ಬೊಂಬೆನಗರದ ಬಣ್ಣಗೆಟ್ಟ ರಸ್ತೆಗಳಿಗೆ ಕೊನೆಗೂ ಮುಕ್ತಿ
-ಸು.ನಾ.ನಂದಕುಮಾರ್
ಕ.ಪ್ರ.ವಾರ್ತೆ ಚನ್ನಪಟ್ಟಣ ಡಿ. 11
ಬೊಂಬೆನಗರದ ಬಣ್ಣಗೆಟ್ಟ ರಸ್ತೆಗಳಿಗೆ ಕೊನೆಗೂ ಮುಕ್ತಿ ನೀಡಲು ಮುಂದಾಗಿರುವ ನಗರಸಭೆ, ಮನೆ, ವಾಣಿಜ್ಯ ಮಳಿಗೆಗಳಿಗೆ ಯುಜಿಡಿ ಸಂಪರ್ಕ ಕಲ್ಪಿಸಲು ಮುಂದಾಗಿದೆ.
ನಗರೋತ್ಥಾನ ನಿಧಿ ಹಾಗೂ ಮುಖ್ಯ ಮಂತ್ರಿಗಳ ನಗರಾಭಿವಣದ್ಧಿ ಯೋಜನೆಯಡಿ ಪಟ್ಟಣದ ಅಭಿವೃದ್ಧಿ ಕಾರ್ಯಗಳಿಗಾಗಿ ಬಿಡುಗಡೆ ಗೊಂಡಿರುವ 20 ಕೋಟಿ ರೂ. ಅನುದಾನದಲ್ಲಿ ಪಟ್ಟಣದ ಸಮಗ್ರ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ನಗರಸಭೆ ಕೈಗೆತ್ತಿ ಕೊಂಡಿದೆ. ರಸ್ತೆ ಡಾಂಬರಿಕರಣ ಮುಗಿದ ಬಳಿಕ ಯುಜಿಡಿ ಸಂಪರ್ಕಕ್ಕಾಗಿ ಮತ್ತೆ ರಸ್ತೆ ಅಗೆಯುವುದು ಬೇಡ ಎಂಬ ಕಾರಣಕ್ಕೆ ರಸ್ತೆ ದುರಸ್ಥಿಯಾಗುವ ಮುನ್ನವೇ ಸಂಪರ್ಕ ಪಡೆಡು ಕೊಳ್ಳುವಂತೆ ನಗರಸಭೆ ಸೂಚಿಸಿದೆ.
ತಡಮಾಡಿದರೆ ದಂಡಣರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುವುದರೊಳಗೆ ಎಲ್ಲಾ ಮನೆ ಮತ್ತು ವಾಣಿಜ್ಯ ಮಳಿಗೆಯವರು ಯುಜಿಡಿ ಸಂಪರ್ಕ ಪಡೆಯದಿದ್ದಲ್ಲಿ ಸಾಕಷ್ಟು ದಂಡ ತೆರಬೇಕಾಗುತ್ತದೆ ಎಂದು ನಗರಸಭೆ ಸೂಚಿಸಿದೆ. ರಸ್ತೆ ನಿರ್ಮಾಣ ವಾದ ಬಳಿಕ ಸಂಪರ್ಕ ಪಡೆಯಲು ಮುಂದಾಗುವ ಮನೆ ಮಾಲೀಕರಿಗೆ ರಸ್ತೆ ದುರಸ್ಥಿ ವೆಚ್ಚ, ಹೆಚ್ಚುವರಿ ಶುಲ್ಕ ಮತ್ತು ದಂಡ ವಿಧಿಸಲಾಗುವುದೆಂದು ಪೌರಾಯುಕ್ತರು ಸ್ಪಷ್ಟಪಡಿಸಿದ್ದಾರೆ.
ರಸ್ತೆ ದುರಸ್ಥಿಯಾದ ಬಳಿಕ ನಗರಸಭೆ ಗಮನಕ್ಕೆ ಬಾರದಂತೆ ರಸ್ತೆ ಅಗೆದು ಯುಜಿಡಿ ಸೇರಿದಂತೆ ಇನ್ಯಾವುದೇ ಸಂಪರ್ಕ ಪಡೆದರೂ ಪೌರಸಭೆಗಳ ಅಧಿನಿಯಮದ ಪ್ರಕಾರ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿರುವ ನಗರಸಭೆ, ಯುಜಿಡಿ ಸಂಪರ್ಕ ಕಲ್ಪಿಸುವ ಕಾರ್ಯ ಪೂರ್ಣ ಗೊಂಡ ಬಳಿಕ ರಸ್ತೆ ಅಭಿವಣದ್ಧಿ ಕಾಮಗಾರಿ ಕೈಗೆತ್ತಿ ಕೊಳ್ಳುವುದಾಗಿ ತಿಳಿಸಿದ್ದಾರೆ.
ಸಂಪರ್ಕ ಪಡೆದರೂ ಪ್ರಯೋಜನ ವಿಲ್ಲ: ರಸ್ತೆ ದುರಸ್ಥಿ ಕಾರಣವನ್ನು ಮುಂದುಮಾಡಿ ಸಂಪರ್ಕ ಕಲ್ಪಿಸಲು ನಗರಸಭೆ ಮುಂದಾಗಿದೆಯಾದರೂ, ಯುಜಿಡಿ ಮುಖ್ಯ ಕೊಳವೆಗೆ ಮನೆಯಿಂದ ಪೈಪ್‌ಲೈನ್ ಹಾಕಿಸಿದ ಯುಜಿಡಿ ಸೇವೆಗೆ ಲಭ್ಯ ಎಂದು ಕೊಳ್ಳುವಂತಿಲ್ಲ. ಯಾಕೆಂದರೆ ಯುಜಿಡಿ ಕಾಮಗಾರಿ ಇನ್ನೂ ಪೂರ್ಣ ಗೊಂಡಿಲ್ಲವಾಗಿದ್ದು, ಈಗ ಕೇವಲ ಮನೆಯವರಗೆ ಯುಜಿಡಿ ಪೈಪ್ ಹಾಕಿ ಬಿಡುತ್ತಿದ್ದು ಕಾಮಗಾರಿ ಮುಗಿದ ಬಳಿಕ ಮಾತ್ರ ಸಂಪರ್ಕ ಕಲ್ಪಿಸುವುದು.
ಯುಜಿಡಿಗಾಗಿ ಪಟ್ಟಣದ ತುಂಬು ಪೈಪ್ ಹೂತಿರುವ ನಗರಸಭೆ ಒಳಚರಂಡಿ ನೀರನ್ನು ಎಲ್ಲಿಗೆ ಬಿಡುವುದು ಎಂಬುದನ್ನು ಇನ್ನೂ ನಿರ್ಧರಿಸದಿದ್ದ, ಇದಕ್ಕಾಗಿ ವೆಟ್‌ವೆಲ್ ನಿರ್ಮಿಸಲು ಜಾಗ ಹುಡುಕಾಟದಲ್ಲಿದೆ. ಇನ್ನೂ ಜಾಗ ಸಿಗದಕಾರಣ ಯುಜಿಡಿ ಕಾಮಗಾರಿ ಪೂರ್ಣ ಗೊಂಡಿಲ್ಲ.
ಪ್ರತಿ ಸಂಪರ್ಕಕ್ಕೆ ದುಪ್ಪಟ್ಟು ಹಣ ವಸೂಲಿ
ಯುಜಿಡಿ ಸಂಪರ್ಕ ಪಡೆಯುವಂತೆ ತಿಳಿಸಿರುವ ನಗರಸಭೆ ಅಧಿಕಾರಿಗಳು, ಯಾರಿಂದ ಪಡೆಯ ಬೇಕು, ಎಷ್ಟು ಹಣ ನೀಡ ಬೇಕು ಎಂಬುದನ್ನು ಸ್ಪಷ್ಟಪಡಿಸಿಲ್ಲ. ಆದರೆ ಗುತ್ತಿಗೆ ಪಡೆದಿರುವುದಾಗಿ ಹೇಳಿ ಕೊಂಡು ಪಟ್ಟಣದಾದ್ಯಂತ ಸಂಪರ್ಕ ಕಲ್ಪಿಸುತ್ತಿರುವ ಗುತ್ತಿಗೆದಾರರು ನಾವೇ ನಗರಸಭೆ ನಿಯೋಜಿಸಿರುವ ಅಧಿಕೃತ ವ್ಯಕ್ತಿ ಎಂದು ಪ್ರತಿ ಸಂಪರ್ಕಕ್ಕೆ 1000 ದಿಂದ 1500 ರು. ನಷ್ಟು ಹಣ ಪಡೆಯುತ್ತಿದ್ದಾರೆ. ಮನೆಯ ಮಾಲೀಕರು ಬೇರೆ ದಾರಿ ಇಲ್ಲದೆ ಇವರು ಹೇಳಿದಷ್ಟು ಹಣ ನೀಡಿ ಸಂಪರ್ಕ ಪಡೆಯುತ್ತಿದ್ದಾರೆ. ಇವರಿಗೆ ನೀಡುವ ಹಣದ ಜತೆಗೆ ಪೈಪ್ ಹಾಗೂ ಇನ್ನಿತರ ಅಗತ್ಯ ಸಾಮಗ್ರಿಗಳನ್ನು ತಂದು ಕೊಡ ಬೇಕಿದ್ದು ಪ್ರತಿ ಸಂಪರ್ಕಕ್ಕೆ 1600 ರಿಂದ 2000 ರೂ ವರೆಗೆ ಖರ್ಚಾಗುತ್ತಿದೆ. ಆದರೆ ನಗರಸಭೆ ಅಧಿಕಾರಿಗಳು ಏನೂ ಕಾಣದಂತೆ ಮೌನವಾಗಿದ್ದಾರೆ.
ಪಟ್ಟಣದಲ್ಲಿ ರಸ್ತೆ ದುರಸ್ಥಿ ಕಾರ್ಯ ಕೈಗೊಳ್ಳ ಬೇಕಿರುವುದರಿಂದ ತತ್ವರಿತವಾಗಿ ಸಂಪರ್ಕ ಪಡೆಯುವಂತೆ ತಿಳಿಸಲಾಗಿದೆ. ನಗರಸಭೆ ಯಾವುದೇ ಶುಲ್ಕ ವಿಧಿಸಿಲ್ಲ, ಸಂಪರ್ಕ ಪಡೆಯಬೇಕಿರುವ ಮನೆಯವರು ಸ್ವಂತ ಖರ್ಚಿನಲ್ಲಿ ಶ್ರಮಿಕರ ಕೂಲಿ ಪಾವತಿಸಿ ಸಂಪರ್ಕ ಪಡೆಯಬಹುದಾಗಿದ್ದು ನಗರಸಭೆ ಯಾರಿಗೂ ಈ ಸಂಬಂಧ ಗುತ್ತಿಗೆ ನೀಡಿಲ್ಲ.
-ಭಗವಾನ್, ಸಹಾಯಕ ಕಾರ್ಯಪಾಲಕ ಅಭಿಯಂತರ ನಗರಸಭೆ.
ಸಂಸದರು ಮುಟ್ಟಿಸಿದ ಬಿಸಿ
ಬೊಂಬೆನಗರದ ಎಲ್ಲಾ ರಸ್ತೆಗಳು ಸಂಚಾರ ಯೋಗ್ಯವಲ್ಲದಿರುವ ಸಂಗತಿಯನ್ನು ಮನಗಂಡ ಸಂಸದ ಡಿ.ಕೆ.ಸುರೇಶ್ ಇತ್ತೀಚಿಗೆ ನಗರಸಭೆ ಅಧಿಕಾರಿಗಳು ಮತ್ತು ನೂತನ ಸದಸ್ಯರ ಸಭೆಕರೆದು ರಸ್ತೆ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಕೈಗೊಳ್ಳುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ನಗರಸಭೆ ಚುರುಕು ಗೊಂಡಿದೆ. ಯುಜಿಡಿ ಪೈಪ್‌ಣಲೈನನ್ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಮೂರು ವರ್ಷಗಳೇ ಮುಗಿದಿದೆ ಯಾದರೂ ನಗರಸಭೆ ಅಧಿಕಾರಿಗಳು ಸಂಪರ್ಕ ಕಲ್ಪಿಸುವುದನ್ನೇ ಮುಂದು ಮಾಡಿ ಕೊಂಡು ಇದುವರೆಗೆ ಮೀನಾಮೇಷ ಏಣಿಸುತ್ತಿದ್ದರು, ಕೊನೆಗೂ ಸಂಸದರು ಚುರುಕು ಮೂಡಿಸಿದ ಬಳಿಕ ಅಧಿಕಾರಿಗಳು ರಸ್ತೆ ಕಾಮಗಾರಿಯತ್ತ ಮನಸ್ಸು ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

