ಕನಕಪುರ ರೋಟರಿ ಪ್ರಶಂಸಾರ್ಹ ಸೇವೆ'
ಕನಕಪುರ: ಸಮುದಾಯಸೇವೆ, ಆರೋಗ್ಯ, ಪರಿಸರ, ವೃತ್ತಿ, ಪ್ರತಿಭಾ ಪುರಸ್ಕಾರ ಮೊದಲಾದ ಕ್ಷೇತ್ರಗಳಲ್ಲಿ ಕನಕಪುರ ರೋಟರಿ ಪ್ರಶಂಸಾರ್ಹ ಸೇವೆ ಸಲ್ಲಿಸುತ್ತಿದೆ ಎಂದು ರೋಟರಿ ಜಿಲ್ಲಾಪಾಲಕ ಕೆ.ಎಸ್. ನಾಗೇಂದ್ರ ಹೇಳಿದ್ದಾರೆ.
ಅವರು ಇಲ್ಲಿನ ರೋಟರಿ ಭವನದಲ್ಲಿ ರಾಜ್ಯಪಾಲಕರ ಅಧಿಕೃತಭೇಟಿ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಚಾರಣಿಗ ಕ್ಯಾಪ್ಟನ್ ಸುಬ್ರಹ್ಮಣ್ಯಂ, ಜಿಪಂ ಸದಸ್ಯ ವೆಂಕಟೇಶಯ್ಯ, ಪ್ರಗತಿಪರ ಕೃಷಿಕ ದಾಸಪ್ಪ, ಗ್ರಾಮಲೆಕ್ಕಿಗ ರಾಘವೇಂದ್ರರಾವ್ ಅವರಿಗೆ ವೃತ್ತಿಸೇವಾ ಪುರಸ್ಕಾರ ನೀಡಿ ಗೌರವಿಸಿದರು. ಕ್ರೀಡಾ ಕ್ಷೇತ್ರದಲ್ಲಿ ರಾಜ್ಯವನ್ನು ಪ್ರತಿನಿಧಿಸಿರುವ
ತಾಲೂಕಿನ ಪ್ರತಿಭಾನ್ವಿತ ಕ್ರೀಡಾಪಟುಗಳಾದ ಜೈನ್ ವಿದ್ಯಾನಿಕೇತನ ಶಾಲೆಯ ಕು.ಪಿ.ಡಿ.ವಿದ್ಯಾ,ಕು.
ಸ್ಫೂರ್ತಿ, ಎಡಿಂಗ್ಟಾಂ, ಸಿ.ಪಿ.ಮಾದೇಶ್ ಅವರಿಗೆ ಕ್ರೀಡಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿವಿಧ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ,ಬೆಲ್ಟ್, ಟೈಗಳ ವಿತರಣೆ ಕಾರ್ಯಕ್ರಮಕ್ಕೆ ಅಧ್ಯಕ್ಷ ಸಿ.ವಿಜಯ್ ಚಾಲನೆ ನೀಡಿದರು. ಸಮಾರಂಭದಲ್ಲಿ ರೋಟರಿ ದತ್ತಿಗೆ ದೇಣಿಗೆ ನೀಡಿ ಪಾಲ್ ಹ್ಯಾರಿಸ್ ಪುರಸ್ಕಾರಕ್ಕೆ ಪಾತ್ರರಾದ 10 ಮಂದಿ ಸದಸ್ಯರನ್ನು ಜಿಲ್ಲಾಪಾಲಕ ಕೆ.ಎಸ್.ನಾಗೇಂದ್ರ ಪ್ರಶಸ್ತಿಪತ್ರ, ಪಿನ್ಗಳನ್ನು ನೀಡಿ ಗೌರವಿಸಿದರು.
ಅಧ್ಯಕ್ಷ ಸಿ.ವಿಜಯ್ ಮಾತನಾಡಿ ಗ್ರಾಮೀಣ ಪ್ರದೇಶದ 150 ಕ್ಕೂ ಹೆಚ್ಚು ಟ್ರ್ಯಾಕ್ಟರ್ ಚಾಲಕರಿಗೆ ಚಾಲನಾ ಪರವಾನಗಿ ನೀಡುವ, ಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳಲ್ಲಿ ಶ್ರಮದಾನದ ಮೂಲಕ ಶುಚಿತ್ವ ನಡೆಸುವ, ವಾಟರ್ ಟ್ಯಾಂಕ್ ಕೊಡುಗೆ, ಶಾಲೆಗಳಿಗೆ ಲೇಖನ ಸಾಮಗ್ರಿ, ಬಟ್ಟೆ ಇತರೆ ಸವಲತ್ತುಗಳ ನೀಡಿಕೆಯಂತಹ ವಿನೂತನ ಕಾರ್ಯಕ್ರಮವನ್ನು ಕನಕಪುರ ರೋಟರಿ ನಿರ್ವಹಿಸಿದೆ. ಪಟ್ಟಣವ್ಯಾಪ್ತಿಯ ಕುರೂಪೇಟೆ ರುದ್ರಭೂಮಿಯನ್ನು ಸುಮಾರು 20 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಿ ಪುರಸಭೆಗೆ ಹಸ್ತಾಂತರಿಸಿದೆ ಎಂದು ಹೇಳಿದರು.
ರೋಟರಿ ಸಹಪಾಲಕ ಶಿವಪ್ರಸಾದ್ ಜಿ.ಎನ್.ಸತೀಶ್ ಸಂಪಾದಕತ್ವದ ಕನಕಚಕ್ರ ವಾರ್ತಾಪತ್ರದ ಬಿಡುಗಡೆಯನ್ನು ನೆರವೇರಿಸಿದರು. ಕಾರ್ಯದರ್ಶಿ ಮುರಡಿ ಬಸಪ್ಪ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ರೋಟರಿ ಟ್ರಸ್ಟ್ ಅಧ್ಯಕ್ಷ ವಿಜಯದೇವ್ ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ಚಂದ್ರಪ್ರಭಾ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

