ರೈತರಲ್ಲಿ ಹೋರಾಟದ ಕೆಚ್ಚಿರಲಿ: ಆದೂರು
ಕ.ಪ್ರ.ವಾರ್ತೆ ಆನೇಕಲ್ಲು ಡಿ.3
ದೇಶವಾಸಿಗಳ ಹಸಿವನ್ನು ನೀಗಿಸುವ ಅನ್ನದಾತ ರೈತ ಯಾವುದೇ ಹಂತದಲ್ಲೂ ಆತ್ಮಹತ್ಯೆಯಂತಹ ಆಲೋಚನೆ ಮಾಡಬಾರದು ಎಂದು ಪ್ರಜಾ ವಿಮೋಚನಾ ಚಳವಳಿ ಮಾನವತಾವಾದ ರಾಜ್ಯ ಕಾರ್ಯದರ್ಶಿ ಆದೂರು ಪ್ರಕಾಶ್ ಕೋರಿದ್ದಾರೆ.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬೆಳಗಾವಿ ರೈತ ವಿಠಲ ಅರಭಾವಿಯ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ ಹುಟ್ಟಿನಿಂದಲೇ ಹೋರಾಟದ ಕಿಚ್ಚನ್ನು ಮೈಗೂಡಿಸಿಕೊಂಡ ರೈತ ಮುಂದೆಯೂ ತನ್ನ ಸಂಪ್ರದಾಯವನ್ನು ಪಾಲಿಸಬೇಕು. ಬರಡು ಭೂಮಿಯಲ್ಲಿ ಬೆಳೆ ತೆಗೆಯುವ ಛಲವಿರುವ ರೈತ ಭಂಡ ಸರ್ಕಾರದಿಂದಲೂ ಅನಿವಾರ್ಯ ಅನುಕೂಲತೆ ಪಡೆಯಬೇಕೆಂದರು.
ನೀರಾವರಿ ಪ್ರದೇಶದ ರೈತರ ಸಮಸ್ಯೆಗಳಿಗೆ ಸರ್ಕಾರ ನಿಧಾನ ಗತಿ ತೋರಿದರೆ ಬೆಳಗಳಿಗಾಗಿ ಆಕಾಶವನ್ನೇ ನಂಬಿ ಕೂತಿರುವ ಒಣ ಭೂಮಿ ರೈತರ ಪಾಡೇನು ಎಂದು ಪ್ರಶ್ನಿಸಿದ ಅವರು ಬೆಳಗಾವಿಯಲ್ಲಿ ನಡೆಸಿದ ಅಧಿವೇಶನ ರಾಜ್ಯ ಕಂಡ ಆಡಳಿತದಲ್ಲಿ ಕಪ್ಪು ಚುಕ್ಕೆಯಾಗಿದೆ ಎಂದರು. ತಾತ್ಕಾಲಿಕ ಪರಿಹಾರದಿಂದ ರೈತ ಕುಟುಂಬಕ್ಕಾಗಲೀ ರೈತ ಸಮುದಾಯಕ್ಕಾಗಿಲೀ ಸಮಸ್ಯೆಯ ಶಾಶ್ವತ ಪರಿಹಾರವಲ್ಲ. ಆ ನಿಟ್ಟಿನಲ್ಲಿ ತಜ್ಞ ರೈತರಿಂದ ಮಾಹಿತಿ ಪಡೆದು ಪರಿಹಾರದ ಬಗ್ಗೆ ಚಿಂತನೆ ನಡೆಸಬೇಕೇ ಹೊರತು ವಿದೇಶಗಳಲ್ಲಿ ವ್ಯಾಸಂಗ ಮಾಡಿ ಕಂಪ್ಯೂಟರ್ನಲ್ಲಿ ಮಾಹಿತಿ ಪಡೆಯುವ ಬಿಳಿ ಕಾಲರ್ ಅಧಿಕಾರಿಗಳಿಂದಲ್ಲ ಎಂದು ಚುಚ್ಚಿದರು.
ರಾಜ್ಯ ಉಪಾಧ್ಯಕ್ಷ ಅತ್ತಿಬೆಲೆ ಛಲವಾದಿ ನಾಗರಾಜ್ ಮಾತನಾಡಿ ರೈತರ ಹೆಸರಲ್ಲಿ ಪ್ರಮಾಣ ವಚನ ಮಾಡಿದ ಸಿದ್ದರಾಮಯ್ಯನವರ ಮೊದಲ ಬಲಿ ರೈತನೇ ಆಗಿರುವುದು ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಕನಿಷ್ಠ 1 ದಿನ ಮೊದಲು ಈ ಬಗ್ಗೆ ಮಾತುಕತೆ ನಡೆಸಿದ್ದರೆ ರೈತರ ಜೀವ ಉಳಿಯುತ್ತಿತ್ತು. ಈ ಕೂಡಲೇ ಸರ್ಕಾರವು ರೈತ ಅರಭಾವಿಯ ಸಾಲ ಮನ್ನಾ ಮಾಡಿ ಆ ಕುಟುಂಬದ ವ್ಯಕ್ತಿಯೊಬ್ಬನಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಪರಿಹಾರವಾಗಿ ರು. 10 ಲಕ್ಷ ಕುಟುಂಬಕ್ಕೆ ನೀಡಬೇಕು ಎಂದು ಒತ್ತಾಯಿಸಿದರು. ಪಿವಿಸಿ (ಎಂ) ಸದಸ್ಯರು ಮನವಿ ಪತ್ರವನ್ನು ತಹಸೀಲ್ದಾರರಿಗೆ ನೀಡಿ ರಾಜ್ಯಪಾಲರಿಗೆ ತಲುಪಿಸುವಂತೆ ಮನವಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

