ಸಮಯಪ್ರಜ್ಞೆ, ಬಾಲಕಿ ವಿವಾಹ ರದ್ದು
ಕನಕಪುರ: ಅಪ್ರಾಪ್ತ ವಯಸ್ಸಿನ ಬಾಲಕಿಗೆ ವಿವಾಹ ಬಂಧನಕ್ಕೆ ಸಿಲುಕಿಸಲು ಪಾಲಕರು ಏರ್ಪಡಿಸಿದ್ದ ನಿಶ್ಚಿತಾರ್ಥ ಸಮಾರಂಭ ಸಾರ್ವಜನಿಕರ ಸಮಯಪ್ರಜ್ಞೆಯಿಂದ ನಿಂತಿರುವ ಘಟನೆ ಕನಕಪುರ ತಾಲೂಕಿನ ಗಟ್ಟಿಗುಂದ ಗ್ರಾಮದಲ್ಲಿ ನಡೆದಿದೆ.
ಕೋಡಿಹಳ್ಳಿ ಹೋಬಳಿಯ ಗಟ್ಟಿಗುಂದ ಗ್ರಾಮದಲ್ಲಿ 15 ವರ್ಷ ವಯಸ್ಸಿನ ಬಾಲಕಿಯನ್ನು ಆಕೆಯ ಪೋಷಕರಾದ ಶಂಭಯ್ಯ ದಂಪತಿ 40 ವರ್ಷದ ವಿಧುರನಿಗೆ ಕೊಟ್ಟು ವಿವಾಹ ನಡೆಸಲು ನಿಶ್ಚಿತಾರ್ಥ ಏರ್ಪಡಿಸಿದ್ದರು. ಈ ಸಂಗತಿ ತಿಳಿದ ಪತ್ರಕರ್ತರೊಬ್ಬರು ತಕ್ಷಣವೇ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಿಗೆ ದೂರನ್ನಿತ್ತು ಅಪ್ರಾಪ್ತೆಯ ವಿವಾಹ ನಿಲ್ಲಿಸಲು ಕೋರಿದರು. ತಕ್ಷಣವೇ ಪ್ರತಿಕ್ರಿಯಿಸಿದ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು ಕನಕಪುರದ ಸಿಡಿಪಿಓ ಬಸವರಾಜು ಅವರಿಗೆ ಸ್ಥಳಕ್ಕೆ ತೆರಳಿ ನಿಶ್ಚಿತಾರ್ಥ ನಿಲ್ಲಿಸಿ ಪೋಷಕರು ಹಾಗೂ ವರನಿಗೆ ನೊಟೀಸ್ಜಾರಿ ಮಾಡುವಂತೆ ಆದೇಶಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಬಸವರಾಜು ಹಾಗೂ ಸಹಾಯ ಟ್ರಸ್ಟ್ ಪ್ರತಿನಿಧಿ ಸುನೀತಾ ಜೊತೆಗೂಡಿ ಗಟ್ಟಿಗುಂದ ಗ್ರಾಮಕ್ಕೆ ತೆರಳಿ ಅಪ್ರಾಪ್ತ ವಯಸ್ಸಿನ ಬಾಲಕಿಯ ವಿವಾಹಕ್ಕೆ ಪ್ರಯತ್ನಿಸುವುದು ಶಿಕ್ಷಾರ್ಹ ಅಪರಾಧ ಎಂಬುದನ್ನು ಮನವರಿಕೆ ಮಾಡಿಕೊಟ್ಟು, ಮದುವೆಯಾಗಲು ತಯಾರಾಗಿ ನಿಂತಿದ್ದ ಮುನಿರಾಜುವಿಗೆ ನೊಟೀಸ್ಜಾರಿ ಮಾಡಿ ಎಚ್ಚರಿಸಿದ್ದಾರೆ. ಸದರಿ ಪ್ರಕರಣದ ಬಗ್ಗೆ ಕೋಡಿಹಳ್ಳಿ ಠಾಣೆಯಲ್ಲಿ ದೂರನ್ನು ದಾಖಲಿಸಲಾಗಿದೆ.
ವಿಧುರ ಮುನಿರಾಜು ಹೆಂಡತಿ ಕೆಲವು ವರ್ಷಗಳ ಹಿಂದೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಮೂರು ಮಂದಿ ಮಕ್ಕಳಿದ್ದಾರೆ. ಹಿರಿಯ ಮಗ ಎಸ್ಎಸ್ಎಲ್ಸಿ ಓದುತ್ತಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

