ಬೆಂಗಳೂರು ಗ್ರಾಮಾಂತರ

'ಪೊಲೀಸರಿಗೆ ನಾಗರಿಕರು ಸಹಕರಿಸಲಿ'

Published On :

ಚನ್ನಪಟ್ಟಣ: ನಾಗರಿಕರ ರಕ್ಷಣೆಗಾಗಿ ಪೊಲೀಸ್ ಇಲಾಖೆ ಅಹೋರಾತ್ರಿ ಕೆಲಸ ನಿರ್ವಹಿಸುತ್ತಿದ್ದು, ಜನತೆ ಪೊಲೀಸರಿಗೆ ಸಹಕರಿಸುವ ಮೂಲಕ ಶಾಂತಿ ಸುವ್ಯವಸ್ಥೆ ಕಾಪಾಡಲು ಕೈಜೋಡಿಸಬೇಕೆಂದು ಎಎಸ್ಪಿ ಕುಲದೀಪ್‌ಕುಮಾರ್‌ಜೈನ್ ಕಿವಿಮಾತು ಹೇಳಿದರು.  ಪಟ್ಟಣದ ಎಂ.ಜಿ ರಸ್ತೆಯಲ್ಲಿ ಪೊಲೀಸ್ ಠಾಣೆಯನ್ನು ಪುನರಾರಂಭಿಸಿ ಮಾತನಾಡಿದರು.
ಕಾರಣಾಂತರಗಳಿಂದ ಮುಚ್ಚಲಾಗಿದ್ದ ಎಂ.ಜಿ ರಸ್ತೆಯ ಪುರ ಪೊಲೀಸ್ ಠಾಣೆಯನ್ನು ಇದೀಗ ಮತ್ತೆ ಆರಂಭಿಸಿದ್ದು, ಸಾರ್ವಜನಿಕರು ದಿನದ 24 ತಾಸುಗಳ ಕಾಲ ಈ ಸೇವೆಯನ್ನು ಸದ್ಬಳಕೆ ಮಾಡಿ ಕೊಳ್ಳಬಹುದಾಗಿದೆ. ಎಂ.ಜಿ ರಸ್ತೆಯಲ್ಲಿ ಯಾವುದೇ ಸಮಸ್ಯೆ ಎದುರಾದಲ್ಲಿ ತಕ್ಷಣ ಠಾಣೆಗೆ ಸುದ್ದಿ ಮುಟ್ಟಿಸಬಹುದು ಎಂದು ತಿಳಿಸಿದರು.
ಆಟೋ ಚಾಲಕರಿಗೆ ಡಿಸ್‌ಪ್ಲೇ ಕಾರ್ಡ್: ಪಟ್ಟಣ ವ್ಯಾಪ್ತಿಯ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಆಟೋಚಾಲಕರಿಗೆ ಡಿಸ್‌ಪ್ಲೇ ಕಾರ್ಡ್ ವಿತರಿಸಲಾಗುತ್ತಿದ್ದು ಇದರಿಂದಾಗಿ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಆಟೋ ಸಂಖ್ಯೆ, ಚಾಲಕರ ನೋಂದಣಿ ಸಂಖ್ಯೆ, ಚಾಲಕರ ವಿವರ, ಸ್ಥಳೀಯ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ ಸೇರಿದಂತೆ ಅಗತ್ಯಮಾಹಿತಿಗಳನ್ನು ಈ ಕಾರ್ಡ್‌ನಲ್ಲಿ ನಮೂದಿಸಲಾಗಿದ್ದು ಇದರಿಂದಾಗಿ ಆಟೋ ಚಾಲಕರಲ್ಲಿ ಶಿಸ್ತು ಮೂಡಲಿದೆ ಎಂದರು.
ವೃತ್ತ ನಿರೀಕ್ಷಕ ನಾಗರಾಜು, ಪಿಎಸ್‌ಐಗಳಾದ ಜಗದೀಶ್, ವಿಜಯ್‌ಕುಮಾರ್, ಶ್ರೀನಿವಾಸ್, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.