ಬೆಂಗಳೂರು ಗ್ರಾಮಾಂತರ

ಕೀಟ, ರೋಗಬಾಧೆ; ರೈತರಿಗೆ ಸೂಚನೆ

Published On :

ರಾಮನಗರ: ಜಿಲ್ಲೆಯಾದ್ಯಂತ ಬಿತ್ತನೆ ಮಾಡಿರುವ ತೊಗರಿ, ಅಲಸಂದೆ, ನೆಲಗಡಲೆ ಮತ್ತು ಅವರೆ ಬೆಳೆಗೆ ಕೀಟ ಮತ್ತು ರೋಗಬಾಧೆ ತಗಲಿರುವುದು ಕಂಡುಬಂದಿದೆ. ಆಯಾ ಬೆಳೆಗಳಿಗೆ ಸೂಚಿಸಿರುವಂತೆ ಸಸ್ಯ ಸಂರಕ್ಷಣೆ ಕ್ರಮ ಕೈಗೊಳ್ಳಲು ರೈತರಿಗೆ ತಿಳಿಸಲಾಗಿದೆ.
ತೊಗರಿ: ಬೇರು ಕೊಳೆ ರೋಗ ಮತ್ತು ಸೊರಗು ರೋಗ ತಗಲಿರುವುದು ಕಂಡುಬಂದಿದೆ. ಈ ರೋಗವು ಶಿಲೀಂದ್ರ ರೋಗವಾಗಿದ್ದು, ಮಣ್ಣಿನಲ್ಲಿರುವ ಶಿಲೀಂದ್ರಗಳಿಂದ ಅದರಲ್ಲೂ ತೇವಾಂಶ ಹೆಚ್ಚಾಗಿದ್ದಾಗ ಮತ್ತು ನೀರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹರಿದಾಡುವುದರಿಂದ ಗಿಡದಿಂದ ಗಿಡಕ್ಕೆ ರೋಗಬಾಧೆ ತಗಲುತ್ತದೆ. ಆದ್ದರಿಂದ ಈಗಾಗಲೇ ರೋಗಕ್ಕೆ ತುತ್ತಾದ ಗಿಡಗಳನ್ನು ಬೇರು ಸಹಿತ ತೆಗೆದು ನಾಶಮಾಡುವುದು. ಆ ಗಿಡದ ಬುಡಕ್ಕೆ ಮತ್ತು ಅಕ್ಕಪಕ್ಕದ ಗಿಡದ ಬುಡಕ್ಕೆ 2 ಗ್ರಾಂ ಕಾರ್ಬೆಂಡಜಿಮ್ ಔಷಧವನ್ನು ಒಂದು ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಿಸುವುದು.
ನೆಲಗಡಲೆ: ಬೆಳೆಗೆ ಸುರುಳಿಪೂಚಿ ಕೀಟ, ಎಲೆತುಕ್ಕು ರೋಗ ಹಾಗೂ ಕತ್ತು ಕೊಳೆ ರೋಗ ತಗುಲಿಕೆಯಲ್ಲಿ ಕೀಟ ನಿವಾರಣೆಗೆ 1.5 ಮಿಲಿ ಮಾನೋಕ್ರೋಟೋಫಾಸ್ ಕೀಟನಾಶಕವನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದು. ಕತ್ತು ಕೊಳೆ ರೋಗ ನಿವಾರಣೆಗೆ 2 ಗ್ರಾಂ ಕಾರ್ಬೆಂಡ್ ಜಿಮ್ರೋಗ ನಾಶಕವನ್ನು ಒಂದು ಲೀಟರ್‌ಗೆ ಮಿಶ್ರಣ ಮಾಡಿ ಸಿಂಪಡಿಸುವುದು. ಎಲೆತುಕ್ಕು ರೋಗ ನಿವಾರಣೆಗೆ 0.5 ಮಿಲಿ ಟ್ರೈಡೆಮಾರ್ಫ್ ಅಥವಾ ಕಾರ್ಬಾನಿಕ್ ಆಗನಾಶಕವನ್ನು ಒಂದು ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಿಸುವುದು.
ಅಲಸಂದೆ: ಸಸ್ಯ ಹೇನು, ಸುರುಳಿಪೂಚಿ ಕೀಟ ಮತ್ತು ಎಲೆತುಕ್ಕು ರೋಗ ತಗಲಿರುವುದು ಕಂಡುಬಂದಿದೆ. ಕೀಟಬಾಧೆ ತಡೆಗಟ್ಟಲು ಡೈಮಿಥೊಯೇಟ್ ಒಂದು ಲೀಟರ್ ನೀರಿಗೆ 2 ಮಿಲಿ ಮಿಶ್ರಣ ಮಾಡಿ ಸಿಂಪಡಿಸುವುದು. ಎಲೆತುಕ್ಕು ರೋಗ ನಿವಾರಣೆಗೆ ನೇಟಿಓ-759 ರೋಗನಾಶಕವನ್ನು ಒಂದು ಲೀಟರ್ ನೀರಿಗೆ 0.5 ಗ್ರಾಂ. ಮಿಶ್ರಣ ಮಾಡಿ ಸಿಂಪಡಿಸುವುದು.
ಅವರೆ: ಸಸ್ಯ ಹೇನು ಮತ್ತು ಸುರುಳಿಪೂಚಿ ಕೀಟ ತಗಲಿರುವುದು ಕಂಡುಬಂದಿದೆ. ಈ ಕೀಟಗಳ ನಿವಾರಣೆಗೆ 2 ಮಿಲಿ ಡೈಮಿಥೊಯೇಟ್  ಒಂದು ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಿಸುವುದು.
ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಹಾಗೂ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಸಲು ಕೃಷಿ ಜಂಟಿ ನಿರ್ದೇಶಕ ಅಣ್ಣಯ್ಯ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.