'ಹಿಂದುಳಿದವರಿಗೆ ಸಹಾಯಹಸ್ತ ಚಾಚಿದಾಗ ಸಮಾನತೆ ಸಾಧ್ಯ'
ನೆಲಮಂಗಲ: ಪ್ರತಿಯೊಬ್ಬರು ತಾವು ದುಡಿದಂತಹ ಹಣದಲ್ಲಿ ತಮ್ಮ ಕುಟುಂಬವನ್ನು ಪೋಷಿಸಿ ಸಮಾಜದಲ್ಲಿ ಹಿಂದುಳಿದವರಿಗೆ ಸಹಾಯಹಸ್ತ ಚಾಚಿದಾಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಿ ಸಮಾನತೆ ಕಾಣಬಹುದಾಗಿದೆ ಎಂದು ಸಿದ್ದಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಹೇಳಿದರು.
ಅವರು ಸೋಮವಾರ ತಾಲೂಕಿನ ಹಳೇನಿಜಗಲ್ ಗ್ರಾಮದಲ್ಲಿ ಅಷ್ಟಲಕ್ಷ್ಮೀ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಕಾರ್ತಿಕ ಮಾಸದ ವಿಶೇಷ ಕಾರ್ಯಕ್ರಮ ಹಾಗೂ 7ನೇ ವಾರ್ಷಿಕೋತ್ಸವದ ವಿಶೇಷ ಪೂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ದೇಹ ದಣಿಸದೇ ರಾತ್ರೋರಾತ್ರಿ ಶ್ರೀಮಂತರಾಗ ಬಯಸುವವರ ಸಂಖ್ಯೆ ಹೆಚ್ಚುತ್ತಿದ್ದು, ದೇಶದ ಕಾನೂನು ಮತ್ತು ಸಮಾಜದ ನೀತಿ ರೀತಿಗಳನ್ನು ಗಾಳಿಗೆ ತೂರಿ ಹಣ, ಅಧಿಕಾರ, ಆಸ್ತಿ ಗಳಿಸಲು ಹೋಗುವುದು ಮನುಷ್ಯತ್ವವಲ್ಲ ಎಂದರು.
ಜಿಮ್ನಾಸ್ಟಿಕ್ ನೃತ್ಯವನ್ನು ಮಾ. ಅದಿತ್ ನಡೆಸಿಕೊಟ್ಟರೆ ಕುಮಾರಿ ಶ್ರೇಯ ಭಕ್ತಿ ಗೀತೆಯನ್ನು, ಕುಮಾರಿ ಬಿ.ವಿ.ಮಾನಸಿ ನೃತ್ಯವನ್ನು ಮಾಡುವ ಮೂಲಕ ರಂಜಿಸಿದರು. ಶ್ರೀ ಶಾಂತ ಜೈರಾಮ್ ಮಾ.ಸಾಕೇತ್, ಕೀ ಬೋರ್ಡ್ ಗಾಯನ, ಮಾ. ಅನಿರುದ್ ನಡೆಸಿಕೊಟ್ಟರು. ಅಕಾಂಕ್ಷ ಬಾದಾಮಿ, ಪಂಚಂ ಹಳಿಬಂಡಿ, ರಾಜೀವ್ ಗೀತಾ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ನಗೆ ಹಬ್ಬ ಕಾರ್ಯಕ್ರಮವನ್ನು ಗಂಗಾವತಿ ಪ್ರಾಣೇಶ್, ಬಸವರ್ಜ ಕಟ್ಟಿಮನಿ, ನರಸಿಂಹ ಜೋಷಿ ಹಾಗೂ ಹಣ ಭವಿಷ್ಯ ಕಾರ್ಯಕ್ರಮದ ಬಿ.ವಿ.ರುದ್ರಮೂರ್ತಿ, ಕಲ್ಮಡಿ ಮಠದ ಸ್ವಾಮೀಜಿ, ಸಂಸ್ಕೃತ ವಿದ್ವಾಂಸ ಶಿವನಂಜಯ್ಯ, ಕೆ.ಎ.ಎಸ್ ಅಧಿಕಾರಿ ವೀರೇಶ್, ಡಿ.ವೈ.ಎಸ್ಪಿ ಮಲ್ಲೇಶ್, ದಾಬಸ್ಪೇಟೆ ಆರಕ್ಷಕ ಉಪನಿರೀಕ್ಷಕ ಎಸ್.ರವಿ, ನವೀನ್ಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

