ಉನ್ನತ ವ್ಯಾಸಂಗಕ್ಕೆ ಮಹತ್ವ ನೀಡಿ
ಕ.ಪ್ರ. ವಾರ್ತೆ , ಆನೇಕಲ್ಲು , ಡಿ.14
ಜಾಗತಿಕ ಪ್ರಪಂಚದಲ್ಲಿ ಪ್ರತಿ ಹಂತದಲ್ಲಯೂ ಸ್ಪರ್ಧೆಗಳು ಕಂಡು ಬರುತ್ತಿದ್ದು ಶಿಕ್ಷಣ ಕ್ಷೇತ್ರದಲ್ಲೂ ಅದರ ಬಿಸಿ ಏರುಮುಖದಲ್ಲಿದೆ. ಸರ್ಕಾರ ಹಾಗೂ ಖಾಸಗೀ ವಿದ್ಯಾಸಂಸ್ಥೆಗಳು ಉನ್ನತ ಶಿಕ್ಷಣದಲ್ಲಿ ಗುಣ ಮಟ್ಟದ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಜಾಗತಿಕ ಸ್ಪರ್ಧೆಗೆ ಸಜ್ಜುಗೊಳಿಸಬೇಕೆಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ತಿಳಿಸಿದ್ದಾರೆ.
ಅವರು ಆನೇಕಲ್ಲಿನ ಅಲಯನ್ಸ್ ವಿಶ್ವ ವಿದ್ಯಾನಿಲಯದ ಘಟಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಭಾರತ ದೇಶದಲ್ಲಿ ಪ್ರತಿಭಾನ್ವಿತ ಮಾನವ ಸಂಪನ್ಮೂಲವಿದ್ದು ಅದರ ಸದುಪಯೋಗಕ್ಕೆ ಉತ್ತಮ ವೇದಿಕೆ ಒದಗಿಸಬೇಕಿದೆ ಎಂದರು.
ವಿದ್ಯಾವಂತ ಸಮುದಾಯದ ಉತ್ಪಾದನೆಯಿಂದ ಸಮಾಜಕ್ಕೆ ಉಪಯುಕ್ತವಾಗುವ ಹಲವಾರು ವಿಷಯಗಳಿರುತ್ತವೆ. ಕಾರ್ಖಾನೆ ಉತ್ಪಾನೆಯಿಂದ ಕೆಲವರಿಗೆ ಮಾತ್ರ ಲಾಭ ಸಿಗುತ್ತದೆ. ಇಂದಿನ ದಿನದಲ್ಲಿ ಹಲವಾರು ಹೊಸ ವಿಷಯಗಳು ಅಧ್ಯಯನಕ್ಕೆ ಆಹಾರವಾಗಿದ್ದು ಆಸಕ್ತಿ ತಣಿಸುವ ವಿಷಯಗಳ ಆಯ್ಕೆ ಇದೆ. ವ್ಯಾಸಂಗ ಉತ್ತುಂಗ ಶಿಖರಕ್ಕೆ ತಲುಪಲು ವಿದ್ಯಾರ್ಥಿಗಳ ತಮ್ಮ ಚಿಂತನೆ ಹರಿಸಬೇಕೆಂದರು.
ಉಪಯುಕ್ತ: ತಾವು ಕೇಂದ್ರದ ಕಾನೂನು ಮಂತ್ರಿಯಾಗಿದ್ದಾಗ ದೇಶಾದ್ಯಂತ 23ಕ್ಕೂ ಹೆಚ್ಚು ರಾಷ್ಟ್ರೀಯ ಕಾನೂನು ಕಾಲೇಜುಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಿದ್ದು ಇಂದಿನ ಅವಶ್ಯಕತೆಯನ್ನು ತೀರಿಸಲು ಉಪಯುಕ್ತವಾಗಿದೆ ಎಂದು ನೆನಪಿಸಿಕೊಂಡರು.
ಕುಲಪತಿ ಮಧುಕರ್ ಅಂಗೂರ್ ಮಾತನಾಡಿ ಅಲಯನ್ಸ್ ವಿಶ್ವ ವಿದ್ಯಾಲಯ ಉನ್ನತ ಶಿಕ್ಷಣ, ತಾಂತ್ರಿಕ ಶಿಕ್ಷಣ ಹಾಗೂ ವ್ಯಾವಹಾರಿಕ ಶಿಕ್ಷಣ ನೀಡುವುದಕ್ಕೆ ಆದ್ಯತೆ ನೀಡುತ್ತಿದ್ದು ಶ್ರೇಷ್ಠ ವಿದ್ಯಾರ್ಥಿಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡುತ್ತಿರುವುದು ಸಂತಸವಾಗಿದೆ. ಮುಂದಿನ ದಿನಗಳಲ್ಲಿ ಶಿಕ್ಷಣದ ವಿಶೇಷ ವಿಷಯಗಳ ಪರಿಚಯ ಹಾಗೂ ಶ್ರೇಷ್ಠ ಪರಿಣಿತರಿಂದ ವಿದ್ಯಾದಾನ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದರು. ಉನ್ನತ ಪದವಿ ವ್ಯಾಸಂಗ ಮಾಡಿದ್ದ ನೂರಾರು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಶಾಸಕ ಶಿವಣ್ಣ, ಉಪ ಕುಲಪತಿ ಡಾ. ಅಯ್ಯಪ್ಪ, ಜಿಪಂ ಸದಸ್ಯ ಪ್ರಭಾಕರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

