'ಉತ್ತಮ ಕೃತಿ ರಚಿಸುವುದು ಅಗತ್ಯ'
ನೆಲಮಂಗಲ: ಉತ್ತಮ ಕೃತಿಗಳನ್ನು ರಚಿಸುವುದು ಅಗತ್ಯ ಎಂದು ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮಲ್ಲೇಪುರಂ.ಜಿ.ವೆಂಕಟೇಶ್ ತಿಳಿಸಿದರು.
ಅವರು ಮಂಗಳವಾರ ಪಟ್ಟಣದ ಶ್ರೀ ವಿಘ್ನೇಶ್ವರ ನಾಗರೀಕ ಕ್ಷೇಮಾಭಿವೃದ್ದಿ ಸಂಘವು ವಿಶಾಲ್ ಆಂಗ್ಲ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ ಮತ್ತು ಜನಪದ ವೈಭವ ಕಾರ್ಯಕ್ರಮದಲ್ಲಿ ಸಾಹಿತಿ ಡಾ. ಚೌಡಯ್ಯ ಅವರ ನಾಲ್ಕು ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ ಕವಿ ದೈಹಿಕವಾಗಿ ನಶ್ವರನಾದರು ರಚಿಸಿದ ಪುಸ್ತಕಗಳಿಂದ ಅಮರನಾಗುತ್ತಾನೆ. ಸಾಹಿತ್ಯ ಕೃತಿಗಳು ಪರಂಪರೆ ಹಾಗೂ ಪ್ರಚಲಿತ ವಿದ್ಯಮಾನಗಳ ಅನುಭವಗಳನ್ನು ಲೇಖಕ ಡಾ.ಚೌಡಯ್ಯ ಅವಲೋಕನ ಕೃತಿಯಲ್ಲಿ ತಿಳಿಸಿದ್ದಾರೆ ಎಂದರು.
ನಮ್ಮ ನಾಡಿನ ಕವಿ, ಸಾಹಿತಿಗಳು ರಚಿಸಿರುವ ಸಾಹಿತ್ಯಗಳು ಹಾಗೂ ಕನ್ನಡ ನಾಡಿನ ಪರಂಪರೆಗಳನ್ನು ಶಾಲಾ ವಿದ್ಯಾರ್ಥಿಗಳಿಗೆ ಪರಿಚಯಿಸುವ ಮೂಲಕ ನಿತ್ಯವೂ ಕನ್ನಡ ಉತ್ಸವ ನಡೆಯುವಂತಾಗಬೇಕು ಎಂದು ಕೆಂಪೇಗೌಡ ವೈದ್ಯ ಕಾಲೇಜಿನ ಪ್ರಾಧ್ಯಾಪಕ ಡಾ. ಟಿ.ಎಚ್.ಆಂಜಿನಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಾಗಮಂಗಲ ಆದಿಚುಂಚನಗಿರಿ ಕಾಲೇಜಿನ ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಸ್.ಡಿ.ಯೋಗರಾಜು ಸೊನ್ನೆಲಗೆಯ ಸಿದ್ಧಪುರುಷ ಭೋವಿ ಜನಾಂಗ ನಡೆದು ಬಂದ ದಾರಿ, ಗಂಗಾ ಭೋವಿ-ಪ್ರತಿಭಾವಂತ ಸಂಸದೀಯ ಪಟು ಕೃತಿಗಳನ್ನು ಪರಿಚಯಿಸಿದರು.
ಬಡವಾಣೆಯ ಪ್ರತಿಭಾವಂತ ವಿದ್ಯಾರ್ಥಿಗಳಾದ ಬಿ.ಎಸ್. ಪರಿಣಿತಾ ಮಧುಸೂದನ್ ಮತ್ತು ನಗರ ಗ್ರಂಥಾಲಯದ ಪ್ರೇಮಮೂರ್ತಿ ಅವರನ್ನು ಪುರಸಭಾ ಸದಸ್ಯ ಶಿವಕುಮಾರ್ ಸನ್ಮಾನಿಸಿದರು. ಸಂಘದ ಅಧ್ಯಕ್ಷ ಬಿ.ಎಸ್.ರವೀಂದ್ರ ಅಧ್ಯಕ್ಷತೆ ವಹಿಸಿದ್ದರು. ಡಾ. ವೀರೇಶ್ ಬಳ್ಳಾರಿ ತಂಡದವರಿಂದ ಜಾನಪದ ವೈಭವ ಕಾರ್ಯಕ್ರಮವನ್ನು ನೀಡಿದ್ದರು. ಪ್ರಾಂಶುಪಾಲ ಎಂ.ವಿ.ನೆಗಳೂರ, ಪುರಸಭಾ ಮಾಜಿ ಸದಸ್ಯ ಎನ್.ಎಸ್.ಮೂರ್ತಿ, ಖಡಾಂಚಿ ರಂಗನಾಥ್, ಶಿಕ್ಷಕರಾದ ರಂಗಸ್ವಾಮಿ, ಪುಟ್ಟಯ್ಯ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

