ ಆಡಳಿತ ಮಂಡಳಿಯವರು ಎಚ್ಚೆತ್ತುಕೊಂಡಿದ್ದಾರೆ. ಹೀಗಾಗಿ ಅನ್ಯಾಯಕೊಳ್ಳಗಾದ ಸಂದರ್ಭದಲ್ಲಿ ಪೋಷಕರು ಕರ್ನಾಟಕ ರಾಜ್ಯ ಮಕ್ಕಳ ಆಯೋಗಕ್ಕೆ ದೂರು ನೀಡಬೇಕು. ಮಾಧ್ಯದವರಿಗೂ ತಿಳಿಸಬೇಕು ಎಂದು ನಾಗಸಿಂಹ ರಾವ್ ಅವರು ಮನವಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

