ಬೆಂಗಳೂರು ಗ್ರಾಮಾಂತರ

ಗಾಲಿ ಚಲನಚಿತ್ರ 20ರಂದು ಬಿಡುಗಡೆ

Published On :

ಕ.ಪ್ರ.ವಾರ್ತೆ  ರಾಮನಗರ  ಡಿ.12
ಕಾಮಿಡಿ, ಆಕ್ಷನ್, ಸೆಂಟಿಮೆಂಟ್, ಲವ್ ಹೀಗೆ ವಿಶಿಷ್ಟ ಕಥಾವಸ್ತುವನ್ನು ಒಳಗೊಂಡ ಗಾಲಿ ಚಲನಚಿತ್ರ ಡಿ.20ರಂದು ಬಿಡುಗಡೆಯಾಗಲಿದ್ದು, ಯಶಸ್ಸಿನ ನಿರೀಕ್ಷೆ ಹೊಂದಿರುವುದಾಗಿ ಚಿತ್ರದ ನಾಯಕ ಜೀವನ್ ಮತ್ತು ನಾಯಕಿ ರೂಪ ನಟರಾಜ್ ವಿಶ್ವಾಸ ವ್ಯಕ್ತಪಡಿಸಿದರು.  
ಗಾಲಿಯೊಂದಿಗೆ ತಾವಿಬ್ಬರೂ ಬೆಳ್ಳಿ ಪರದೆ ಮೇಲೆ ಮೂಡಿಬರುತ್ತಿದ್ದು, ಅಪಾರ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೇವೆ. ಡಬಲ್ ಮೀನಿಂಗ್ ಇದ್ದಾಗ್ಯೂ ತಮ್ಮ ಚೊಚ್ಚಲ ಚಿತ್ರ ಇಡೀ ಕುಟುಂಬ ಒಟ್ಟಿಗೆ ಕುಳಿತು ನೋಡಲು ಯೋಗ್ಯವಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಂಗಳೂರು, ರಾಮನಗರ ಮತ್ತು ಸಕಲೇಶಪುರದಲ್ಲಿ ಚಿತ್ರದ ಬಹುಪಾಲು ಚಿತ್ರೀಕರಣ ನಡೆದಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಅದ್ಧೂರಿಯಾಗಿ ಮೂಡಿರುವ ಈ ಚಿತ್ರ ಬಿಡುಗಡೆಗೆ 80ಕ್ಕೂ ಹೆಚ್ಚು ಚಿತ್ರ ಮಂದಿರಗಳು ಮುಂದೆ ಬಂದಿವೆ ಎಂದರು.
ಹಳ್ಳಿಯಿಂದ ಬದುಕು ಕಟ್ಟಿಕೊಳ್ಳಲು ನಗರಕ್ಕೆ ಬರುವ ನಾಯಕನ ಜೀವನದಲ್ಲಿ ಬರುವ ನಾನಾ ತಿರುವುಗಳು, ಆತನ ಗುರಿ ಸಾಧನೆಗೆ ಪ್ರೇರಣೆಯಾಗಿ ನಿಲ್ಲುವ ನಾಯಕಿಯ ಪಾತ್ರ ತುಂಬಾ ಚೆನ್ನಾಗಿಯೇ ಮೂಡಿ ಬಂದಿದೆ. ಖಂಡಿತ ಇದು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಲಿದೆ ಎಂದು ಹೇಳಿದರು.
ಇದುವರೆಗೆ ತೆರೆ ಹಿಂದೆ ಕೆಲಸ ಮಾಡಿದ್ದ ನನಗೆ ಬೆಳ್ಳಿ ತೆರೆಯಲ್ಲಿ ಮೂಡಲು ಸಿಕ್ಕ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡಿದ್ದೇನೆ ಎಂದು ಹಾಸನ ಮೂಲದ ನಾಯಕ ನಟ ಜೀವನ್ ತಿಳಿಸಿದರೆ, ಡಬಲ್ ಮೀನಿಂಗ್ ಕಾರಣಕ್ಕೆ ಮೊದ ಮೊದಲು ಪಾತ್ರ ಒಪ್ಪಲು ಮುಜುಗರವಾಗಿತ್ತು. ಚಿತ್ರದ ಪೂರ್ಣ ಕಥೆ ಕೇಳಿದ ನಂತರ ಖುಷಿಯಾಗಿ ಒಪ್ಪಿಕೊಂಡೆ ಎಂದು ನಾಯಕಿ ರೂಪ ಮನಬಿಚ್ಚಿ ಹೇಳಿದ್ದಾರೆ.
ಲಕ್ಕಿ ನಿರ್ದೇಶನದಲ್ಲಿ ಯೋಗೇಶ್ ಈ ಚಿತ್ರ ನಿರ್ಮಿಸಿದ್ದಾರೆ. ರಾಮನಗರದವರೇ ಆದ ಆರ್.ಶಿವರಾಜ್ ಈ ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ. ಇಡೀ ಚಿತ್ರ ತಂಡ ತಮ್ಮಿಬ್ಬರಿಗೂ ಪೂರ್ಣ ಸಹಕಾರ ನೀಡಿದೆ ಎಂದು ಜೀವನ್ ಮತ್ತು ರೂಪ ಮುಕ್ತಕಂಠದಿಂದ ಪ್ರಶಂಸಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.