ಬೆಂಗಳೂರು ಗ್ರಾಮಾಂತರ

ಪಿಲ್ಲಗುಂಪೆ ಬಳಿ ರು. 60 ಲಕ್ಷ ಬೆಲೆ ಸಿಗರೇಟ್ ಪ್ಯಾಕ್‌ಗಳ ದರೋಡೆ

Published On :

ಕ.ಪ್ರ. ವಾರ್ತೆ  ಸೂಲಿಬೆಲೆ  ಡಿ. 8
ಸೂಲಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದಲ್ಲಿನ ಐಟಿಸಿ ಸಿಗರೇಟ್ ಕಂಪನಿಯಿಂದ ಕ್ಯಾಂಟರ್ ವಾಹನದಲ್ಲಿ ಸರಬರಾಜಾಗುತ್ತಿದ್ದ ಸುಮಾರು 60 ಲಕ್ಷದಷ್ಟು ಬೆಲೆ ಬಾಳುವ ಸಿಗರೇಟ್ ಪ್ಯಾಕ್‌ಗಳನ್ನು ಕ್ಯಾಂಟರ್ ವಾಹನ ಸಮೇತ ನಾಲ್ವರು ದುಷ್ಕರ್ಮಿಗಳು ದರೋಡೆ ಮಾಡಿರುವ ಘಟನೆ ನಡೆದಿದೆ.
ಕೈಗಾರಿಕಾ ಪ್ರದೇಶದಲ್ಲಿರುವ ಸಿಗರೇಟ್ ಕಂಪನಿಯಿಂದ ಡಿ.6 ರಂದು ರಾತ್ರಿ ಸುಮಾರು 94 ಬಾಕ್ಸ್ ಹಾಗೂ 99 ಬಿಡಿ ಸಿಗರೇಟ್ ಪ್ಯಾಕೆಟ್‌ಗಳನ್ನು ಕ್ಯಾಂಟರ್ ವಾಹನಕ್ಕೆ ತುಂಬಿಸಿ ಇಡಲಾಗಿತ್ತು.ಈ ಮಾಲು ಮರು ದಿನ ಡಿ.7 ರಂದು ಬೆಂಗಳೂರಿನ ಜಯನಗರದ ಎಂ.ವಿ ಅಸೋಸಿಯೇಟ್ ಕಂಪನಿಗೆ ತೆಗೆದುಕೊಂಡು ಹೋಗಬೇಕಿತ್ತು.ಇದರಂತೆ ಡಿ.7 ರಂದು ಕಂಪನಿಯ ಗೋಡೌನ್‌ನಿಂದ ಹೋರಟ ಕ್ಯಾಂಟರ್ ವಾಹನ ಹೊಸಕೋಟೆ, ಜಂಗಮಕೋಟೆ ರಸ್ತೆಯಲ್ಲಿ ಹೋಗುತ್ತಿರುವಾಗ ಹಿಂದಿನಿಂದ ಟಾಟಾ ಇಂಡಿಕಾ ಕಾರಿನಲ್ಲಿ ಬಂದ ನಾಲ್ವರು ಕ್ಯಾಂಟರ್ ವಾಹನವನ್ನು ಓವರ್‌ಟೇಕ್ ಮಾಡಿ ಅಡ್ಡಲಾಗಿ ನಿಲ್ಲಿಸಿದರು.ಇದರಲ್ಲಿ ಒಬ್ಬಾತ ಇಳಿದು ಬಂದು ಜಗಳ ತೆಗೆದು ಚಾಲಕನ ಕೈಯಲ್ಲಿದ್ದ ಮೊಬೈಲ್ ಕಿತ್ತುಕೊಂಡು ಕಾರಿಗೆ ಹತ್ತಿಸಿಕೊಳ್ಳಲಾಯಿತು. ಕಾರಿನಲ್ಲಿ
ಮತ್ತೊಬ್ಬ ಕ್ಯಾಂಟರ್ ವಾಹನವನ್ನು ಚಲಾಯಿಸಿಕೊಂಡು ಹೊಸಕೋಟೆ, ನಾಗವಾರ, ಯಲಹಂಕದ ಮಾರ್ಗವಾಗಿ ಚಿಕ್ಕಬಳ್ಳಾಪುರಕ್ಕೆ ಕಡೆ ಕರೆದುಕೊಂಡು ಹೋದ. ವಿದ್ಯಾರಣ್ಯಪುರ ಬಳಿ ಊಟ ತರುತ್ತೇವೆ ಎಂದು ಹೇಳಿ ನನ್ನನ್ನು ಕಾರಿನಿಂದ ಇಳಿಸಿ ಪರಾರಿಯಾಗಿದ್ದಾರೆ ಎಂದು ಕ್ಯಾಂಟರ್ ವಾಹನ ಚಾಲಕ ಶ್ರೀನಿವಾಸ ಸೂಲಿಬೆಲೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಕ್ಯಾಂಟರ್ ವಾಹನದಲ್ಲಿ 60 ಲಕ್ಷದ ಸಿಗರೇಟ್ ಮಾಲು, ಕ್ಯಾಂಟರ್ ವಾಹನ  3.50 ಲಕ್ಷ ಬೆಲೆ ಬಾಳುವದ್ದಾಗಿದ್ದು, ಒಟ್ಟು 63.50 ಲಕ್ಷ ರು.ದರೋಡೆಕೋರರ ಪಾಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸ್ಥಳಕ್ಕೆ ಡಿಎಸ್ಪಿ ಬಲರಾಮೇಗೌಡ, ಸಿಪಿಐ ತಿಮ್ಮಯ್ಯ, ಪಿಎಸ್‌ಐ ಸಂದೀಪ್ ಕೌರಿ ಭೇಟಿ ನೀಡಿ ಪರಿಶೀಲನೆ ನಡೆಸಿ ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ್ದಾರೆ. ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.