ನಿರಂತರ ವಿದ್ಯುತ್ ಸರಬರಾಜಿಗೆ ಚಾಲನೆ
ಹೊಸಕೋಟೆ : ಪಟ್ಟಣದಲ್ಲಿ ಕುಡಿಯುವ ನೀರಿನ ಸರಬರಾಜಿಗೆ ಪುರಸಭೆ ದೊಡ್ಡಕೆರೆಯಲ್ಲಿ ಹೊಂದಿರುವ ಕೊಳವೆಬಾವಿಗಳಿಗೆ ನಿರಂತರ ವಿದ್ಯುತ್ ಕಲ್ಪಿಸುವ ವ್ಯವಸ್ಥೆಗೆ ಶಾಸಕ ಎನ್.ನಾಗರಾಜ್ ಅವರು ಚಾಲನೆ ನೀಡಿದರು. ನಂತರ ಅವರು ಮಾತನಾಡಿ, 63ಲಕ್ಷ ರು.ವೆಚ್ಚದಲ್ಲಿ 11 ಕೆ.ವಿ.ಸಾಮರ್ಥ್ಯದ ಎಬಿಸಿ ಕೇಬಲ್ಗಳನ್ನು ಅಳವಡಿಸಿದ್ದು ಪ್ರತ್ಯೇಕ ಫೀಡರ್ ಸಹ ಒದಗಿಸಲಾಗಿದೆ. ಇದರಿಂದಾಗಿ 24 ಗಂಟೆಗಳೂ ತಡೆರಹಿತ ವಿದ್ಯುತ್ ಸರಬರಾಜಾಗಲಿದೆ. ಈ ವ್ಯವಸ್ಥೆ ಕಲ್ಪಿಸಿರುವುದರಿಂದ ವಿದ್ಯುತ್ ನಿಲುಗಡೆಯಿಂದಾಗಿ ಕೊಳವೆಬಾವಿಯಿಂದ ನೀರು ಶೇಖರಣಾ ತೊಟ್ಟಿಗೆ ನೀರು ಹಾಯಿಸುವಲ್ಲಿ ಉಂಟಾಗುತ್ತಿದ್ದ ಸಮಸ್ಯೆ ಪರಿಹಾರಗೊಂಡಂತಾಗಿದೆ. ಈ ವ್ಯವಸ್ಥೆಯನ್ನು ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆ ಹಾಗೂ ನ್ಯಾಯಾಲಯಕ್ಕೂ ಒದಗಿಸಲಾಗಿದೆ ಎಂದರು. ಬೆಸ್ಕಾಂನ ಎಇಇ ಕಾಂತರೆಡ್ಡಿ ಅವರು ಮಾತನಾಡಿ, ಕೇಬಲ್ಗಳನ್ನು ಈಗಾಗಲೇ ಅಳವಡಿಸಿದ್ದು ಸಂಪರ್ಕ ಕಲ್ಪಿಸುವ ಕೆಲಸ ಬಾಕಿ ಉಳಿದಿದ್ದು ಕಾಮಗಾರಿ 2-3ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದರು. ಬೆಸ್ಕಾಂ ಎಇ ಪುಟ್ಟಸ್ವಾಮಿ ಹಾಗೂ ಸಿಬ್ಬಂದಿ,ಪುರಸಭೆ ಸದಸ್ಯರುಗಳು ಹಾಗೂ ಮುಖಂಡರುಗಳು ಭಾಗವಹಿಸಿದ್ದರು.
ಏಡ್ಸ್ ಸೋಂಕಿತರ ಬಗ್ಗೆ ಕಾಳಜಿ ಅಗತ್ಯ
ಹೊಸಕೋಟೆ: ಏಡ್ಸ್ ಸೋಂಕಿತರ ಬಗ್ಗೆ ಸಾರ್ವಜನಿಕರು ನಿರ್ಲಕ್ಷ್ಯ ಧೋರಣೆ ತಳೆಯದೆ ಕಾಳಜಿ ವಹಿಸಬೇಕಾದ್ದು ಅವಶ್ಯವಾಗಿದೆ ಎಂದು ಪಟ್ಟಣದ ಮಿಷನ್ ಆಸ್ಪತ್ರೆಯ ಏಡ್ಸ್ ಸಮಾಲೋಚನಾ ಕೇಂದ್ರದ ಮುಖ್ಯಸ್ಥೆ ಡಾ.ನಿರ್ಮಲ ಹೇಳಿದರು. ಅವರು ಗ್ರೇಸ್ ಮಕ್ಕಳ ಅಭಿವೃದ್ಧಿ ಕೇಂದ್ರದ ವತಿಯಿಂದ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿದರು. ಮಾರಕ ರೋಗವಾಗಿರುವ ಏಡ್ಸ್ ಬಗ್ಗೆ ಸೂಕ್ತ ತಿಳಿವಳಿಕೆಯ ಕೊರತೆಯಿಂದಾಗಿ ಇಂದು ವಿಶ್ವದಾದ್ಯಂತ ರೋಗಕ್ಕೆ ಒಳಪಡುತ್ತಿರುವುದು ಹೆಚ್ಚಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸರಕಾರೇತರ ಸಂಘ ಸಂಸ್ಥೆಗಳ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ಏಡ್ಸ್ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಲು ಶ್ರಮಿಸಬೇಕು ಎಂದರು. ಮಿಷನ್ ಆಸ್ಪತ್ರೆಯ ಮುಖ್ಯಸ್ಥ ಫಾದರ್ ಪಿ.ವಿ.ಫಿಲಿಪ್ ಮಾತನಾಡಿ, ಏಡ್ಸ್ ಸೋಂಕಿತರಿಗೆ ಸಮಾಲೋಚನಾ ಕೇಂದ್ರ ಪ್ರಾರಂಭಿಸಿದ್ದು ಶೂನ್ಯಕ್ಕೆ ತರುವ ಗುರಿ ಯಶಸ್ವಿಗೊಳಿಸಲು ಸಹಕರಿಬೇಕು ಎಂದರು.
ವ್ಯಕ್ತಿ ಆತ್ಮಹತ್ಯೆ
ನೆಲಮಂಗಲ: ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಭಿನ್ನಮಂಗಲ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದವನನ್ನು ನಾರಾಯಣಸ್ವಾಮಿ (27) ಎಂದು ಗುರುತಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

