ಬೆಂಗಳೂರು ಗ್ರಾಮಾಂತರ

ಲಯನ್ಸ್ ಕ್ಲಬ್ನಿಂದ ಯಶಸ್ವಿ 190ನೇ ಕಣ್ಣಿನ ಚಿಕಿತ್ಸಾ ಶಿಬಿರ

Published On :

ದೊಡ್ಡಬಳ್ಳಾಪುರ: ಇಲ್ಲಿನ ಲಯನ್ಸ್ ಕ್ಲಬ್ ನೇತೃತ್ವದಲ್ಲಿ 190ನೇ ಮಾಸಿಕ ಉಚಿತ ಕಣ್ಣಿನ ಪರೀಕ್ಷೆ, ಶಸ್ತ್ರಚಿಕಿತ್ಸೆ ಮೂಲಕ ಐಓಎಲ್ ಅಳವಡಿಕೆ ಶಿಬಿರ ಸೋಮವಾರ ಲಯನ್ಸ್ ಭವನದಲ್ಲಿ ನಡೆಯಿತು. ಪುಷ್ಪಾಂಡಜಮುನಿ ಆಶ್ರಮದ ಶ್ರೀದಿವ್ಯಜ್ಞಾನಾನಂದಸ್ವಾಮೀಜಿ ಶಿಬಿರವನ್ನು ಉದ್ಘಾಟಿಸಿದರು. ಅವರು ಮಾತನಾಡಿ ಮನುಷ್ಯನ ಆಂತರ್ಯದ ಭಾವನೆಗಳನ್ನು ಪ್ರಚೋದಿಸುವ ನೋಟ ಯಾವತ್ತೂ ಪಾರದರ್ಶಕವಾಗಿರಬೇಕು. ಈ ಹಂತದಲ್ಲಿ ಮನುಷ್ಯನಿಗೆ ಮಹತ್ವದ ಅಂಗವೆನಿಸಿರುವುದು ಕಣ್ಣು. ದೃಷ್ಟಿದಾನದ ಮೂಲಕ ಜಗತ್ತಿನ ದಿಗ್ದರ್ಶನ ಮಾಡಿಸುವ ಮಹತ್ವದ ಕೆಲಸವನ್ನು ಲಯನ್ಸ್ ಕ್ಲಬ್ ಮಾಡುತ್ತಿದೆ. 190 ಯಶಸ್ವಿ ಶಿಬಿರಗಳನ್ನು ಆಯೋಜಿಸುವ ಮೂಲಕ ಸಹಸ್ರಾರು ಮಂದಿಗೆ ದೃಷ್ಟಿದಾನ ಮಾಡಿರುವ ಲಯನ್ಸ್ ಅಭಿನಂದನಾರ್ಹ ಎಂದರು. ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿಯ ವ್ಯವಸ್ಥಾಪಕ ಎಂಜಿನಿಯರ್ ಎಸ್. ಸುಂದರರಾಜ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಎಸ್. ಪ್ರಕಾಶ್ ಮತ್ತು ಕುಟುಂಬ ಶಿಬಿರವನ್ನು ಪ್ರಾಯೋಜಿಸಿತ್ತು. ಒಟ್ಟು 42 ಮಂದಿ ಐಓಎಲ್ ಚಿಕಿತ್ಸೆಗೆ ಆಯ್ಕೆಯಾದರು. ಲಯನ್ಸ್ ಕ್ಲಬ್ ಅಧ್ಯಕ್ಷ ಆರ್.ವಿ. ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು. ಲಯನೆಸ್ ಕ್ಲಬ್, ಅಕ್ಷಿ ಜೋಡಣಾ ಸಂಸ್ಥೆ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆಗಳು ಸಹಯೋಗ ನೀಡಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.