ಸಂಘದ ಹಣ ಲೂಟಿ ಮಾಡಿರುವವರನ್ನು ಕ್ಷೇತ್ರಕ್ಕೆ ಸೇರಿಸಬೇಡಿ
ಮಾಗಡಿ: ಒಕ್ಕಲಿಗ ಮತದಾರರೇ, ಸಂಘದ ಹಣ ಲೂಟಿ ಮಾಡಿರುವವರನ್ನು ಕ್ಷೇತ್ರಕ್ಕೆ ಸೇರಿಸಬಾರದು ಎಂದು ರಾಜ್ಯ ಒಕ್ಕಲಿಗರ ಸಂಘ ಮಾಜಿ ಸಹಕಾರ್ಯದರ್ಶಿ ಆ. ದೇವೇಗೌಡ ಸಲಹೆ ನೀಡಿದರು.
ಅವರು ತಾಲೂಕಿನ ಜುಟ್ಟನಹಳ್ಳಿ ಬಳಿ ಬುಧವಾರ ಏರ್ಪಡಿಸಿದ್ದ 2014 ರ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಯ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಾ ಸಮಿತಿ ಒಪ್ಪಿಗೆ ಪಡೆಯದೆ ಆದಿಚಂಚನಗಿರಿ ಶ್ರೀಗಳರ ಗುರುವಂದನೆ ಹೆಸರಿನಲ್ಲಿ ಕೆಲವರು ಹಣ ನುಂಗಿದ್ದಾನೆ. ಈಗ ಉಪಜಾತಿಗಳು ಎಂಬ ತಾರತಮ್ಯ ಮಾಡುತ್ತಾ ಜಾತಿ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಮುಂಬರುವ 2014 ರ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಸಂಘದ ಹಿತದೃಷ್ಟಿಯಿಂದ ಪ್ರಾಮಾಣಿಕರಾಗಿ ಹಗಲಿರಳು ದುಡಿಯುತ್ತಿರುವ ಡಾ. ಅಪ್ಪಾಜಿಗೌಡ ಅವರ ತಂಡವನ್ನು ಒಕ್ಕಲಿಗ ಮತದಾರರು ಬೆಂಬಲಿಸಿ ಮೊದಲ ಪ್ರಾಶಸ್ಥ್ಯ ನೀಡುವ ಮೂಲಕ ಗೆಲ್ಲಿಸುವಂತೆ ಮನವಿ ಮಾಡಿ ಕೋರಿದರು.
ಡಾ. ಅಪ್ಪಾಜಿಗೌಡ ಮಾತನಾಡಿ ಇತಿಹಾಸ ಹೊಂದಿರುವ ಒಕ್ಕಲಿಗರ ಸಂಘವು ಮೆಡಿಕಲ್, ಎಂಜಿನಿಯರಿಂಗ್ ಕಾಲೇಜು ಸೇರಿದಂತೆ ಒಟ್ಟು 21 ವಿದ್ಯಾ ಸಂಸ್ಥೆಗಳನ್ನು ಹೊಂದಿದೆ. ಸುಮಾರು 8 ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.್ದ 500ಕ್ಕೂ ಹೆಚ್ಚು ವಿದ್ಯಾ ಸಂಸ್ಥೆಗಳನ್ನು, 10 ಸಾವಿರ ಮಕ್ಕಳಿಗೆ ಹಾಸ್ಟೆಲ್ ವ್ಯವಸ್ಥೆ ಮಾಡುವ ಸಂಕಲ್ಪ ನಮ್ಮ ತಂಡ ಹೊಂದಿದೆ. ಈ ನಿಟ್ಟಿನಲ್ಲಿ ಒಕ್ಕಲಿಗ ಮತದಾರರು ನನ್ನ ಸಿಂಡಿಕೇಟ್ ಅನ್ನು ಬೆಂಬಲಿಸಿ ಎಂದು ಡಾ. ಅಪ್ಪಾಜಿಗೌಡ ಕರೆ ನೀಡಿದರು.
ಅಭ್ಯರ್ಥಿಯಾಗಿರುವ ತಾಲೂಕಿನ ಪೂಜಾರಿಪಾಳ್ಯದ ಕೆ.ಕೃಷ್ಣಮೂರ್ತಿ ಮಾತನಾಡಿ ಪ್ರಾಮಾಣಿಕ ಸೇವಾ ಮನೋಭಾವವುಳ್ಳ ಡಾ. ಅಪ್ಪಾಜಿಗೌಡ ತಂಡದಲ್ಲಿದ್ದೇನೆ. ನಿಮ್ಮೆಲ್ಲರ ಪ್ರೀತಿ ಸಹಕಾರ ಹಾಗೂ ಪ್ರೋತ್ಸಾಹದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಸ್ವಾರ್ಥ ಇಲ್ಲ, ಸೇವಾಮನೋಭಾವವೇ ನನ್ನ ಧ್ಯೇಯ, ನನ್ನನ್ನು ಬಹುಮತದಿಂದ ಗೆಲ್ಲಿಸಿದರೆ ತಾಲೂಕಿಗೆ ಹೆಚ್ಚು ಪ್ರಾಮುಖ್ಯತೆ ನೀಡುವುದಾಗಿ ತಿಳಿಸಿದರು.
ಬಿಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ ಎಚ್.ಎನ್. ಅಶೋಕ್ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಡಾ.ಅಪ್ಪಾಜಿಗೌಡ ತಂಡದ ಎಂ.ವಿ. ಆನಂದ್, ಬಿ.ವಿ.ರಮೇಶ್, ಬಿ. ಮೋಹನ್ ಕುಮಾರ್, ಟಿ.ಎಸ್. ಚಿಕ್ಕರಾಮಕೃಷ್ಣ, ಎಚ್.ಸಿ. ಜಯಮುತ್ತು, ಶಿವಣ್ಣೇಗೌಡ ಸಂಪಂಗಿರಾಮಯ್ಯ, ಡಿ.ಸಿ.ಕೆ. ಕಾಳೇಗೌಡ, ಮಲ್ಲಿಕಾರ್ಜುನೇಗೌಡ, ಸಮಾಜ ಸೇವಕ ಸತೀಶ್, ಧನಂಜಯ, ಬಮೂಲ್ ನಿರ್ದೇಶಕ ನರಸಿಂಹಮೂರ್ತಿ, ಜಿ.ಪಂ. ಸದಸ್ಯ ಧನಂಜಯ, ಎಂ. ರೇವಣ್ಣ, ಎಂ.ಆರ್. ಮಂಜುನಾಥ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

