ಬೆಂಗಳೂರು ಗ್ರಾಮಾಂತರ

ಸಂಸ್ಕೃತಿ ಸಂಪ್ರದಾಯ ಪಾಲನೆಯಿಂದ ಧರ್ಮ ಜಾಗೃತಿ ನಡೆಯಲಿ

Published On :

ಕ.ಪ್ರ.ವಾರ್ತೆ  ಆನೇಕಲ್ಲು  ಡಿ.5
ಅಖಂಡ ಭಾರತವು ತನ್ನ ಆಧ್ಯಾತ್ಮಿಕ ಹಾಗೂ ದೈವಿಕ ಶಕ್ತಿಯಿಂದಾಗಿ ಜಗತ್ತಿನಲ್ಲಿಯೇ ಉಚ್ರಾಯ ಸ್ಥಿತಿಯಲ್ಲಿದೆ. ಭಾರತೀಯರು ಸಂಸ್ಕೃತಿ ಮತ್ತು ಸಂಪ್ರದಾಯಗಳ ಪಾಲನೆಗಳ ಮೂಲಕ ಭವ್ಯ ಇತಿಹಾಸವನ್ನು ಹೊಂದಿದ್ದಾರೆ ಎಂದು ಸುತ್ತೂರು ಮಠದ ಶ್ರೀ ದೇಶಿಕೇಂದ್ರ ಸ್ವಾಮಿಯವರು ತಿಳಿಸಿದ್ದಾರೆ.
ಅವರು ತಾಲೂಕಿನ ರಾಜಾಪುರ ಮಠದಲ್ಲಿ ಏರ್ಪಡಿಸಿದ್ದ  ಜನ ಜಾಗೃತಿ ಧರ್ಮ ಸಮಾವೇಸದಲ್ಲಿ ಅಶೀರ್ವಚನ ನೀಡಿ ಮಾತನಾಡಿ  ನಮ್ಮ ಸಂಸ್ಕೃತಿಗೆ ವೇದಗಳ ಕಾಲದ ಭವ್ಯ ಅಡಿಪಾಯವಿದೆ. ವೇದ. ವೇದ ವಿಜ್ಞಾನ, ವೇದ ಗಣಿತ ದಂತಹ ಅಮೂಲ್ಯ ಶಿಕ್ಷಣ ಸಂಪತ್ತು ದೇವನಾಗರಿ ಭಾಷೆಯಾದ ಸಂಸ್ಕೃತ ಭಾಷೆಯಲ್ಲಿರುವುದರಿಂದ ಭಾರತೀಯ ಪ್ರತಿಭೆಗಳು ಸಂಸ್ಕೃತವನ್ನು ಕಡ್ಡಾಯ ಕಲಿಯುವುದರ ಮೂಲಕ ನಮ್ಮ ಭವ್ಯ ಪರಂಪರೆಯನ್ನು ಎತ್ತಿ ಹಿಡಿಯಬೇಕಿದೆ ಎಂದರು. ಇಂದಿನ ಯುವ ಪೀಳಿಗೆ ದೇಶ ವಿದೇಶಗಳಲ್ಲಿ ನೆಲೆಸುವ ಮೂಲಕ ಅಲ್ಲಿನ ಧರ್ಮೀಯರನ್ನು ನೋಡಿ ನಮ್ಮ ಧರ್ಮದ ಮೂಲ ತಿರುಳನ್ನು ಅರಿಯಲು ಪ್ರಯತ್ನಿಸುತ್ತಿದ್ದಾರೆ. ಇದು ಶ್ಲಾಘನೀಯ ಕಾಯಕ. ಭಾರತದಲ್ಲಿ ನೆಲೆಸಿರುವ ಎಲ್ಲರೂ ವೇದಗಳ ಪಠಣ ಮೂಲಕ ಕಲಿತು ಇತರರಿಗೂ ಕಲಿಸುವ ಪ್ರಯತ್ನ ಮಾಡಬೇಕಿದೆ. ವಿಶ್ವವೂ ಹೋಗುತ್ತಿರುವ ವೇಗದಲ್ಲಿ ವಿಜ್ಞಾನವೂ ಹೋಗಬೇಕಿದೆ ಎಂದರು.
ರಾಜಾಪುರ ಮಠದ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ರಾಜ್ಯದಲ್ಲಿ ವೀರಶೈವ ಮಠಗಳು ತನ್ನ ಭಕ್ತ ಕೋಟಿಗೆ ವಿದ್ಯೆ ಶಿಕ್ಷಣ ನೀಡುವ ಮೂಲಕ ಬದುಕು ಕಟ್ಟಿಕೊಳ್ಳಲು ಮಾರ್ಗದರ್ಶನ ನೀಡಿದೆ. ಸಮಾಜದಲ್ಲಿನ ಕ್ಷೋಭೆ ನಿವಾರಣೆಯಾಗಿ ಭ್ರಾತೃತ್ವ, ಭಾವೈಕ್ಯತೆ ಮೂಡಿ ಸಂಮೃದ್ಧಿ ನೆಲೆಸಲು ಸಹಸ್ರ ಚಂಡಿಕಾ ಯಾಗ ಹಾಗೂ 108 ಪೂಜ್ಯರ ಮಂಟಪ ಪೂಜಾ ಮಹೋತ್ಸವ ನಡೆಸಲಾಗಿದೆ. ಲೋಕಕಲ್ಯಾಣಾರ್ಥ ನಡೆಸುವ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಸಾರ್ಥಕತೆ ಪಡೆಯಬಹುದಾಗಿದೆ ಎಂದರು. ಜಿಎಂಆರ್ ಎಲೈಟ್ ಅಕಾಡೆಮಿಯ ಮುನಿರಾಜು, ವೀರಶೈವ ಮಹಾವೇದಿಕೆಯ ಯುವ ರಾಜ್ಯಾಧ್ಯಕ್ಷ ತೇಜಸ್, ಹಾರಗದ್ದೆ ಗ್ರಾಪಂ ಅಧ್ಯಕ್ಷ ನಟರಾಜು, ವೀರಭದ್ರಸ್ವಾಮಿ ಟ್ರಸ್ಟ್ ಅಧ್ಯಕ್ಷ ನಂಜಪ್ಪ, ಹಾವೆ ವೆಂಕಟೇಶ್ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.